ನೀವು ರೈತರ ಹಿತಾಸಕ್ತಿಗಳ ಬಗ್ಗೆ ಯೋಚಿಸುತ್ತೀರಿ, ಬಿಜೆಪಿಯೂ ಸಹ: ಜಾಟ್ ನಾಯಕರನ್ನು ಭೇಟಿಯಾದ ಅಮಿತ್ ಶಾ

| Updated By: ರಶ್ಮಿ ಕಲ್ಲಕಟ್ಟ

Updated on: Jan 26, 2022 | 8:05 PM

ಮೂಲಗಳ ಪ್ರಕಾರ, ಅಮಿತ್ ಶಾ ಅವರು “ಜಾಟ್‌ಗಳು ತಮ್ಮ ಬಗ್ಗೆ ಯೋಚಿಸುವುದಿಲ್ಲ ಆದರೆ ಇತರರಿಗಾಗಿ, ಬಿಜೆಪಿ ರಾಷ್ಟ್ರಕ್ಕಾಗಿ ಯೋಚಿಸುವಂತೆಯೇ ಯೋಚಿಸುತ್ತಾರೆ. ಜಾಟ್‌ಗಳು ರೈತರ ಹಿತಾಸಕ್ತಿಗಳ ಬಗ್ಗೆ ಯೋಚಿಸುತ್ತಾರೆ. ಬಿಜೆಪಿ ಕೂಡ ಅದೇ ರೀತಿ ಯೋಚಿಸುತ್ತಿದೆ.

ನೀವು ರೈತರ ಹಿತಾಸಕ್ತಿಗಳ ಬಗ್ಗೆ ಯೋಚಿಸುತ್ತೀರಿ, ಬಿಜೆಪಿಯೂ ಸಹ: ಜಾಟ್ ನಾಯಕರನ್ನು ಭೇಟಿಯಾದ ಅಮಿತ್ ಶಾ
ಅಮಿತ್ ಶಾ
Follow us on

ದೆಹಲಿ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ (Uttar Pradesh Assembly election) ಮುನ್ನ ಬಿಜೆಪಿ ನಾಯಕ ಅಮಿತ್ ಶಾ (Amit Shah) ಬುಧವಾರ ಪಶ್ಚಿಮ ಉತ್ತರ ಪ್ರದೇಶದ ಜಾಟ್ ಸಮುದಾಯದ ನಾಯಕರನ್ನು ಭೇಟಿಯಾದರು.  ನವದೆಹಲಿಯಲ್ಲಿರುವ ಬಿಜೆಪಿ ಸಂಸದ ಪರ್ವೇಶ್ ವರ್ಮಾ ಅವರ ನಿವಾಸದಲ್ಲಿ ಈ ಸಭೆ ನಡೆದಿದೆ ಎಂದು ವರದಿಯಾಗಿದೆ. ಕೇಂದ್ರ ಸಚಿವ ಸಂಜೀವ್ ಬಲ್ಯಾನ್, ರಾಜ್ಯ ಸಚಿವ ಭೂಪೇಂದ್ರ ಚೌಧರಿ ಮತ್ತು ಇತರ ಹಿರಿಯ ನಾಯಕರು ಭಾಗವಹಿಸಿದ್ದರು. ಮೂಲಗಳ ಪ್ರಕಾರ, ಅಮಿತ್ ಶಾ ಅವರು “ಜಾಟ್‌ಗಳು ತಮ್ಮ ಬಗ್ಗೆ ಯೋಚಿಸುವುದಿಲ್ಲ ಆದರೆ ಇತರರಿಗಾಗಿ, ಬಿಜೆಪಿ ರಾಷ್ಟ್ರಕ್ಕಾಗಿ ಯೋಚಿಸುವಂತೆಯೇ ಯೋಚಿಸುತ್ತಾರೆ. ಜಾಟ್‌ಗಳು ರೈತರ ಹಿತಾಸಕ್ತಿಗಳ ಬಗ್ಗೆ ಯೋಚಿಸುತ್ತಾರೆ. ಬಿಜೆಪಿ ಕೂಡ ಅದೇ ರೀತಿ ಯೋಚಿಸುತ್ತಿದೆ. ಜಾಟ್‌ಗಳು ದೇಶದ ಭದ್ರತೆ ಮತ್ತು ಬಿಜೆಪಿಯ ಬಗ್ಗೆಯೂ ಯೋಚಿಸುತ್ತಾರೆ. ನಾವು ಕೆಲವೊಮ್ಮೆ ನಿಮ್ಮ ಮಾತನ್ನು ಕೇಳದಿದ್ದರೂ ನಾವು ಸಮೀಪಿಸಿದಾಗಲೆಲ್ಲಾ ಜಾಟ್ ಸಮುದಾಯವು ನಮಗೆ ಮತಗಳ ಸುರಿಮಳೆಗೈದಿದೆ ಎಂದಿದ್ದಾರೆ.  2020 ಮತ್ತು 2021ರಲ್ಲಿ ಕೇಂದ್ರದ ಮೂರು ಕೃಷಿ ಮಸೂದೆಗಳ ವಿರುದ್ಧ ವರ್ಷವಿಡೀ ರೈತರ ಪ್ರತಿಭಟನೆಗೆ ಜಾಟ್ ಸಮುದಾಯ ಬೆಂಬಲ ನೀಡಿತ್ತು. ಸಭೆಯ ನಂತರ ಅಲ್ಲಿ ಹಾಜರಿದ್ದವರು “ನಾವು ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರಿಗೆ ಭಾರತ ರತ್ನ, ಜಾಟ್‌ಗಳಿಗೆ ಮೀಸಲಾತಿ ಮತ್ತು ಕೇಂದ್ರ ಮತ್ತು ಯುಪಿ ಸರ್ಕಾರಗಳಲ್ಲಿ ಪ್ರಮಾಣಾನುಗುಣವಾದ ಪ್ರಾತಿನಿಧ್ಯವನ್ನು ಕೋರಿದ್ದೇವೆ. ಗೃಹ ಸಚಿವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ ಎಂದು ಹೇಳಿರುವುದಾಗಿ ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

‘ನಮಗೆ ಬೇಕು ಮೋದಿಯಂಥಾ ರಾಜ’: ಅಮಿತ್ ಶಾ

ನೀವು ಮೊಘಲರ ವಿರುದ್ಧ ಹೋರಾಡಿದ್ದೀರಿ, ನಾವೂ ಹೋರಾಡುತ್ತಿದ್ದೇವೆ ಎಂದು ಅಮಿತ್ ಶಾ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ನಾವು ಕೆಲವು ಕೆಲಸಗಳನ್ನು ಮಾಡಿದ್ದೇವೆ, ನಾನು ಅವುಗಳನ್ನು ವಿವರಿಸುತ್ತೇನೆ. ಮಹೇಂದ್ರ ಪ್ರತಾಪ್ ಸಿಂಗ್ ಅವರ ಗೌರವ ನಮಗೆ ಸಿಕ್ಕಿತು. ಸೈನಿಕರು ‘ಒನ್ ರ್ಯಾಂಕ್ ಒನ್ ಪೆನ್ಷನ್’ ಕೇಳಿದರು, ಕೊಟ್ಟಿದ್ದೇವೆ. ನಾವು ಮೂವರು ಜಾಟ್ ರಾಜ್ಯಪಾಲರು ಮತ್ತು ಒಂಬತ್ತು ಸಂಸದರನ್ನು ನೇಮಿಸಿದ್ದೇವೆ. ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿಯಿಂದಾಗಿ 40,000 ಜನರು ಸತ್ತರು, ಮೋದಿ ಅದನ್ನು ರದ್ದು ಮಾಡಿದರು.
“ಬಿಜೆಪಿ ನೇತೃತ್ವದ ಉತ್ತರ ಪ್ರದೇಶ ಸರ್ಕಾರವು 36,000 ಕೋಟಿ ರೂ.ಗೂ ಹೆಚ್ಚು ರೈತರ ಸಾಲವನ್ನು ಮನ್ನಾ ಮಾಡಿದೆ. ರೈತರ ಖಾತೆಗೆ ಹಣ ಹಾಕಲಾಗಿದೆ. ಏನಾದರೂ ತಪ್ಪಿದ್ದರೆ, ನಾವು ಅದನ್ನು ಸಹ ಮಾಡುತ್ತೇವೆ. ಬಿಜೆಪಿ ಮತ್ತು ಮೋದಿ ಹೊರತು ಪಡಿಸಿ ದೇಶವನ್ನು ರಕ್ಷಿಸುವವರು ಯಾರು? ಈ ರೀತಿಯ ರಾಜ ನಮಗೆ ಬೇಕು! ಎಂದು ಅಮಿತ್ ಶಾ ಹೇಳಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.

ರಾಹುಲ್ ವಿರುದ್ಧ ವಾಗ್ದಾಳಿ

ಅಮಿತ್ ಶಾ ಅವರು ತಮ್ಮ ಭಾಷಣದಲ್ಲಿ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು ಎಂದು ಮೂಲಗಳು ತಿಳಿಸಿವೆ. “ರಾಹುಲ್ ಗಾಂಧಿ ಅವರಿಗೆ ಖಾರಿಫ್ ಮತ್ತು ರಾಬಿ ಗೊತ್ತಿಲ್ಲ ಮತ್ತು ಅವರು ರೈತರ ಬಗ್ಗೆ ಮಾತನಾಡುತ್ತಾರೆ. ನಾವು ಘೋಷಿಸುತ್ತೇವೆ, ನಾವು ಅಡಿಪಾಯ ಹಾಕುತ್ತೇವೆ ಮತ್ತು ನಾವು ಕಾಂಗ್ರೆಸ್‌ಗಿಂತ ಭಿನ್ನವಾಗಿ ಉದ್ಘಾಟನೆ ಮಾಡುತ್ತೇವೆ. ಅಖಿಲೇಶ್ ಅವರನ್ನು ಮತ್ತೆ ಕರೆತರುತ್ತೀರಾ? ನಿಮಗೆ ಸುರಕ್ಷಿತ ಅನಿಸುವುದಿಲ್ಲವೇ? ನಮ್ಮ ಯುವಕರು ಮತ್ತೆ ಜೈಲು ಸೇರಬೇಕೆ?  ಮುಂಬರುವ ಚುನಾವಣೆಗೆ ಬಿಜೆಪಿ ಕೂಡ ಜಯಂತ್ ಚೌಧರಿ ಅವರ ರಾಷ್ಟ್ರೀಯ ಲೋಕದಳದೊಂದಿಗೆ ಕೈಜೋಡಿಸಲು ಬಯಸಿತ್ತು ಆದರೆ ಅವರು “ತಪ್ಪು ಜಾಗವನ್ನು ಆಯ್ಕೆ ಮಾಡಿಕೊಂಡಿದ್ದಾರೆ” ಎಂದು ಅವರು ಹೇಳಿದರು. “ಆಲೋಚಿಸಬೇಡಿ, ನಿಮ್ಮ ಮತಗಳನ್ನು ನಮಗೆ ನೀಡಿ. ನಾವು ಆಲೋಚಿಸುತ್ತೇವೆ, ”ಎಂದು ಅಮಿತ್ ಶಾ ಹೇಳಿದ್ದಾರೆ.

ಉತ್ತರಪ್ರದೇಶದಲ್ಲಿ ಜಾಟ್ ಮತಗಳು

2014 ಮತ್ತು 2019 ರ ಲೋಕಸಭೆ ಚುನಾವಣೆ ಮತ್ತು 2017 ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಜಾಟ್ ಸಮುದಾಯದಿಂದ ಸಾಕಷ್ಟು ಬೆಂಬಲ ಸಿಕ್ಕಿತಾದರೂ, ಮುಖ್ಯವಾಗಿ ರೈತರಾಗಿರುವ ಜಾಟ್‌ಗಳು ವರ್ಷದ ನಂತರ ಈ ಬಾರಿ ಬಿಜೆಪಿಯನ್ನು ಆಯ್ಕೆ ಮಾಡುವುದಿಲ್ಲ ಎಂದು ಸಮಾಜವಾದಿ ಪಕ್ಷ ಹೇಳಿಕೊಂಡಿದೆ.
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯು ಫೆಬ್ರವರಿ ಮತ್ತು ಮಾರ್ಚ್ 2022 ರಲ್ಲಿ ಏಳು ಹಂತಗಳಲ್ಲಿ ನಡೆಯಲಿದೆ. ಮತಗಳನ್ನು ಮಾರ್ಚ್ 10 ರಂದು ಎಣಿಕೆ ಮಾಡಲಾಗುತ್ತದೆ.

ಆರ್‌ಎಲ್‌ಡಿ ಜೊತೆ ಚುನಾವಣೋತ್ತರ ಮೈತ್ರಿ ಸಾಧ್ಯತೆಯ ಬಗ್ಗೆ  ಸುಳಿವು ನೀಡಿದ ಬಿಜೆಪಿ


“ನಾವು (ಆರ್‌ಎಲ್‌ಡಿ ಮುಖ್ಯಸ್ಥ) ಜಯಂತ್ ಚೌಧರಿ ಅವರನ್ನು ನಮ್ಮ ಮನೆಯಲ್ಲಿ (ಬಿಜೆಪಿ) ಸ್ವಾಗತಿಸಲು ಬಯಸಿದ್ದೇವೆ ಆದರೆ ಅವರು ತಪ್ಪು ದಾರಿಯನ್ನು ಆರಿಸಿಕೊಂಡಿದ್ದಾರೆ. ಜಾಟ್ ಸಮುದಾಯದ ಜನರು ಅವರೊಂದಿಗೆ ಮಾತನಾಡುತ್ತಾರೆ. ಅವರಿಗೆ ನಮ್ಮ ಬಾಗಿಲು ಯಾವಾಗಲೂ ತೆರೆದಿರುತ್ತದೆ” ಎಂದು ಬಿಜೆಪಿ ಸಂಸದ ಪರ್ವೇಶ್ ವರ್ಮಾ ಹೇಳಿದ್ದಾರೆ.  ಉತ್ತರ ಪ್ರದೇಶದ ಜಾಟ್ ನಾಯಕರೊಂದಿಗೆ ಅಮಿತ್ ಶಾ ಸಭೆ ನಂತರ ವರ್ಮಾ ಈರೀತಿ ಹೇಳಿರುವುದಾಗಿ ಎಎನ್ಐ ಸುದ್ದಿ ಸಂಸ್ಥೆವರದಿ ಮಾಡಿದೆ.

ಇದನ್ನೂ ಓದಿ:Republic Day 2022 Parade: ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವದ ಪರೇಡ್​ನಲ್ಲಿ ಎನ್​ಸಿಸಿ ನೇತೃತ್ವ ವಹಿಸಿದ ಮೈಸೂರು ವಿದ್ಯಾರ್ಥಿನಿ

Published On - 8:03 pm, Wed, 26 January 22