ರೈಲ್ವೆ ಟಿಕೆಟ್ ಕೌಂಟರ್​ನಲ್ಲಿ ಸಿಬ್ಬಂದಿಯ ಹುಟ್ಟುಹಬ್ಬ ಆಚರಣೆ, ಗಂಟೆಗಟ್ಟಲೆ ಕಾದು ಕುಳಿತ ಪ್ರಯಾಣಿಕರು

ಭಾರತೀಯ ರೈಲ್ವೆ ಭಾರತದ ಸಾರಿಗೆ ವ್ಯವಸ್ಥೆಯ ಜೀವನಾಡಿಯಂತಿದೆ. ಪ್ರತಿದಿನ ಲಕ್ಷಾಂತರ ಜನರು ರೈಲುಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಟಿಕೆಟ್ ಕೌಂಟರ್​​ನಲ್ಲಿ ಸಿಬ್ಬಂದಿಯೇ ಇಲ್ಲದಿದ್ದರೆ ಪ್ರಯಾಣಿಕರ ಪರಿಸ್ಥಿತಿ ಏನಾಗಬೇಕು. ಕಲುಪುರ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಸಿಬ್ಬಂದಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬೆಳಗ್ಗೆ 11.25 ರ ಸುಮಾರಿಗೆ ಈ ಘಟನೆ ನಡೆದಿದ್ದು, ಬುಕಿಂಗ್ ಕ್ಲರ್ಕ್ ಮತ್ತು ಎನ್ಕ್ವೈರಿ-ಕಮ್-ರಿಸರ್ವೇಶನ್ ಕ್ಲರ್ಕ್ (ಇಸಿಆರ್‌ಸಿ) ಸೇರಿದಂತೆ 10 ಕ್ಕೂ ಹೆಚ್ಚು ಸಿಬ್ಬಂದಿ ಆಚರಣೆಗಾಗಿ ಟಿಕೆಟ್ ಕೌಂಟರ್‌ಗಳಲ್ಲಿ ಜಮಾಯಿಸಿದ್ದರು.

ರೈಲ್ವೆ ಟಿಕೆಟ್ ಕೌಂಟರ್​ನಲ್ಲಿ ಸಿಬ್ಬಂದಿಯ ಹುಟ್ಟುಹಬ್ಬ ಆಚರಣೆ, ಗಂಟೆಗಟ್ಟಲೆ ಕಾದು ಕುಳಿತ ಪ್ರಯಾಣಿಕರು
ಸಿಬ್ಬಂದಿ

Updated on: Oct 03, 2025 | 9:10 AM

ಕಲುಪುರ, ಅಕ್ಟೋಬರ್ 03: ಕೆಲಸದ ಸಮಯದಲ್ಲಿ ರೈಲ್ವೆ(Railway) ಟಿಕೆಟ್ ಕೌಂಟರ್​​ನಲ್ಲಿ ಸಿಬ್ಬಂದಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡ ಪರಿಣಾಮ, ನೂರಾರು ಪ್ರಯಾಣಿಕರು ರೈಲುಗಳನ್ನು ತಪ್ಪಿಸಿಕೊಳ್ಳಬೇಕಾಯಿತು. ಉಳಿದ ಸಿಬ್ಬಂದಿ ಕೂಡ ಆಚರಣೆಯಲ್ಲಿ ಹಾಜರಿದ್ದ ಕಾರಣ ಗಂಟೆಗಟ್ಟಲೆ ಪ್ರಯಾಣಿಕರು ಕೌಂಟರ್​ ಮುಂದೆ ಕಾಯಬೇಕಾಯಿತು. ಈ ಘಟನೆ ಅಹಮದಾಬಾದಿನ ಕಲುಪುರ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

ಬೆಳಗ್ಗೆ 11.25 ರ ಸುಮಾರಿಗೆ ಈ ಘಟನೆ ನಡೆದಿದ್ದು, ಬುಕಿಂಗ್ ಕ್ಲರ್ಕ್ ಮತ್ತು ಎನ್ಕ್ವೈರಿ-ಕಮ್-ರಿಸರ್ವೇಶನ್ ಕ್ಲರ್ಕ್ (ಇಸಿಆರ್‌ಸಿ) ಸೇರಿದಂತೆ 10 ಕ್ಕೂ ಹೆಚ್ಚು ಸಿಬ್ಬಂದಿ ಆಚರಣೆಗಾಗಿ ಟಿಕೆಟ್ ಕೌಂಟರ್‌ಗಳಲ್ಲಿ ಜಮಾಯಿಸಿದ್ದರು. ಈ ಕುರಿತು ಅಹಮದಾಬಾದ್ ಮಿರರ್ ವರದಿ ಮಾಡಿದೆ.

ಒಂದು ಕೌಂಟರ್ ಮಾತ್ರ ತೆರೆದಿತ್ತು, ಉಳಿದವುಗಳಲ್ಲಿ ಸಿಬ್ಬಂದಿ ಇರಲಿಲ್ಲ. ಸಾಮಾನ್ಯ ಟಿಕೆಟ್‌ಗಳಿಗಾಗಿ ಕಾಯುತ್ತಿದ್ದ ಹಲವಾರು ಪ್ರಯಾಣಿಕರು ವಿಳಂಬದಿಂದಾಗಿ ತಮ್ಮ ರೈಲುಗಳನ್ನು ಕೆಲವೇ ನಿಮಿಷಗಳ ಕಾಲ ತಪ್ಪಿಸಿಕೊಂಡಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ, ಇದು ತೀವ್ರ ಆಕ್ರೋಶವನ್ನು ಹುಟ್ಟುಹಾಕಿತು. ಕೆಲವರು ಕೆಲಸದ ಸ್ಥಳದಲ್ಲಿ ಹುಟ್ಟುಹಬ್ಬ ಆಚರಿಸುವ ಕಲ್ಪನೆಯನ್ನು ಸಮರ್ಥಿಸಿಕೊಂಡರೆ. ಕೆಲವರು ಪ್ರಯಾಣಿಕರು ರೈಲು ತಪ್ಪಿಸಿಕೊಂಡಿದ್ದಕ್ಕೆ ಯಾರು ಹೊಣೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ಮತ್ತಷ್ಟು ಓದಿ: ಸಾಲು ಸಾಲು ಹಬ್ಬಗಳ ಹಿನ್ನಲೆ ಬೆಂಗಳೂರಿನಿಂದ ಈ ಸ್ಥಳಗಳಿಗೆ ವಿಶೇಷ ರೈಲು

ಕಚೇರಿಯಲ್ಲಿ ಹುಟ್ಟುಹಬ್ಬಗಳನ್ನು ಆಚರಿಸುವುದರಿಂದ ಯಾವುದೇ ಹಾನಿಯಾಗುವುದಿಲ್ಲ. ಆದರೆ ಅದು ನಿತ್ಯದ ಕೆಲಸದ ಮೇಲೆ ಪರಿಣಾಮ ಬೀರಬಾರದು. ಭಾರತೀಯ ರೈಲ್ವೆ ಭಾರತದ ಸಾರಿಗೆ ವ್ಯವಸ್ಥೆಯ ಜೀವನಾಡಿಯಂತಿದೆ. ಪ್ರತಿದಿನ ಲಕ್ಷಾಂತರ ಜನರು ರೈಲುಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಟಿಕೆಟ್ ಬುಕ್ಕಿಂಗ್ ಪ್ರಕ್ರಿಯೆಯ ಪಾರದರ್ಶಕತೆ ಹಾಗೂ ಸುರಕ್ಷತೆ ಅತ್ಯಂತ ಮುಖ್ಯವಾಗುತ್ತದೆ.

ಕಳೆದ ಕೆಲವು ವರ್ಷಗಳಿಂದ ಆನ್‌ಲೈನ್ ಬುಕ್ಕಿಂಗ್‌ಗಳಲ್ಲಿ ವಂಚನೆ, ನಕಲಿ ಖಾತೆಗಳು ಹಾಗೂ ಕೃತಕ ಬಿಕ್ಕಟ್ಟು ಸೃಷ್ಟಿ ಮಾಡುವ ಪ್ರಕರಣಗಳು ಬೆಳಕಿಗೆ ಬಂದವು. ಅಕ್ಟೋಬರ್ 1ರಿಂದ ನಿಯಮಗಳಲ್ಲಿ ಬದಲಾವಣೆಗಳಾಗಿವೆ.

ಈಗಾಗಲೇ ತತ್ಕಾಲ್ ಟಿಕೆಟ್ ಬುಕ್ಕಿಂಗ್‌ಗೆ ಆಧಾರ್ ಲಿಂಕ್ ಕಡ್ಡಾಯವಾಗಿತ್ತು. ಆದರೆ ಅಕ್ಟೋಬರ್ 1ರಿಂದ ಸಾಮಾನ್ಯ ಟಿಕೆಟ್‌ಗಳಿಗೂ ಆಧಾರ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ. IRCTC ವೆಬ್‌ಸೈಟ್ ಅಥವಾ ಮೊಬೈಲ್ ಆ್ಯಪ್ ಮೂಲಕ ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡುವವರು ತಮ್ಮ ಖಾತೆಯನ್ನು ಆಧಾರ್ ಕೆವೈಸಿ ಮೂಲಕ ಪರಿಶೀಲಿಸಿಕೊಳ್ಳಬೇಕು. ಕೌಂಟರ್ ಮೂಲಕ ಟಿಕೆಟ್ ಬುಕ್ ಮಾಡುವವರಿಗೆ ಹಳೆಯ ನಿಯಮವೇ ಮುಂದುವರೆಯಲಿದೆ. ಅವರಿಗೆ ಯಾವುದೇ ಬದಲಾವಣೆ ಇರುವುದಿಲ್ಲ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Published On - 9:08 am, Fri, 3 October 25