ದೆಹಲಿ: ತೀವ್ರವಲ್ಲದ ಕೊವಿಡ್-19 ಪ್ರಕರಗಳಿಗೆ ಪದೇ ಪದೇ ಸಿಟಿ ಸ್ಕ್ಯಾನ್ ಮಾಡುವುದು ಒಳ್ಳೆಯದಲ್ಲ. ಇದರಿಂದ ಆರೋಗ್ಯಕ್ಕೆ ಹೆಚ್ಚಿನ ಕೆಡುಕು ಉಂಟಾಗುತ್ತದೆ ಎಂದು ಏಮ್ಸ್ ನಿರ್ದೇಶಕ ಡಾ.ರಣದೀಪ್ ಗುಲೇರಿಯಾ ಹೇಳಿದ್ದಾರೆ.ಕೊವಿಡ್ ಪಾಸಿಟಿವ್ ಎಂದು ತಿಳಿದ ಕೂಡಲೇ ಜನರು ಸಿಟಿ ಸ್ಕ್ಯಾನ್ ಮಾಡಿಸಲು ಮುಂದಾಗುತ್ತಾರೆ. ಇದು ಸಿಟಿ ಸ್ಕ್ಯಾನ್ನ ದುರ್ಬಳಕೆ ಮತ್ತು ಇದರಿಂದ ಬಯೋಮಾರ್ಕರ್ಗೆ ಹಾನಿಯಾಗುತ್ತದೆ ಎಂದು ಹೇಳಿದ್ದಾರೆ.
ಒಂದು ಸಿಟಿ ಸ್ಕ್ಯಾನ್ ಎದೆಗೆ ಮಾಡಿಸುವ 300-400 ಎಕ್ಸ್ ರೇ (Chest X-rays)ಗಳಿಗೆ ಸಮ. ಮಾಹಿತಿಗಳ ಪ್ರಕಾರ ಯುವಜವರು ಪದೇ ಪದೇ ಸಿಟಿ ಸ್ಕ್ಯಾನ್ ಮಾಡಿಸಿಕೊಂಡರೆ ಕ್ಯಾನ್ಸರ್ಗೆ ಆಹ್ವಾನ ನೀಡಿದಂತೆ. ವಿಕಿರಣಗಳಿಗೆ ಪದೇ ಪದೇ ತೆರೆದುಕೊಳ್ಳುವುದರಿಂದ ಹಾನಿ ಸಂಭವಿಸುತ್ತದೆ. ಆಕ್ಸಿಜನ್ ಸ್ಯಾಚುರೇಷನ್ ನಾರ್ಮಲ್ ಆಗಿದ್ದು , ತೀವ್ರವಲ್ಲದ ಕೊವಿಡ್ ಆಗಿದ್ದರೆ ಸಿಟಿ ಸ್ಕ್ಯಾನ್ ಮಾಡುವ ಅಗತ್ಯವಿಲ್ಲ ಎಂದಿದ್ದಾರೆ ಗುಲೇರಿಯಾ.
ಅಧ್ಯಯನ ವರದಿಯೊಂದನ್ನು ಉಲ್ಲೇಖಿಸಿದ ಗುಲೇರಿಯಾ, ತೀವ್ರವಲ್ಲದ ಕೊವಿಡ್ ಮತ್ತು ಲಕ್ಷಣಗಳಿಲ್ಲ ರೋಗ ಸಂದರ್ಭಗಳಲ್ಲಿ ಸಿಟಿ ಸ್ಕ್ಯಾನ್ ಮಾಡಿದರೆ ಪ್ಯಾಚೆಸ್ (ಶ್ವಾಸಕೋಶದಲ್ಲಿನ ಸೋಂಕಿನ ಗುರುತು) ಕಂಡು ಬರಬಹುದು. ಚಿಕಿತ್ಸೆ ಇಲ್ಲದೆಯೂ ಅವು ತಾವಾಗಿಯೇ ಗುಣವಾಗುತ್ತದೆ. ಆಸ್ಪತ್ರೆಗೆ ದಾಖಲಾದಾಗ ಸಿಟಿ ಸ್ಕ್ಯಾನ್‌ಗಳನ್ನು ಮಾಡಬಹುದು ಎಂದು ಅವರು ಸಲಹೆ ನೀಡಿದರೆ, ಜನರಿಗೆ ಅನುಮಾನವಿದ್ದರೆ ಅವರು ಎದೆಯ ಎಕ್ಸ್ ರೇ ಮಾಡಿಸಬಹುದು.
CT-SCan and biomarkers are being misused. There is no advantage in doing CT-Scan if you have mild symptoms. One CT-Scan is equivalent to 300 chest x-rays, it’s very harmful: AIIMS Director Dr. Randeep Guleria pic.twitter.com/fBX19cwRcD
— ANI (@ANI) May 3, 2021
ಒಂದು ರೋಗ ಅಥವಾ ಸ್ಥಿತಿಯ ಚಿಕಿತ್ಸೆಗೆ ದೇಹವು ಎಷ್ಟು ಚೆನ್ನಾಗಿ ಪ್ರತಿಕ್ರಿಯಿಸುತ್ತದೆ ಎಂಬುದನ್ನು ನೋಡಲು ಬಳಸುವ ಬಯೋಮಾರ್ಕರ್‌ಗಳ ಬಗ್ಗೆ ಮಾತನಾಡಿದ ಗುಲೇರಿಯಾ, ಒಬ್ಬ ವ್ಯಕ್ತಿಗೆ ತೀವ್ರವಲ್ಲದ ಕೊವಿಡ್ ಇದ್ದರೆರಕ್ತ ಪರೀಕ್ಷೆಗಳಿಗೆ ಹೋಗಬೇಕಾದ ಅಗತ್ಯವಿಲ್ಲ. ಸಿಪಿಸಿ ಅಥವಾ ಎಲ್‌ಡಿಹೆಚ್ ಇವು ಆತಂಕ ಸೃಷ್ಟಿಸುತ್ತವೆ. ಈ ಬಯೋಮಾರ್ಕರ್‌ಗಳು ತೀವ್ರ ಹಂತದ ಪ್ರತಿಕ್ರಿಯಾಕಾರಿಗಳಾಗಿದ್ದು ಅದು ನಿಮ್ಮ ದೇಹದಲ್ಲಿ ಉರಿಯೂತ ಹೆಚ್ಚು ಮಾಡುತ್ತವೆ. ಅಧಿಕ ಸ್ಟಿರಾಯ್ಡ್ ಸೇವನೆಯಿಂದ ವೈರಲ್ ನ್ಯುಮೋನಿಯಾಗೆ ಕಾರಣವಾಗಬಹುದು ಎಂದು ಗುಲೇರಿಯಾ ಎಚ್ಚರಿಸಿದ್ದಾರೆ.
ಕೆಲವು ರೋಗಿಗಳು ರೋಗದ ಆರಂಭದಲ್ಲಿ ಸ್ಟಿರಾಯ್ಡ್ಗಳನ್ನು ತೆಗೆದುಕೊಳ್ಳುತ್ತಾರೆ, ಇದು ವೈರಲ್ ದ್ವಿಗುಣವಾಗಿಸುತ್ತದೆ. ತೀವ್ರವಲ್ಲದ ಕೊವಿಡ್ ರೋಗವಾಗಿದ್ದರೆ ಹೆಚ್ಚಿನ ಪ್ರಮಾಣದ ಸ್ಟಿರಾಯ್ಡ್ ತೆಗೆದುಕೊಳ್ಳುವುದರಿಂದ ತೀವ್ರವಾದ ವೈರಲ್ ನ್ಯುಮೋನಿಯಾಕ್ಕೆ ಕಾರಣವಾಗಬಹುದು. ಸ್ಟಿರಾಯ್ಡ್ ಮಧ್ಯಮ ಹಂತದಲ್ಲಿ ಮತ್ತು ವೈದ್ಯರ ಸಲಹೆಯಂತೆ ತೆಗೆದುಕೊಳ್ಳಬೇಕು ಎಂದು ಗುಲೇರಿಯಾ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: Karnataka Covid Curfew: ಮೇ 22ರವರೆಗೂ ಕರ್ನಾಟಕದಲ್ಲಿ ಕೊವಿಡ್ ಕರ್ಫ್ಯೂ; ಸಿಎಂ ಯಡಿಯೂರಪ್ಪ ಘೋಷಣೆ
ಸಿಟಿ ಸ್ಕ್ಯಾನ್, ರಕ್ತ ತಪಾಸಣೆ, ಸ್ಟೀರಾಯ್ಡ್ ಯಾವಾಗ ಅಗತ್ಯ?-ಅಪಾಯದ ಮುನ್ನೆಚ್ಚರಿಕೆ ಕೊಟ್ಟಿದ್ದಾರೆ ಏಮ್ಸ್ ನಿರ್ದೇಶಕ
Published On - 6:44 pm, Tue, 4 May 21