Republic Day 2022 Parade: ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಎನ್ಸಿಸಿ ನೇತೃತ್ವ ವಹಿಸಿದ ಮೈಸೂರು ವಿದ್ಯಾರ್ಥಿನಿ
ಮೈಸೂರಿನಿಂದ ಒಟ್ಟು 19 ಕೆಡೆಟ್ಗಳಲ್ಲಿ 10 ಯುವಕರು ಮತ್ತು 9 ಯುವತಿಯರು ಕರ್ನಾಟಕ ಮತ್ತು ಗೋವಾ ಎನ್ಸಿಸಿ ಡೈರೆಕ್ಟೊರೇಟ್ ಪಡೆಯನ್ನು ಪ್ರತಿನಿಧಿಸಿದ್ದಾರೆ. ದೆಹಲಿಯಲ್ಲಿ ಪ್ರತಿವರ್ಷ ಗಣರಾಜ್ಯೋತ್ಸವ ಕ್ಯಾಂಪ್ಗಾಗಿ ಭಾರತದ 17 ಡೈರೆಕ್ಟೊರೇಟ್ಗಳಿಂದ ಕೆಡೆಟ್ಗಳನ್ನ ಆಯ್ಕೆ ಮಾಡಲಾಗುತ್ತದೆ.
ಮೈಸೂರು: ದೆಹಲಿಯಲ್ಲಿ ಇಂದು (ಜ.26) ನಡೆದ 73ನೇ ಗಣರಾಜ್ಯೋತ್ಸವದ (Republic Day) ಐತಿಹಾಸಿಕ ಪರೇಡ್‌ನಲ್ಲಿ (Parade) ಭಾಗವಹಿಸಿದ್ದ ಎನ್ಸಿಸಿ (NCC) ತಂಡವನ್ನು ಮೈಸೂರಿನ ವಿದ್ಯಾರ್ಥಿನಿ ಮುನ್ನಡೆಸಿದ್ದಾರೆ. ಮೈಸೂರಿನ ಮಹಾರಾಣಿ ಕಾಲೇಜಿನ ಬಿಎಸ್ಸಿ ವಿದ್ಯಾರ್ಥಿನಿ ಪ್ರಮೀಳಾ ಕುವರ್ ನೇತೃತ್ವದ ಎನ್ಸಿಸಿ ತಂಡ ಪಥಸಂಚಲನದಲ್ಲಿ ಭಾಗಿಯಾಗಿದೆ. ಮೈಸೂರಿನ ವಿವಿ ಮೊಹಲ್ಲಾದ ನಿವಾಸಿಯಾಗಿರುವ ಪ್ರತಾಪ್ ಸಿಂಗ್ ಮತ್ತು ಪುಷ್ಪಾ ಕುವರ್ ದಂಪತಿಯ ಪುತ್ರಿಯಾಗಿರುವ ಪ್ರಮಿಳಾ, ಎನ್ಸಿಸಿ ಸೀನಿಯರ್ ಅಂಡರ್ ಆಫೀಸರ್ ಆಗಿದ್ದಾರೆ.
ಪ್ರಮೀಳಾ ಅವರ ತಂದೆ ನಗರದ ಕಾಳಿದಾಸ ರಸ್ತೆಯಲ್ಲಿ ಟೀ ಅಂಗಡಿ ಇಟ್ಟುಕೊಂಡು ಮಗಳನ್ನು ಓದಿಸುತ್ತಿದ್ದಾರೆ. 2018 ದಸರಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಎನ್ಸಿಸಿ ತಂಡದ ನೇತೃತ್ವ ವಹಿಸಿಕೊಂಡು ಯಶಸ್ವಿಯಾಗಿ ಮುನ್ನಡೆಸಿದ್ದ ಪ್ರಮೀಳಾ ಅವರಿಗೆ 2022ರ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಎನ್ಸಿಸಿ ತಂಡದ ನೇತೃತ್ವ ವಹಿಸಿರುವುದು ಪೋಷಕರಲ್ಲಿ ಸಂತಸವನ್ನುಂಟು ಮಾಡಿದೆ.
ಮೈಸೂರಿನಿಂದ ಒಟ್ಟು 19 ಕೆಡೆಟ್ಗಳಲ್ಲಿ 10 ಯುವಕರು ಮತ್ತು 9 ಯುವತಿಯರು ಕರ್ನಾಟಕ ಮತ್ತು ಗೋವಾ ಎನ್ಸಿಸಿ ಡೈರೆಕ್ಟೊರೇಟ್ ಪಡೆಯನ್ನು ಪ್ರತಿನಿಧಿಸಿದ್ದಾರೆ. ದೆಹಲಿಯಲ್ಲಿ ಪ್ರತಿವರ್ಷ ಗಣರಾಜ್ಯೋತ್ಸವ ಕ್ಯಾಂಪ್ಗಾಗಿ ಭಾರತದ 17 ಡೈರೆಕ್ಟೊರೇಟ್ಗಳಿಂದ ಕೆಡೆಟ್ಗಳನ್ನ ಆಯ್ಕೆ ಮಾಡಲಾಗುತ್ತದೆ. ಕ್ಯಾಂಪ್ನಲ್ಲಿ ಇವರು ವ್ಯಾಯಾಮ, ಸಾಂಸ್ಕೃತಿಕ ಚಟುವಟಿಕೆಗಳು, ಫ್ಯಾಗ್ ಏರಿಯಾ ಮತ್ತು ಬೆಸ್ಟ್ ಕೆಡೆಟ್ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾರೆ.
ಕೊರೊನಾ ಪಿಡುಗಿನಿಂದಾಗಿ ಕಳೆದ ವರ್ಷ ಮತ್ತು ಈ ವರ್ಷ ಎನ್ಸಿಸಿ ಕ್ಯಾಂಪ್ಗೆ ಆಯ್ಕೆ ಮಾಡುವ ಕೆಡೆಟ್ಗಳ ಸಂಖ್ಯೆಯನ್ನು ಅರ್ಧದಷ್ಟು ಕಡಿಮೆ ಮಾಡಲಾಗಿದೆ. ಪ್ರಸಕ್ತ ವರ್ಷ ಕರ್ನಾಟಕ ಮತ್ತು ಗೋವಾ ಡೈರೆಕ್ಟೋರೇಟ್ ನಿಂದ ಒಟ್ಟು 54 ಕೆಡೆಟ್ಗಳನ್ನ ಆಯ್ಕೆ ಮಾಡಲಾಗಿದ್ದು, 2 ತಿಂಗಳ ಹಿಂದೆಯೇ ದೆಹಲಿ ತಲುಪಿದ್ದರು.
ಭಾರತದ ಹುತಾತ್ಮ ಯೋಧರಿಗೆ ಮೋದಿ ನಮನ: ರಾಜ್‌ಪಥ್‌ನಲ್ಲಿ ಬೆಳಿಗ್ಗೆ 10:30 ಕ್ಕೆ ಮೆರವಣಿಗೆ ಪ್ರಾರಂಭವಾಯಿತು, ಉತ್ತಮ ಗೋಚರತೆಗಾಗಿ ಸಾಮಾನ್ಯಕ್ಕಿಂತ ಅರ್ಧ-ಗಂಟೆ ತಡವಾಗಿತ್ತು. ಕಾರ್ಯಕ್ರಮಕ್ಕೂ ಮುನ್ನ ಪ್ರಧಾನಿ ಮೋದಿ ಅವರು ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಭಾರತದ ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದರು. ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ಗೌರವ ವಂದನೆಯೊಂದಿಗೆ ಮೆರವಣಿಗೆ ಆರಂಭವಾಯಿತು. ಪರಮವೀರ ಚಕ್ರ ಮತ್ತು ಅಶೋಕ ಚಕ್ರ ಸೇರಿದಂತೆ ದೇಶದ ಅತ್ಯುನ್ನತ ಶೌರ್ಯ ಪ್ರಶಸ್ತಿಗಳ ವಿಜೇತರು ತಂಡವನ್ನು ಮುನ್ನಡೆಸಿದರು. ಪರೇಡ್‌ನಲ್ಲಿ ಭಾರತೀಯ ಸೇನೆಯಿಂದ ಆರು ಕವಾಯತು ತುಕಡಿಗಳು, 96 ಯುವ ನಾವಿಕರು ಮತ್ತು ನೌಕಾ ತುಕಡಿಯ ನಾಲ್ವರು ಅಧಿಕಾರಿಗಳು ಮತ್ತು 96 ಏರ್‌ಮೆನ್‌ಗಳು ಮತ್ತು ವಾಯುಪಡೆಯ ನಾಲ್ವರು ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಇದನ್ನೂ ಓದಿ
ಸಕ್ಕರೆ ಕಾಯಿಲೆ ಲಕ್ಷಣಗಳೇನು? ಆರೋಗ್ಯ ಕಾಪಾಡುವುದು ಹೇಗೆ? ಡಯಾಬಿಟೀಸ್ ಇರುವವರಿಗೆ ವೈದ್ಯರ ಸಲಹೆಗಳು
ಹಳದಿಯಾದ ಹಲ್ಲುಗಳನ್ನು ಬಿಳಿಯಾಗಿಸುವುದು ಹೇಗೆ? ಇಲ್ಲಿದೆ ಮನೆಮದ್ದು
Published On - 1:16 pm, Wed, 26 January 22