ಪಶ್ಚಿಮ ಬಂಗಾಳ: ಲೋಕಸಭಾ ಚುನಾವಣಾ ಪ್ರಚಾರಕ್ಕೆ ಎಡಪಕ್ಷಗಳ ಎಐ ಆ್ಯಂಕರ್

|

Updated on: Mar 26, 2024 | 1:12 PM

ಪಶ್ಚಿಮ ಬಂಗಾಳದ ಸಿಪಿಐಎಂ ಈ ಹೊಸ ಆ್ಯಂಕರ್​​​ನ್ನು ಪರಿಚಯಿಸಿದ 27 ಸೆಕೆಂಡ್​​ಗಳ ಆ ವಿಡಿಯೊದಲ್ಲಿ 'ಸಮತಾ' ರಾಜ್ಯದ ಜನತೆಗೆ ಅಭಿನಂದನೆ ಸಲ್ಲಿಸುವುದರ ಜೊತೆಗೆ ರಾಜಕೀಯದ ಬಗ್ಗೆಯೂ ಮಾತನಾಡಿದೆ. ಇದು ವಿದ್ಯಾರ್ಥಿ ರಾಜಕೀಯದ ಬಗ್ಗೆ ಮಾತನಾಡಿದೆ. ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ಯುನೈಟೆಡ್ ಲೆಫ್ಟ್‌ ಗೆಲುವು ಸಾಧಿಸಿದ್ದನ್ನು ಸಮತಾ ಹೇಳಿದೆ.

ಪಶ್ಚಿಮ ಬಂಗಾಳ: ಲೋಕಸಭಾ ಚುನಾವಣಾ ಪ್ರಚಾರಕ್ಕೆ ಎಡಪಕ್ಷಗಳ ಎಐ ಆ್ಯಂಕರ್
ಎಐ ಆ್ಯಂಕರ್ ಸಮತಾ
Follow us on

ಕೊಲ್ಕತ್ತಾ ಮಾರ್ಚ್ 26: ಪಶ್ಚಿಮ ಬಂಗಾಳದಲ್ಲಿ (West Bengal) ಲೋಕಸಭೆ ಚುನಾವಣೆ (Lok Sabha Election)  ಪ್ರಚಾರಕ್ಕೆ ಎಡಪಕ್ಷಗಳು ಕೃತಕ ಬುದ್ಧಿಮತ್ತೆಯನ್ನು(AI) ಬಳಸಿಕೊಂಡಿವೆ. ಸಿಪಿಎಂ ಬಂಗಾಳದ ಚುನಾವಣಾ ಮಾರುಕಟ್ಟೆಗೆ ಕೃತಕ ಬುದ್ಧಿಮತ್ತೆ ಆಧಾರಿತ ‘ಸಮತಾ’ವನ್ನುತಂದಿದೆ. ‘ಸಮಾತಾ’ ಥೇಟ್ ಮಹಿಳೆಯಂತೆ ಕಾಣುತ್ತದೆ. ‘ಸಮತಾ’ ಅಂದರೆ ಬಂಗಾ CPM ನ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ನ ಹೊಸ ಮುಖ, AI-ಚಾಲಿತ ಆ್ಯಂಕರ್.

ಚುನಾವಣಾ ದಿನಾಂಕ  ಘೋಷಣೆಯ ಮುನ್ನಾದಿನದಂದು ಎಡಪಕ್ಷಗಳ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ನಲ್ಲಿ ‘ಸಮತಾ’ವನ್ನು ಮೊದಲು ಪರಿಚಯಿಸಲಾಯಿತು. 27 ಸೆಕೆಂಡುಗಳ ಮೊದಲ ಭಾಷಣದಲ್ಲಿ, ಎಡಪಕ್ಷದ ಕೃತಕ ಬುದ್ಧಿಮತ್ತೆಯ ಈ ಆಪರೇಟರ್ ಸಾಕಷ್ಟು ಪ್ರಭಾವ ಬೀರಿದೆ. ತನ್ನ ಚೊಚ್ಚಲ ಭಾಷಣದ ಮೊದಲ ಕೆಲವು ಗಂಟೆಗಳಲ್ಲಿ, ಎಡಪಂಥೀಯ ಈ ಹೊಸ AI ಆ್ಯಂಕರ್ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಸೃಷ್ಟಿಸಿತು. ಎಡಪಕ್ಷಗಳ ಸಾಮಾಜಿಕ ಹ್ಯಾಂಡಲ್‌ಗಳಲ್ಲಿ ಸಾಕಷ್ಟು ಪ್ರತಿಕ್ರಿಯೆಗಳು, ಕಾಮೆಂಟ್‌ಗಳು ಬಂದವು.

ಎಐ ಆ್ಯಂಕರ್


ಈ ಹೊಸ ಆ್ಯಂಕರ್​​​ನ್ನು ಪರಿಚಯಿಸಿದ 27 ಸೆಕೆಂಡ್ ಗಳ ಆ ವಿಡಿಯೊದಲ್ಲಿ ‘ಸಮತಾ’ ರಾಜ್ಯದ ಜನತೆಗೆ ಅಭಿನಂದನೆ ಸಲ್ಲಿಸುವುದರ ಜೊತೆಗೆ ರಾಜಕೀಯದ ಬಗ್ಗೆಯೂ ಮಾತನಾಡಿದೆ. ಇದು ವಿದ್ಯಾರ್ಥಿ ರಾಜಕೀಯದ ಬಗ್ಗೆ ಮಾತನಾಡಿದೆ. ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ಯುನೈಟೆಡ್ ಲೆಫ್ಟ್‌ ಗೆಲುವು ಸಾಧಿಸಿದ್ದನ್ನು ಸಮತಾ ಹೇಳಿದೆ. ಸ್ಪಷ್ಟ ಬಂಗಾಳಿ ಭಾಷೆಯಲ್ಲಿ ಮಾತನಾಡಿದ ಸಮತಾ, ‘ಈ ವರ್ಷದ ಹೋಳಿ ಹಬ್ಬಕ್ಕೆ ನಮ್ಮ ಉಡುಗೊರೆ ಜೆಎನ್​​ಯುನಲ್ಲಿ ಎಡ ಪಕ್ಷ ಗುಂಪುಗಳ ಗೆಲುವು ಎಂದು ಹೇಳಿದೆ. ಲೋಕಸಭ ಚುನಾವಣೆಗಾಗಿ ಪಾದಾರ್ಪಣೆ ಮಾಡಿದ ಎಡಪಕ್ಷಗಳ ಈ ಹೊಸ ಎಐ ಆ್ಯಂಕರ್ , ಈಗ ಬಂಗಾ ಸಿಪಿಎಂನ ಫೇಸ್‌ಬುಕ್ ಹ್ಯಾಂಡಲ್ ಮತ್ತು ಯೂಟ್ಯೂಬ್‌ ಚಾನೆಲ್ ನಲ್ಲಿ ಕಾಣಿಸುತ್ತಿದೆ.

ಲೋಕಸಭೆ ಚುನಾವಣೆಗೆ ಒಂದು ತಿಂಗಳಿಗಿಂತ ಕಡಿಮೆ ಸಮಯ ಉಳಿದಿದೆ. ಏಪ್ರಿಲ್ 19 ರಂದು ಮತದಾನ ಪ್ರಾರಂಭವಾಗುತ್ತದೆ. ಅದಕ್ಕೂ ಮುನ್ನ ಆಡಳಿತ ವಿರೋಧಿ ಪಕ್ಷಗಳೆಲ್ಲ ಬಿರುಸಿನ ಪ್ರಚಾರ ಆರಂಭಿಸಿವೆ. ಸಿಪಿಎಂ ಚುನಾವಣಾ ಕಣದಲ್ಲಿ ಯುವಕರತ್ತ ಹೆಚ್ಚಿನ ಗಮನ ಹರಿಸಿದೆ. ಸೃಜನ್, ದಿಪ್ಸಿತಾ, ಸೈಯನ್ನರನ್ನು ಮುಂದೆ ತರಲಾಗಿದೆ.

ಇದನ್ನೂ ಓದಿ: ಸಂದೇಶ್​ಖಾಲಿ ಸಂತ್ರಸ್ತೆಯನ್ನು ಕಣಕ್ಕಿಳಿಸಿದ ಬಿಜೆಪಿ, ಎಲ್ಲೆಡೆ ರೇಖಾ ವಿರೋಧಿ ಪೋಸ್ಟರ್​ಗಳು

ಈ ಬಾರಿ ಎಡಪಕ್ಷಗಳು ತಂತ್ರಜ್ಞಾನ ಆಧಾರಿತ ಅಭಿಯಾನಗಳಿಗೆ ಹೆಚ್ಚಿನ ಗಮನ ನೀಡುತ್ತಿವೆ. AI-ಆಧಾರಿತ ಆ್ಯಂಕರ್ ಗಳು ಮತದಾನದ ಮೊದಲು ಸಾಮಾಜಿಕ ಹ್ಯಾಂಡಲ್‌ಗಳಲ್ಲಿ ಪ್ರಚಾರವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಎಡಪಕ್ಷಗಳ ಈ ಹೊಸ ಕೃತಕ ಬುದ್ಧಿಮತ್ತೆ ಬಂಗಾಳದ ಜನರ ಮೇಲೆ ಎಷ್ಟು ಪ್ರಭಾವ ಬೀರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ