ಮುಂಬೈನ ಬಾಂದ್ರಾದಲ್ಲಿ 5 ಅಂತಸ್ತಿನ ಕಟ್ಟಡ ಕುಸಿತ; ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ
ಇಂದು ಸಂಜೆ 4 ಗಂಟೆ ಸುಮಾರಿಗೆ ಬಾಂದ್ರಾದ ಬೆಹ್ರಾಂ ನಗರದಲ್ಲಿ 5 ಮಹಡಿಯ ಕಟ್ಟಡ ಕುಸಿತವಾಗಿದ್ದು, ಸದ್ಯಕ್ಕೆ ಯಾವುದೇ ಪ್ರಾಣಾಪಾಯವಾದ ಬಗ್ಗೆ ವರದಿಯಾಗಿಲ್ಲ.
ಮುಂಬೈ: ಮಹಾರಾಷ್ಟ್ರದ ಮುಂಬೈನ (Mumbai) ಬಾಂದ್ರಾ ಪೂರ್ವ ಭಾಗದ ಬೆಹ್ರಾಂ ನಗರದಲ್ಲಿ 5 ಅಂತಸ್ತಿನ ಬೃಹತ್ ಕಟ್ಟಡ ಕುಸಿದಿದೆ. ಈ ಘಟನೆಯಲ್ಲಿ ಕನಿಷ್ಠ ಐವರು ಕಟ್ಟಡದ ಅವಶೇಷಗಳಡಿ ಸಿಲುಕಿರುವ ಅನುಮಾನ ವ್ಯಕ್ತವಾಗಿದೆ. ಈಗಾಗಲೇ ರಕ್ಷಣಾ ತಂಡಗಳು ಕಟ್ಟಡ ಕುಸಿತವಾದ ಸ್ಥಳಕ್ಕೆ ಭೇಟಿ ನೀಡಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ.
ಇಂದು ಸಂಜೆ 4 ಗಂಟೆ ಸುಮಾರಿಗೆ ಬೆಹ್ರಾಂ ನಗರದಲ್ಲಿ 5 ಮಹಡಿಯ ಕಟ್ಟಡ ಕುಸಿತವಾಗಿದ್ದು, ಸದ್ಯಕ್ಕೆ ಯಾವುದೇ ಪ್ರಾಣಾಪಾಯವಾದ ಬಗ್ಗೆ ವರದಿಯಾಗಿಲ್ಲ. ಘಟನೆ ನಡೆದ ಸ್ಥಳಕ್ಕೆ 6 ಆ್ಯಂಬುಲೆನ್ಸ್ಗಳು ಆಗಮಿಸಿವೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ.
At least five persons are feared trapped after a 5-storey building collapsed in Behram Nagar locality of Bandra (East), Mumbai. Five fire engines, one rescue van, and 6 ambulances have been rushed to the site: BMC
— ANI (@ANI) January 26, 2022
ಈಗಾಗಲೇ ಅವಶೇಷಗಳಡಿ ಸಿಲುಕಿರುವವರ ರಕ್ಷಣೆಗೆ ಐದು ಅಗ್ನಿಶಾಮಕ ವಾಹನಗಳು, ಒಂದು ರಕ್ಷಣಾ ವ್ಯಾನ್ ಮತ್ತು ಆರು ಆಂಬ್ಯುಲೆನ್ಸ್‌ಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ಮುಂಬೈನ ಮುನ್ಸಿಪಲ್ ಕಾರ್ಪೊರೇಶನ್ (ಬಿಎಂಸಿ) ಅಧಿಕಾರಿಗಳು ತಿಳಿಸಿದ್ದಾರೆ.
At least five people feared trapped in debris after multi-storey structure collapses at suburban Bandra, says civic official
— Press Trust of India (@PTI_News) January 26, 2022
ಈ ಘಟನೆ ಕುರಿತು ಹೆಚ್ಚಿನ ಮಾಹಿತಿ ಇನ್ನೂ ಲಭ್ಯವಾಗಬೇಕಾಗಿದೆ.
ಇದನ್ನೂ ಓದಿ: ಮುಂಬೈನಲ್ಲಿ ದಾಖಲಾಗುತ್ತಿರುವ ಹೊಸ ಕೊವಿಡ್ 19 ಕೇಸ್ಗಳಲ್ಲಿ ಶೇ.89ರಷ್ಟು ಒಮಿಕ್ರಾನ್ ಪ್ರಕರಣಗಳು; ಸಮೀಕ್ಷೆ ವರದಿ
ಮುಂಬೈ: ಕಮಲಾ ಬಿಲ್ಡಿಂಗ್ ಅಗ್ನಿ ದುರಂತದ ತನಿಖೆಗೆ 4 ಸದಸ್ಯರ ಸಮಿತಿ; 15 ದಿನಗಳಲ್ಲಿ ವರದಿ ಸಲ್ಲಿಸಲು ಸೂಚನೆ