AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಮೀಕ್ಷೆ ವೇಳೆ ಮಾಹಿತಿ ಕೊಟ್ರೆ ರೇಷನ್ ಕಾರ್ಡ್ ರದ್ದಾಗುತ್ತಾ? ಪರಮೇಶ್ವರ್ ಏನಂದ್ರು ನೋಡಿ

ಸಮೀಕ್ಷೆ ವೇಳೆ ಮಾಹಿತಿ ಕೊಟ್ರೆ ರೇಷನ್ ಕಾರ್ಡ್ ರದ್ದಾಗುತ್ತಾ? ಪರಮೇಶ್ವರ್ ಏನಂದ್ರು ನೋಡಿ

Ganapathi Sharma
|

Updated on: Sep 30, 2025 | 11:17 AM

Share

ಶಿಕ್ಷಕರ ಅಮಾನತು, ಗೊಂದಲ, ಕೆಲ ಸಮುದಾಯಗಳ ಜನರ ಅಪಸ್ವರ, ಹೀಗೆ ಹತ್ತು ಹಲವು ವಿರೋಧಗಳ ಮಧ್ಯೆ ರಾಜ್ಯದಲ್ಲಿ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ (ಜಾತಿಗಣತಿ) ವೇಗ ಪಡೆದುಕೊಂಡಿದೆ. ಆದರೆ, ಹೈಕೋರ್ಟ್ ಮಧ್ಯಂತರ ಆದೇಶ ಮುಂದಿಟ್ಟುಕೊಂಡು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಹೊಸ ದಾಳ ಉರುಳಿಸಿದೆ. ಸಮೀಕ್ಷೆ ವೇಳೆ ಮಾಹಿತಿ ಕೊಟ್ರೆ ರೇಷನ್ ಕಾರ್ಡ್ ರದ್ದಾಗುತ್ತದೆ ಎಂದು ಬಿಜೆಪಿ ಹೇಳಿದೆ. ಇದಕ್ಕೆ ಗೃಹ ಸಚಿವ ಡಾ. ಜಿ ಪರಮೇಶ್ವರ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರು, ಸೆಪ್ಟೆಂಬರ್ 30: ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ (ಜಾತಿಗಣತಿ) ವಿರುದ್ಧ ಅಸಹಕಾರದ ದಾಳ ಉರುಳಿಸಿರುವ ಬಿಜೆಪಿ, ಕರ್ನಾಟಕ ಹೈಕೋರ್ಟ್‌ ಆದೇಶವನ್ನೇ ಮುಂದಿಟ್ಟುಕೊಂಡು ರಾಜ್ಯ ಸರ್ಕಾರದ ವಿರುದ್ಧ ಸಮರ ಸಾರಿದೆ. ಒತ್ತಡ ಹೇರಿದರೆ ಮಾಹಿತಿ ಕೊಡಬೇಡಿ, ಕೊಟ್ಟರೆ ನಿಮ್ಮ ರೇಷನ್‌ ಕಾರ್ಡ್ ರದ್ದಾಗುತ್ತದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಜನರಿಗೆ ಕರೆ ಕೊಟ್ಟಿದ್ದಾರೆ. ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ, ದಾಖಲೆ ಕೊಟ್ಟರೆ ಡೇಟಾ ಮಾರಿಕೊಳ್ಳಬಹುದು, ನಾನು ದಾಖಲೆ ಕೊಡಲ್ಲ ಎಂದಿದ್ದಾರೆ. ಸಮೀಕ್ಷೆಯನ್ನು ಬಹಿಷ್ಕರಿಸುತ್ತೇನೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ. ಹಾಗಾದರೆ, ಅಶೋಕ್ ಹೇಳಿದಂತೆ ಸಮೀಕ್ಷೆ ವೇಳೆ ಮಾಹಿತಿ ಕೊಟ್ಟರೆ ರೇಷನ್‌ ಕಾರ್ಡ್ ರದ್ದಾಗುತ್ತದೆಯಾ? ಈ ಬಗ್ಗೆ ಗೃಹ ಸಚಿವ ಡಾ. ಜಿ ಪರಮೇಶ್ವರ ಸ್ಪಷ್ಟನೆ ಇಲ್ಲಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ