Bangalore Mangalore Special Train: ದಸರಾ ಪ್ರಯುಕ್ತ ಮಂಗಳೂರು ಬೆಂಗಳೂರು ವಿಶೇಷ ರೈಲು, ಇಲ್ಲಿದೆ ವೇಳಾಪಟ್ಟಿ
Bangalore Ernakulam Train: ದಸರಾ ಮಹೋತ್ಸವದ ಅಂಗವಾಗಿ ಸಾರ್ವಜನಿಕರಿಗೆ ನೈಋತ್ಯ ರೈಲ್ವೆ ವಿಶೇಷ ಕೊಡುಗೆ ನೀಡಿದೆ. ಬೆಂಗಳೂರು, ಮಂಗಳೂರು ಮತ್ತು ಎರ್ನಾಕುಲಂಗಳ ನಡುವೆ ಈ ವಿಶೇಷ ರೈಲುಗಳ ಸಂಚಾರವಿರಲಿದೆ. ಸೆಪ್ಟೆಂಬರ್ 29 ರಿಂದ ಪ್ರಾರಂಭಿಸಿ ಅಕ್ಟೋಬರ್ 7 ರವರೆಗೂ ವಿವಿಧ ರೈಲುಗಳ ಸಂಚಾರವಿರಲಿದೆ. ದಸರಾ ಸಮಯದಲ್ಲಿ ದೂರದೂರಿಗೆ ಪ್ರಯಾಣಿಸುವವರಿಗಾಗಿ ಈ ವಿಶೇಷ ಸೌಲಭ್ಯ ಜಾರಿಯಾಗಿದೆ.

ಬೆಂಗಳೂರು, ಸೆಪ್ಟೆಂಬರ್ 30: ದೇಶದ ಎಲ್ಲೆಡೆ ದಸರಾ ಸಂಭ್ರಮ ಮನೆಮಾಡಿದೆ. ಈ ಸಂದರ್ಭದಲ್ಲಿ ದೂರದೂರಿಗೆ ಪ್ರಯಾಣ ಬೆಳೆಸುವವರೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ದಸರಾ (Dasara) ಮಹೋತ್ಸವದ ಪ್ರಯುಕ್ತ ಹೆಚ್ಚಿನ ಜನದಟ್ಟಣೆ ಇರುವ ಕಾರಣ ನೈಋತ್ಯ ರೈಲ್ವೇಸ್ (NWS) ಹೊಸ ಕೊಡುಗೆ ನೀಡಿದೆ. ಬೆಂಗಳೂರು, ಮಂಗಳೂರು ಮತ್ತು ಎರ್ನಾಕುಲಂಗಳ ನಡುವೆ ವಿಶೇಷ ರೈಲುಗಳ ಸೇವೆಯನ್ನು ಒದಗಿಸುತ್ತಿದೆ.
ವಿಶೇಷ ರೈಲುಗಳ ವೇಳಾಪಟ್ಟಿ
06257 ಸಂಖ್ಯೆಯ ರೈಲು ಇಂದು ರಾತ್ರಿ ( ಸೆ.30) 11.55 ಕ್ಕೆ ಯಶವಂತಪುರದಿಂದ ಹೊರಟು ಮರುದಿನ ಬೆಳಿಗ್ಗೆ 11.15 ಕ್ಕೆ ಮಂಗಳೂರಿನ ಜಂಕ್ಷನ್ ತಲುಪಲಿದೆ. ಹಾಗೆಯೆ ಮರಳಿ ಬರುವಾಗ ಅಕ್ಟೋಬರ್ 1 ರಂದು 06258 ಸಂಖ್ಯೆಯ ರೈಲು ಮಧ್ಯಾಹ್ನ 2.35 ಕ್ಕೆ ಹೊರಟು ಅಂದಿನ ರಾತ್ರಿ 11.30 ರ ಸುಮಾರಿಗೆ ಯಶವಂತಪುರ ತಲುಪಲಿದೆ. ಈ ರೈಲುಗಳು ಕುಣಿಗಲ್, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರಸ್ತೆ, ಕಬಕಪುತ್ತೂರು ಮತ್ತು ಬಂಟ್ವಾಳದಲ್ಲಿ ನಿಲುಗಡೆಗೊಳ್ಳಲಿವೆ.
ಇದನ್ನೂ ಓದಿ ಹುಬ್ಬಳ್ಳಿ ಶಬರಿಮಲೆ ರೈಲು: ಅಯ್ಯಪ್ಪ ಭಕ್ತರಿಗಾಗಿ ನೈಋತ್ಯ ರೈಲ್ವೇಸ್ ವಿಶೇಷ ಕೊಡುಗೆ
06147 ಸಂಖ್ಯೆಯ ರೈಲು ಅಕ್ಟೋಬರ್ 5 ರ ಸಂಜೆ 4.20ಕ್ಕೆ ಎರ್ನಾಕುಲಂನಿಂದ ಹೊರಟು ಮರುದಿನ ಬೆಳಿಗ್ಗೆ 8.15 ಕ್ಕೆ ಬೆಂಗಳೂರನ್ನು ತಲುಪಲಿದೆ. ಮರಳಿ ಬರುವಾಗ 06148 ಸಂಖ್ಯೆಯ ರೈಲುಗಳು ಸೆ.29 ಮತ್ತು ಅ.6 ರಂದು 10.10 ರ ರಾತ್ರಿಗೆ ಬೆಂಗಳೂರಿನಿಂದ ಹೊರಟು ಸೆ.30 ಮತ್ತು ಅ.7 ರಂದು ಬೆಳಿಗ್ಗೆ 10 ಗಂಟೆಗೆ ಎರ್ನಾಕುಲಂ ಜಂಕ್ಷನ್ ತಲುಪಲಿವೆ. ಈ ರೈಲುಗಳು ಆಲುವ, ತ್ರಿಶೂರು, ಪಾಲಕ್ಕಾಡ್ ಜಂಕ್ಷನ್, ಪೊದನೂರು ಜಂಕ್ಷನ್, ತಿರುಪ್ಪೂರು, ಈರೋಡ್ ಜಂಕ್ಷನ್, ಸಲೇಮ್ ಜಂಕ್ಷನ್, ಬಂಗಾರ್ಪೇಟೆ, ವೈಟ್ ಫೀಲ್ಡ್ ಮತ್ತು ಕೆ. ಆರ್ ಪುರಂ ಸ್ಟೇಶನ್ಗಳಲ್ಲಿ ನಿಲ್ಲಲಿವೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:38 pm, Tue, 30 September 25




