ಚೆನ್ನೈ: ಎಐಎಡಿಎಂಕೆ ಹಿರಿಯ ನಾಯಕ (AIADMK Senior Leader), ಮಾಜಿ ಸಚಿವರ ಪಕ್ಷಗಳ ಪ್ರೆಸಿಡಿಯಂ ಅಧ್ಯಕ್ಷರೂ ಆಗಿದ್ದ ಇ. ಮಧುಸೂದನನ್ (E Madhusudhanan) ಅವರು ಇಂದು ಚೆನ್ನೈನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ. ಅವರಿಗೆ 81ವರ್ಷ ವಯಸ್ಸಾಗಿತ್ತು. ಬಹು ಅಂಗಾಂಗ ಸಮಸ್ಯೆಯಿಂದ ಅವರು ಜುಲೈನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಈ ವರ್ಷ ಏಪ್ರಿಲ್ನಲ್ಲಿ ಮಧುಸೂಧನನ್ ಅವರ ಪತ್ನಿ ಸಿ.ಜೀವಾ ಕೊವಿಡ್ 19 (Covid 19) ಸೋಂಕಿನಿಂದ ತೀರಿಕೊಂಡಿದ್ದರು. ಈ ದಂಪತಿಗೆ ಮಕ್ಕಳಿಲ್ಲ.
ಎಐಎಡಿಎಂಕೆ ಸಂಘಟಕ ಒ.ಪನೀರಸೆಲ್ವಂ ಮತ್ತು ಜಂಟಿ ಸಂಘಟಕ ಇ.ಕೆ.ಪಳನಿಸ್ವಾಮಿ ಅವರು ಮಧುಸೂದನನ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಹಾಗೇ, ಪಕ್ಷದಲ್ಲಿ ಮೂರು ದಿನಗಳ ಶೋಕಾಚರಣೆ ಘೋಷಿಸಲಾಗಿದೆ. ಹಾಗೇ, ಪಕ್ಷದ ಬಾವುಟವನ್ನು ಅರ್ಧ ಎತ್ತರಕ್ಕೆ ಹಾರಿಸಲಾಗುವುದು ಎಂದೂ ಹೇಳಿದ್ದಾರೆ.
2007ರಿಂದಲೂ ಮಧುಸೂದನನ್ ಅವರು ಪಕ್ಷದ ಪ್ರೆಸಿಡಿಯಮ್ ಅಧ್ಯಕ್ಷರಾಗಿದ್ದರು. ಎಐಎಡಿಎಂಕೆ ಸಂಸ್ಥಾಪಕ, ಮಾಜಿ ಮುಖ್ಯಮಂತ್ರಿ ಎಂ.ಜಿ.ರಾಮಚಂದ್ರನ್ ಅವರ ಉತ್ಕಟ ಅಭಿಮಾನಿಯಾಗಿದ್ದರು. ಹಾಗೇ, ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ತುಂಬ ನಿಷ್ಠಾವಂತರಾಗಿದ್ದರು. 1991-96ರವರೆಗೆ ಕೈಮಗ್ಗ ಮತ್ತು ಜವಳಿ ಖಾತೆ ಸಚಿವರಾಗಿದ್ದರು. ಅದಕ್ಕೂ ಮೊದಲು 1984ರಲ್ಲಿ ಇವರನ್ನು ಎಂಜಿಆರ್ ಮದ್ರಾಸ್ ವಿಧಾನಪರಿಷತ್ಗೆ ನಾಮನಿರ್ದೇಶನ ಮಾಡಿದ್ದರು. ಅದಾದ ನಂತರ ಡಾ. ರಾಧಾಕೃಷ್ಣನಗರದಲ್ಲಿ ಗೆದ್ದು ಶಾಸಕರಾದ ಅವರು 1991ರಲ್ಲಿ ಜಯಲಲಿತಾ ಕ್ಯಾಬಿನೆಟ್ ಸೇರಿದ್ದರು. ಇದೀಗ ಪಕ್ಷ ಒಬ್ಬ ಹಿರಿಯ ನಾಯಕನನ್ನು ಕಳೆದುಕೊಂಡಿದೆ.
ಇದನ್ನೂ ಓದಿ: Anna Bhagya Scheme Rice: ಪೊದೆಯಲ್ಲಿ ಬಚ್ಚಿಟ್ಟಿದ್ದ 146 ಚೀಲ ಅನ್ನಭಾಗ್ಯ ಅಕ್ಕಿ ವಶ
LPG Cashback Offer: ಪೇಟಿಎಂ ಮೂಲಕ ಎಲ್ಪಿಜಿ ಸಿಲಿಂಡರ್ ಬುಕ್ ಮಾಡಿ 2700 ರೂ. ತನಕ ಕ್ಯಾಶ್ಬ್ಯಾಕ್ ಪಡೆಯಿರಿ
AIADMK Presidium Chairman E Madhusudhanan and Senior Leader E Madhusudhanan Died