ಮುಂಬೈ: ಭಾರತೀಯ ಜನತಾ ಪಕ್ಷದ (BJP) ಹಿರಿಯ ನಾಯಕ ಮತ್ತು ಮಾಜಿ ಲೋಕಸಭಾ ಸದಸ್ಯ ಕಿರೀಟ್ ಸೋಮಯ್ಯ (Kirit Somaiya) ಅವರನ್ನು ಸೋಮವಾರ ಮುಂಜಾನೆ ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಕರಾಡ್ ರೈಲ್ವೇ ನಿಲ್ದಾಣದಲ್ಲಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು ಅಲ್ಲಿಂದ ಸರ್ಕ್ಯೂಟ್ ಹೌಸ್‌ಗೆ ಕರೆದೊಯ್ಯಲಾಯಿತು. ಸೋಮಯ್ಯ ಕೊಲ್ಹಾಪುರಕ್ಕೆ ಹೋಗುತ್ತಿದ್ದರು. ಮಹಾರಾಷ್ಟ್ರ ಸಚಿವ ಹಸನ್ ಮುಶ್ರಿಫ್ ಅವರ ವಿರುದ್ಧ ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಭದ್ರತಾ ಕಾರಣಗಳಿಗಾಗಿ ಜಿಲ್ಲಾ ಅಧಿಕಾರಿಗಳು ಸೋಮಯ್ಯ ಅವರಿಗೆ ಪ್ರವೇಶವನ್ನು ನಿಷೇಧಿಸಿದ್ದಾರೆ.
ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಿದ ಸೋಮಯ್ಯ ಅವರು “ನಿಷೇಧಿತ ಆದೇಶದ ಅಡಿಯಲ್ಲಿ ಪೊಲೀಸರು ನನ್ನನ್ನು ಕರಾಡ್‌ನಲ್ಲಿ ತಡೆದರು. ಕರಡ್ ಸರ್ಕ್ಯೂಟ್ ಹೌಸ್ ನಲ್ಲಿ ಬೆಳಿಗ್ಗೆ 9 ಗಂಟೆಗೆ ಪತ್ರಿಕಾಗೋಷ್ಠಿ ಇದೆ. ನಾನು ಹಾಸನ್ ಮುಶ್ರಿಫ್ ಅವರ ಮತ್ತೊಂದು ಹಗರಣವನ್ನು ನಾನು ಬಹಿರಂಗಪಡಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
Police stopped Me at Karad under Prohibitory order 9am Press Conference at Karad Circuit House I will expose 1 more scam of Hassan Mushrif
पोलिसांनी मला निषेधाच्या आदेशान्वये कराडल थांबवले 9 वाजता कराड सर्किट हाऊसला मी पत्रकार परिषदेत हसन मुश्रीफ यांचा आणखी एक घोटाळा उघड करणारं
— Kirit Somaiya (@KiritSomaiya) September 20, 2021
ಜಿಲ್ಲಾ ಪೊಲೀಸ್ ತಂಡವು ಕರಾಡ್ ತಲುಪಿತು. ಸೋಮಯ್ಯ ಅವರನ್ನು ಅಲ್ಲಿನ ರೈಲ್ವೇ ನಿಲ್ದಾಣದಲ್ಲಿ ತಡೆ ಹಿಡಿದು ನಿಷೇಧಿತ ಆದೇಶದ ಪ್ರತಿಯನ್ನು ನೀಡಿದೆವು. “ಸೋಮಯ್ಯ ಜಿಲ್ಲೆಗೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ ಎಂದು ನಾವು ಹೇಳಿದ ನಂತರ, ಅವರು ಸಹಕರಿಸಿದರು ಮತ್ತು ಈಗ ಕರಾಡ್‌ನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ನಂತರ ಅವರು ಹಿಂತಿರುಗುತ್ತಾರೆ” ಎಂದು ಕೊಲ್ಹಾಪುರ ಪೊಲೀಸ್ ವರಿಷ್ಠಾಧಿಕಾರಿ ಶೈಲೇಶ್ ಬಾಲ್ಕಾವ್ಡೆ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಕೆಲ ದಿನಗಳ ಹಿಂದೆ ಸೋಮಯ್ಯ ಅವರು ಗ್ರಾಮೀಣಾಭಿವೃದ್ಧಿ ಸಚಿವ ಮತ್ತು ಕೊಲ್ಹಾಪುರದ ಕಾಗಲ್‌ನ ಶಾಸಕ ಮುಶ್ರೀಫ್ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಮತ್ತು ಅವರ ಸಂಬಂಧಿಕರ ಹೆಸರಿನಲ್ಲಿ “ಬೇನಾಮಿ” ಘಟಕಗಳನ್ನು ಹೊಂದಿದ್ದಾರೆ ಎಂದು ಆರೋಪಿಸಿದ್ದರು. ಆದಾಗ್ಯೂ, ಮುಶ್ರಿಫ್ ಈ ಆರೋಪಗಳನ್ನು ತಳ್ಳಿಹಾಕಿದರು.
ಸೋಮಯ್ಯ ಅವರು ಸೆಪ್ಟೆಂಬರ್ 19 ರಂದು ಕೊಲ್ಹಾಪುರ ಜಿಲ್ಲಾಧಿಕಾರಿ ರಾಹುಲ್ ರೇಖಾವಾರ್ ಹೊರಡಿಸಿದ ಆದೇಶವನ್ನು ಪ್ರದರ್ಶಿಸಿದರು. ಅವರ ಭೇಟಿಯಿಂದಾಗಿ ಜೀವಕ್ಕೆ ಅಪಾಯ ಮತ್ತು ಕಾನೂನು-ಸುವ್ಯವಸ್ಥೆಯ ಹದಗೆಡುವ ದೃಷ್ಟಿಯಿಂದ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 144 ರ ಅಡಿಯಲ್ಲಿ ಜಿಲ್ಲೆಗೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ ಎಂದು ಹೇಳಿದ್ದಾರೆ.
#WATCH | Maharashtra: BJP leader Kirit Somaiya detained at Karad Railway Station in Satara district
Somaiya was expected to visit Kohlapur today. Kolhapur Dist Collector had issued prohibitory orders against him & imposed Section 144, prohibiting gatherings on September 20 & 21. pic.twitter.com/3fI42IU53y
— ANI (@ANI) September 19, 2021
ಗಣಪತಿ ವಿಸರ್ಜನೆಗೆ ಪೋಲಿಸರನ್ನು ನಿಯೋಜಿಸುತ್ತಿರುವುದರಿಂದ ಸೋಮಯ್ಯಗೆ ಭದ್ರತೆ ನೀಡಲು ಸಾಧ್ಯವಿಲ್ಲ ಎಂದು ಆದೇಶದಲ್ಲಿ ಹೇಳಲಾಗಿದೆ.
ಮುಂಬೈನ ನವಘರ್ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ಸುನೀಲ್ ಕಾಂಬ್ಳೆ ಕೂಡ ಕೊಲ್ಹಾಪುರ ಆಡಳಿತದ ಆದೇಶವನ್ನು ಪಾಲಿಸುವಂತೆ ಸೋಮಯ್ಯ ಅವರಿಗೆ ನೋಟಿಸ್ ನೀಡಿದರು. ಸೋಮಯ್ಯನ ಮುಲುಂಡ್ ನಿವಾಸವು ನವಘರ್ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುತ್ತದೆ.
ಸೋಮಯ್ಯ ಟ್ವೀಟ್ ನಲ್ಲಿ ಈ ಬೆಳವಣಿಗೆಯನ್ನು ಉದ್ಧವ್ ಠಾಕ್ರೆ ಸರ್ಕಾರದ “ದಾದಾಗಿರಿ” ಎಂದು ಕರೆದಿದ್ದರು.
ಏತನ್ಮಧ್ಯೆ, ಮಹಾರಾಷ್ಟ್ರ ಬಿಜೆಪಿ ಮುಖ್ಯಸ್ಥ ಚಂದ್ರಕಾಂತ್ ಪಾಟೀಲ್ ಈ ಕ್ರಮವನ್ನು “ಸರ್ವಾಧಿಕಾರಿ” ಎಂದು ಕರೆದರು. ಠಾಕ್ರೆ ಸರ್ಕಾರಕ್ಕೆ ಸೋಮಯ್ಯ ಅವರ ಧ್ವನಿಯನ್ನು ನಿಗ್ರಹಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು. ಬಿಜೆಪಿ ಮತ್ತು ಸೋಮಯ್ಯ ಈ ಭ್ರಷ್ಟಾಚಾರ ಪ್ರಕರಣಗಳನ್ನು ತಮ್ಮ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತಾರೆ ಎಂದು ಅವರು ಹೇಳಿದರು. ಮಹಾ ವಿಕಾಸ ಅಘಡಿ (ಎಂವಿಎ) ಸರ್ಕಾರವು “ಭ್ರಷ್ಟ” ಮಂತ್ರಿಗಳನ್ನು ಬಹಿರಂಗಪಡಿಸುವ ಸೋಮಯ್ಯನ ಧ್ವನಿಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ ಎಂದು ಪಾಟೀಲ್ ಹೇಳಿದರು.
ಮಾಜಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವಿಸ್ ಅವರು ಸೋಮಯ್ಯ ಅವರಿಗೆ ಬೆಂಬಲ ವ್ಯಕ್ತಪಡಿಸಿದರು ಮತ್ತು ಯಾವುದೇ ವಿವರಣೆಯಿಲ್ಲದೆ ಅವರನ್ನು ಬಂಧಿಸಲಾಗಿದೆ ಎಂದು ಹೇಳಿದರು.
“ಮಹಾರಾಷ್ಟ್ರವು ಅಘೋಷಿತ ತುರ್ತು ಪರಿಸ್ಥಿತಿಗೆ ಸಾಕ್ಷಿಯಾಗಿದೆ. ಮಹಾ ವಿಕಾಸ ಅಘಾಡಿ ಸರ್ಕಾರವು ಮಹಾರಾಷ್ಟ್ರದ ಆಡಳಿತವನ್ನು ತೆಗೆದುಕೊಂಡ ನಂತರ ಜನರು ಕಿರುಕುಳಕ್ಕೆ ಒಳಗಾಗುತ್ತಾರೆ. ಸರ್ಕಾರದ ತಪ್ಪು ನಿರ್ಧಾರವನ್ನು ಪ್ರಶ್ನಿಸುವ ಅಥವಾ ಭ್ರಷ್ಟಾಚಾರವನ್ನು ಸೂಚಿಸುವ ಯಾರನ್ನಾದರೂ ಬಂಧಿಸಿ ಜೈಲಿಗೆ ಹಾಕಲಾಗುತ್ತದೆ ಎಂದು ಅವರು ಹೇಳಿದರು.
ಇದನ್ನೂ ಓದಿ: Charanjit Singh Channi ಪಂಜಾಬ್ ಮುಖ್ಯಮಂತ್ರಿಯಾಗಿ ಚರಣ್‌ಜಿತ್ ಸಿಂಗ್ ಛನ್ನಿ ಪ್ರಮಾಣ ವಚನ ಸ್ವೀಕಾರ
ಇದನ್ನೂ ಓದಿ: ‘ಸಿಧು ನೇತೃತ್ವದಲ್ಲಿ ಪಂಜಾಬ್ ಚುನಾವಣೆ’ ಹರೀಶ್ ರಾವತ್ ಟ್ವೀಟ್ ಪ್ರಶ್ನಿಸಿದ ಕಾಂಗ್ರೆಸ್ ಹಿರಿಯ ನಾಯಕ ಸುನಿಲ್ ಜಾಖಡ್
(Ahead of Kolhapur visit Senior BJP leader Kirit Somaiya detained at Karad railway station)