Video: ರಾಮಾಯಣಕ್ಕೆ ಅವಮಾನ ಮಾಡಿದ ಏಮ್ಸ್ ವಿದ್ಯಾರ್ಥಿಗಳಿಂದ ಕ್ಷಮೆ ಯಾಚನೆ
ಏಮ್ಸ್ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದ್ದ ರಾಮಾಯಣಕ್ಕೆ ಸಂಬಂಧಪಟ್ಟ ಸ್ಕಿಟ್ (ವಿಡಂಬನೆ)ನಿಂದ ತೀವ್ರ ವಿವಾದ ಸೃಷ್ಟಿಯಾದ ಹಿನ್ನೆಲೆಯಲ್ಲಿ ಏಮ್ಸ್ ವಿದ್ಯಾರ್ಥಿಗಳ ಸಂಘ (Students Association of AIIMS) ಕ್ಷಮೆಯಾಚಿಸಿದೆ. ಇವರ ಸ್ಕಿಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಬೆನ್ನಲ್ಲೇ ಜನರಿಂದ ತೀವ್ರ ಅಸಮಾಧಾನ ವ್ಯಕ್ತವಾಗಿತ್ತು. ಪ್ರಮಾದದ ಅರಿವಾಗುತ್ತಿದ್ದಂತೆ ಕ್ಷಮೆಯಾಚಿಸಿದ ವಿದ್ಯಾರ್ಥಿಗಳ ಸಂಘ, ನಮಗೆ ಯಾರ ಭಾವನೆಗಳಿಗೂ ನೋವುಂಟುಮಾಡುವ ಉದ್ದೇಶವಿರಲಿಲ್ಲ. ಮುಂದೆ ಕೂಡ ಇಂಥ ಪ್ರಮಾದ ಆಗದ ರೀತಿ ಎಚ್ಚರವಹಿಸುತ್ತೇವೆ ಎಂದು ಹೇಳಿಕೊಂಡಿದೆ. ರಾಮಾಯಣಕ್ಕೆ ಹಾಸ್ಯದ ಸ್ಪರ್ಶಕೊಟ್ಟು ಏಮ್ಸ್ ವಿದ್ಯಾರ್ಥಿಗಳು […]
ಏಮ್ಸ್ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದ್ದ ರಾಮಾಯಣಕ್ಕೆ ಸಂಬಂಧಪಟ್ಟ ಸ್ಕಿಟ್ (ವಿಡಂಬನೆ)ನಿಂದ ತೀವ್ರ ವಿವಾದ ಸೃಷ್ಟಿಯಾದ ಹಿನ್ನೆಲೆಯಲ್ಲಿ ಏಮ್ಸ್ ವಿದ್ಯಾರ್ಥಿಗಳ ಸಂಘ (Students Association of AIIMS) ಕ್ಷಮೆಯಾಚಿಸಿದೆ. ಇವರ ಸ್ಕಿಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಬೆನ್ನಲ್ಲೇ ಜನರಿಂದ ತೀವ್ರ ಅಸಮಾಧಾನ ವ್ಯಕ್ತವಾಗಿತ್ತು. ಪ್ರಮಾದದ ಅರಿವಾಗುತ್ತಿದ್ದಂತೆ ಕ್ಷಮೆಯಾಚಿಸಿದ ವಿದ್ಯಾರ್ಥಿಗಳ ಸಂಘ, ನಮಗೆ ಯಾರ ಭಾವನೆಗಳಿಗೂ ನೋವುಂಟುಮಾಡುವ ಉದ್ದೇಶವಿರಲಿಲ್ಲ. ಮುಂದೆ ಕೂಡ ಇಂಥ ಪ್ರಮಾದ ಆಗದ ರೀತಿ ಎಚ್ಚರವಹಿಸುತ್ತೇವೆ ಎಂದು ಹೇಳಿಕೊಂಡಿದೆ.
ರಾಮಾಯಣಕ್ಕೆ ಹಾಸ್ಯದ ಸ್ಪರ್ಶಕೊಟ್ಟು ಏಮ್ಸ್ ವಿದ್ಯಾರ್ಥಿಗಳು ಪ್ರದರ್ಶನ ನೀಡಿದ್ದರು. ಅದರಲ್ಲಿ ಶೂರ್ಫನಖಿಯ ಪಾತ್ರವನ್ನು ತುಂಬ ಆಧುನಿಕವಾಗಿ ರೂಪಿಸಲಾಗಿತ್ತು. ಆಕೆ ತ್ರೀಫೋರ್ಥ್ ಪ್ಯಾಂಟ್ ಹಾಕಿಕೊಂಡು ನಟಿಸಿದ್ದಳು. ತೂ ಚೀಜ್ ಬಡಿ ಹೈ ಮಸ್ತ್ ಮಸ್ತ್ ಎಂಬ ಹಾಡನ್ನು ಲಕ್ಷ್ಮಣನನ್ನು ಉಲ್ಲೇಖಿಸಿ ಹಾಡಿದ್ದಳು. ಅದಾದ ಬಳಿಕ ಲಕ್ಷ್ಮಣ ಶೂರ್ಪನಖಿ ಮೂಗನ್ನು ಕತ್ತರಿಸಿದ್ದ. ನನ್ನ ಸಹೋದರ ಯಾರೆಂದು ನಿನಗೆ ತಿಳಿದಿಲ್ಲವೇ ಎಂದು ಆಕೆ ಪ್ರಶ್ನಿಸುವಂತೆ ಸ್ಕಿಟ್ ಸಾಗಿದೆ. ಆದರೆ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಬಳಿಕ ನೆಟ್ಟಿಗರು ಅದನ್ನು ಮೆಚ್ಚಿಕೊಳ್ಳಲಿಲ್ಲ. ರಾಮಲೀಲಾಕ್ಕೆ ಹಾಸ್ಯದ ಸ್ಪರ್ಶ ಕೊಡಲು ಹೋಗಿ ಹಿಂದುಗಳ ಭಾವನೆಗೆ ಧಕ್ಕೆ ಮಾಡಲಾಗಿದೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು. ಅಂದಹಾಗೆ ಈ ಶೋವನ್ನು ಎಂಬಿಬಿಎಸ್ ವಿದ್ಯಾರ್ಥಿ ಸೋಯೆಬ್ ಅಫ್ತಾಬ್ ಹೋಸ್ಟ್ ಮಾಡಿದ್ದ..ಶೈಕ್ಷಣಿಕ ಆ್ಯಪ್ವೊಂದು ಇದನ್ನು ಪ್ರಾಯೋಜಿಸಿತ್ತು ಎಂಬುದು ಗೊತ್ತಾಗಿದೆ.
Ramayana mocked & insulted by the youth at Delhi AIIMS during #Ramleela. Reportedly the show was Hosted by a 1st-year MBBS student Soyeb Aftab. Education app @unacademy is blatantly supporting all the disrespect and mockery of Sanatan dharma by showing the videos on its platform. pic.twitter.com/EWwebRTPVN
— Organiser Weekly (@eOrganiser) October 17, 2021
ಇದನ್ನೂ ಓದಿ: ಭಾರತ-ಪಾಕ್ ಪಂದ್ಯದ ದಿನ ಸೋಶಿಯಲ್ ಮೀಡಿಯಾದಿಂದ ದೂರವಾಗಲಿದ್ದಾರೆ ಸಾನಿಯಾ ಮಿರ್ಜಾ! ಕಾರಣವೇನು ಗೊತ್ತಾ?
‘ತಾಳಿ ಕಟ್ಟುವಾಗಲೇ ಹೆಂಡತಿ ಮುಖ ನೋಡಿದ್ದು’: ಹಿರಿಯ ನಟ ದೊಡ್ಡಣ್ಣ ಮದುವೆಯ ರಿಯಲ್ ಸ್ಟೋರಿ