ಮೈಸೂರು: ಬಾಲ್ಯ ವಿವಾಹ ಪ್ರಶ್ನಿಸಿದ್ದಕ್ಕೆ ಚಾಕು ಇರಿತ; ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷನ ಮೇಲೆ ಹಲ್ಲೆ
ಮಾತಿಗೆ ಮಾತು ಬೆಳೆದು ನಾಗೇಶ್‌ಗೆ ಚಾಕು ಇರಿತ ಮಾಡಲಾಗಿದೆ. ಚಾಕು ಇರಿತಕ್ಕೆ ಒಳಗಾದ ನಾಗೇಶ್‌ಗೆ ನಂಜನಗೂಡು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ದೊಡ್ಡ ಕವಲಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಮೈಸೂರು: ಬಾಲ್ಯ ವಿವಾಹ ವಿರೋಧಿಸಿದ್ದಕ್ಕೆ ವ್ಯಕ್ತಿಗೆ ಚಾಕು ಇರಿತ ಮಾಡಿದ ದುರ್ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಗ್ರಾಮ ಮಲ್ಲಹಳ್ಳಿ ಎಂಬಲ್ಲಿ ನಡೆದಿದೆ. ನಾಗೇಶ್ ಎಂಬವರಿನಿಗೆ ಚಾಕು ಇರಿತ ಮಾಡಲಾಗಿದೆ. ಮಾದೇಶ್ ಅಲಿಯಾಸ್ ಮೆಣಸು ಎಂಬಾತನಿಂದ ಇರಿತವಾಗಿದೆ. ಹೆಮ್ಮರಗಾಲ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಾಗೇಶ್, ತಮ್ಮ ಚಿಕ್ಕಪ್ಪನ ಪುತ್ರಿಯನ್ನು ವಿವಾಹವಾಗಿದ್ದ ಮಾದೇಶನ ನಡೆಯನ್ನು ಪ್ರಶ್ನಿಸಿದ್ದರು. ಬಾಲ್ಯ ವಿವಾಹ ಪ್ರಶ್ನಿಸಿದ್ದಕ್ಕೆ ಹಲ್ಲೆ ಮಾಡಲಾಗಿದೆ.
ಒಂದೂವರೆ ತಿಂಗಳ ಹಿಂದೆ ಮಾದೇಶ ಗೌಪ್ಯವಾಗಿ ವಿವಾಹವಾಗಿದ್ದ. ಯುವತಿ ಅಪ್ರಾಪ್ತೆಯಾಗಿದ್ದರಿಂದ ನಾಗೇಶ್ ಪ್ರಶ್ನೆ ಮಾಡಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು ನಾಗೇಶ್‌ಗೆ ಚಾಕು ಇರಿತ ಮಾಡಲಾಗಿದೆ. ಚಾಕು ಇರಿತಕ್ಕೆ ಒಳಗಾದ ನಾಗೇಶ್‌ಗೆ ನಂಜನಗೂಡು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ದೊಡ್ಡ ಕವಲಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಬಾಲ್ಯ ವಿವಾಹ ಇದು ಅಪರಾಧ ಎಂದು ಮಾದೇಶ್‌ಗೆ ನಾಗೇಶ್ ಬುದ್ದಿ ಹೇಳಿದ್ದರು. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ಬೆಳೆದಿದೆ. ಮಾತಿನ ಚಕಮಕಿ ನಡುವೆ ನಾಗೇಶ್‌ಗೆ ಚಾಕು ಇರಿತ ಮಾಡಲಾಗಿದೆ. ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ನಾಗೇಶ್ನ್ನು ಕುಟುಂಬಸ್ಥರು ಆಸ್ಪತ್ರೆಗೆ ಸೇರಿಸಿದ್ದಾರೆ. ದೊಡ್ಡ ಕವಲಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇದನ್ನೂ ಓದಿ: ಬೆಣ್ಣೆ ನಗರಿಯಲ್ಲಿ ಕೊಲೆ; ಖಾಲಿ ಸೈಟ್ನಲ್ಲಿ ತಮ್ಮನ ಶವ ಪತ್ತೆ, ನಿಶ್ಚಿತಾರ್ಥ ಆಗಬೇಕಿದ್ದ ಅಣ್ಣ ಇನ್ನೂ ನಾಪತ್ತೆ
ಇದನ್ನೂ ಓದಿ: ತುಮಕೂರು ಸಿದ್ದಗಂಗಾ ಮಠದ ವಿದ್ಯಾರ್ಥಿ ಮೇಲೆ ಅಪರಿಚಿತರಿಂದ ಹಲ್ಲೆ! ಮೊಬೈಲ್ ಕಸಿದು ಪರಾರಿ
Published On - 7:42 am, Wed, 26 January 22