ಎಐಸಿಸಿ ಕೇಂದ್ರ ಚುನಾವಣಾ ಸಮಿತಿ ಮರುರಚನೆ: ಸಚಿವ ಕೆಜೆ ಜಾರ್ಜ್‌ಗೆ ಸ್ಥಾನ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ 16 ಸದಸ್ಯರನ್ನು ಒಳಗೊಂಡ ಕೇಂದ್ರ ಚುನಾವಣಾ ಸಮಿತಿಯನ್ನು ಮರು ರಚಿಸಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋಮವಾರ ಆದೇಶ ಹೊರಡಿಸಿದ್ದಾರೆ. ಕಾಂಗ್ರೆಸ್ ನೂತನ ಚುನಾವಣಾ ಸಮಿತಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಕರ್ನಾಟಕದ ಸಚಿವ ಕೆ.ಜೆ.ಜಾರ್ಜ್ ಸೇರಿದಂತೆ 16 ಸದಸ್ಯರನ್ನು ಒಳಗೊಂಡಿದೆ.

ಎಐಸಿಸಿ ಕೇಂದ್ರ ಚುನಾವಣಾ ಸಮಿತಿ ಮರುರಚನೆ: ಸಚಿವ ಕೆಜೆ ಜಾರ್ಜ್‌ಗೆ ಸ್ಥಾನ
ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ
Follow us
ಹರೀಶ್ ಜಿ.ಆರ್​. ನವದೆಹಲಿ
| Updated By: ಗಂಗಾಧರ​ ಬ. ಸಾಬೋಜಿ

Updated on: Sep 04, 2023 | 10:59 PM

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ 16 ಸದಸ್ಯರನ್ನು ಒಳಗೊಂಡ ಕೇಂದ್ರ ಚುನಾವಣಾ ಸಮಿತಿಯನ್ನು ಮರು ರಚಿಸಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Karge) ಸೋಮವಾರ ಆದೇಶ ಹೊರಡಿಸಿದ್ದಾರೆ. ರಾಜ್ಯ ಮತ್ತು ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಅಂತಿಮ ಆಯ್ಕೆ ಮತ್ತು ಪ್ರಚಾರ ಕಾರ್ಯದಲ್ಲಿ ತೊಡಗಿರುವ ಕಾಂಗ್ರೆಸ್ ನೂತನ ಚುನಾವಣಾ ಸಮಿತಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಕರ್ನಾಟಕದ ಸಚಿವ ಕೆ.ಜೆ.ಜಾರ್ಜ್ ಸೇರಿದಂತೆ 16 ಸದಸ್ಯರನ್ನು ಒಳಗೊಂಡಿದೆ.

ಕಾಂಗ್ರೆಸ್​ ನಾಯಕಿ ಸೋನಿಯಾ ಗಾಂಧಿ, ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ, ಅಂಬಿಕಾ ಸೋನಿ ಮತ್ತು ಕೆಸಿ ವೇಣುಗೋಪಾಲ್ ಅವರನ್ನು ಸಹ ಕೇಂದ್ರ ಚುನಾವಣಾ ಸಮಿತಿಯಲ್ಲಿ ಸೇರಿಸಲಾಗಿದ್ದು, ಮನಮೋಹನ್​ ಸಿಂಗ್, ಆಂಟನಿ, ಗಿರಿಜಾ ವ್ಯಾಸ್, ಜನಾರ್ದನ್ ದ್ವಿವೇದಿ, ಮುಕುಲ್ ವಾಸ್ಟಿಕ್, ಎಂ ವೀರಪ್ಪ ಮೊಯ್ಲಿ ಮತ್ತು ಮೊಕ್ಸಿನಾ ಕಿದ್ವಾಯಿ ಅವರಿಗೆ ಈ ಭಾರಿ ಅವಕಾಶ ನೀಡಲಾಗಿದೆ. ಈ ಹಿಂದಿನ ಸಮಿತಿಯಲ್ಲಿ ಒಟ್ಟು 11 ಸದಸ್ಯರಿದ್ದರು. ಆದರೆ ಈ ಭಾರಿ ಮಾತ್ರ 16 ಸದಸ್ಯರಿದ್ದಾರೆ.

ಸಂಸದ ಅಧೀರ್ ರಂಜನ್ ಚೌಧರಿ, ಮಾಜಿ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಮಧುಸೂದನ್ ಮಿಸ್ತ್ರಿ, ಎನ್ ಉತ್ತಮ್ ಕುಮಾರ್, ಟಿಎಸ್ ಸಿಂಗ್​ ಡಿಯೋ, ಪ್ರೀತಮ್ ಸಿಂಗ್, ಮೊಹಮ್ಮದ್ ಜಾವೇದ್, ಅಮೀ ಯಾಜ್ನಿಕ್, ಪಿಎಲ್ ಪುನಿಯಾ, ಓಂಕಾ‌ರ್​​ ಮಾರ್ಕಮ್ ಮತ್ತು ರಾಜ್ಯದ ಇಂಧನ ಸಚಿವ ಕೆ.ಜೆ ಜಾರ್ಜ್ ಹೊಸ ಸಮಿತಿಯ ಇತರೆ ಸದಸ್ಯರು.

ಇದನ್ನೂ ಓದಿ: ಜಿ20 ಶೃಂಗಸಭೆಗೆ ಬಿಗಿ ಭದ್ರತೆ; ಪ್ರತಿನಿಧಿಗಳಿಗೆ ನೀಡುವ ಆಹಾರ ಲ್ಯಾಬ್​ಗಳಲ್ಲಿ ಪರೀಕ್ಷೆಗೆ

ಏಳು ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸದಸ್ಯರು ಈ ಹೊಸ ಸಮಿತಿಯ ಭಾಗವಾಗಿದ್ದು, ಉನ್ನತಾಧಿಕಾರ ಸಮಿತಿಯಲ್ಲಿ ಸದಸ್ಯತ್ವ ಕಳೆದುಕೊಂಡಿರುವ ಪಿಎಲ್ ಪುನಿಯಾ ಮತ್ತು ಟಿಎಸ್ ಸಿಂಗ್ ಡಿಯೋ ಅವರಂತಹ ಹಲವಾರು ನಾಯಕರು ಚುನಾವಣಾ ಸಮಿತಿಯಲ್ಲಿ ಆಯ್ಕೆಯಾಗಿದ್ದಾರೆ.

ರಾಜ್ಯ ಪಕ್ಷದ ನಾಯಕತ್ವದೊಂದಿಗೆ ಭಿನ್ನಾಭಿಪ್ರಾಯ ಹೊಂದಿರುವ ಎನ್​ ಉತ್ತಮ್ ಕುಮಾರ್ ರೆಡ್ಡಿ ಅವರಂತಹ ನಾಯಕರಿಗೆ ಅವಕಾಶ ಕಲ್ಪಿಸಲಾಗೊದೆ. ಆಂಟನಿ ಅವರನ್ನು ಕೇಂದ್ರ ಚುನಾವಣಾ ಸಮಿತಿyಲ್ಲಿ ಉಳಿಸಿಕೊಂಡಿದ್ದರೂ ರಾಜಕೀಯದಲ್ಲಿ ನಿವೃತ್ತಿಯಲ್ಲಿರುವುದರಿಂದ ಕರ್ನಾಟಕ ರಾಜ್ಯ ಇಂಧನ ಸಚಿವ ಕೆ.ಜೆ ಜಾರ್ಜ್ ಅವರು ಉನ್ನತ ಅಧಿಕಾರದ ಸಮಿತಿಯಲ್ಲಿ ಏಕೈಕ ಕ್ರಿಶ್ಚಿಯನ್​​​ ನಾಯಕರಾಗಿದ್ದಾರೆ.

ರಾಷ್ಟ್ರೀಯ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.