ವಿಕೆ ಶಶಿಕಲಾ ನಡೆಗೆ ಸಿಕ್ಕಾಪಟೆ ಕೋಪಗೊಂಡ ಎಐಎಡಿಎಂಕೆ ನಾಯಕ; ಮತ್ತೊಮ್ಮೆ ಮಾಡದಿರಿ ಎಂದು ಎಚ್ಚರಿಕೆ !
ಎಐಎಡಿಎಂಕೆ 50ನೇ ವರ್ಷದ ಸಂಸ್ಥಾಪನಾ ದಿನದ ನಿಮಿತ್ತ ವಿಕೆ ಶಶಿಕಲಾ ಸಂಸ್ಥಾಪಕ ಎಂ.ಜಿ.ರಾಮಚಂದ್ರನ್ ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ. ಅವರ ಸ್ಮಾರಕದ ಬಳಿ ಪಕ್ಷದ ಧ್ವಜ ಹಾರಿಸಿ, ಅಲ್ಲಿ ನೆರೆದಿದ್ದವರಿಗೆಲ್ಲ ಸಿಹಿ ಹಂಚಿದ್ದಾರೆ.
ಚೆನ್ನೈ: ತಮಿಳುನಾಡಿನಲ್ಲೀಗ ವಿ.ಕೆ.ಶಶಿಕಲಾ (VK Sasikala) ನಡೆಯೇ ಕುತೂಹಲಕ್ಕೆ ಕಾರಣವಾಗಿದೆ. ಈ ವರ್ಷ ಫೆಬ್ರವರಿಯಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದ ಅವರು ತಾವು ರಾಜಕೀಯದಿಂದ ದೂರ ಉಳಿಯುವುದಾಗಿಯೇ ಹೇಳಿಕೊಂಡಿದ್ದರು. ಆದರೆ ಈಗ ಮತ್ತೆ ರಾಜಕಾರಣದತ್ತ ಮುಖಮಾಡುತ್ತಿದ್ದಾರಾ? ಎಂಬ ಪ್ರಶ್ನೆಯೊಂದು ಹುಟ್ಟುವಂತೆ ವರ್ತಿಸುತ್ತಿದ್ದಾರೆ. ಈಗಂತೂ ತಮ್ಮ ನಡೆಯಿಂದಾಗಿ ಎಐಎಡಿಎಂಕೆ(AIADMK)ಯ ಕೆಲವು ನಾಯಕರ ಕೆಂಗಣ್ಣಿಗೂ ಗುರಿಯಾಗಿದ್ದಾರೆ.
ವಿ.ಕೆ.ಶಶಿಕಲಾ ಚೆನ್ನೈನ ಟಿ ನಗರ್ನಲ್ಲಿರುವ ಎಂಜಿಆರ್ ಸ್ಮಾರಕದ ಬಳಿ ಎಐಎಡಿಎಂಕೆ ಪಕ್ಷದ ಧ್ವಜ ಹಾರಿಸಿದ್ದೇ ಈ ಸಿಟ್ಟಿಗೆ ಕಾರಣ. ಪಕ್ಷದ 50ನೇ ಸಂಸ್ಥಾಪನಾ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಶಶಿಕಲಾ ಹೀಗೆ ಪಕ್ಷದ ಧ್ವಜ ಹಾರಿಸಿದ್ದನ್ನು ಎಐಎಡಿಎಂಕೆ ನಾಯಕ, ಮಾಜಿ ಸಚಿವ ಡಿ.ಜಯಕುಮಾರ್ ವಿರೋಧಿಸಿದ್ದಾರೆ. ನಿಜ ಹೇಳಬೇಕೆಂದರೆ ಶಶಿಕಲಾ ಅವರು ಪಕ್ಷದಿಂದ ಉಚ್ಚಾಟಿಸಲ್ಪಟ್ಟವರು. ಅವರಿಗೆ ನಮ್ಮ ಪಕ್ಷದ ಧ್ವಜ, ಹೆಸರು, ಚಿಹ್ನೆಯನ್ನು ಬಳಸಿಕೊಳ್ಳುವ ಯಾವ ಹಕ್ಕೂ ಇಲ್ಲ. ಅಂಥದ್ದರಲ್ಲಿ ಅವರು ಹೇಗೆ ಪಕ್ಷದ ಧ್ವಜ ಹಾರಿಸುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಶಶಿಕಲಾ ತಮ್ಮನ್ನು ತಾವು ಎಐಎಡಿಎಂಕೆಯ ಪ್ರಧಾನ ಕಾರ್ಯದರ್ಶಿ ಎಂದು ಕರೆದುಕೊಂಡಿದ್ದಾರೆ. ಅವರ ಬೆಂಬಲಿಗರೂ ಕೂಡ ಹೀಗೇ ಹೇಳುತ್ತಿದ್ದಾರೆ. ಇದನ್ನೂ ಸಹ ಡಿ.ಜಯಕುಮಾರ್ ವಿರೋಧಿಸಿದ್ದಾರೆ..ಹಾಗೆ ಕರೆಯುವಂತಿಲ್ಲ. ಇದು ನ್ಯಾಯಾಲಯದ ಆದೇಶಕ್ಕೆ ವಿರುದ್ಧವಾದ ನಡೆಯಾಗಲಿದೆ ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ.
Chennai | Expelled AIADMK leader VK Sasikala hoists AIADMK flag and distributes sweets outside MGR memorial at T-Nagar on the party’s 50th anniversary pic.twitter.com/y1CtX1AoEy
— ANI (@ANI) October 17, 2021
ಎಐಎಡಿಎಂಕೆ 50ನೇ ವರ್ಷದ ಸಂಸ್ಥಾಪನಾ ದಿನದ ನಿಮಿತ್ತ ವಿಕೆ ಶಶಿಕಲಾ ಸಂಸ್ಥಾಪಕ ಎಂ.ಜಿ.ರಾಮಚಂದ್ರನ್ ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ. ಅವರ ಸ್ಮಾರಕದ ಬಳಿ ಪಕ್ಷದ ಧ್ವಜ ಹಾರಿಸಿ, ಅಲ್ಲಿ ನೆರೆದಿದ್ದವರಿಗೆಲ್ಲ ಸಿಹಿ ಹಂಚಿದ್ದಾರೆ. ನಿನ್ನೆ ಚೆನ್ನೈನ ಮರೀನಾ ಬೀಚ್ಗೆ ತೆರಳಿ ಜಯಲಲಿತಾ ಸ್ಮಾರಕಕ್ಕೆ ಪುಷ್ಮ ನಮನ ಸಲ್ಲಿಸಿದ್ದರು. ಆಗಲೂ ಕೂಡ ಅವರು ತೆರಳಿದ್ದ ವಾಹನಕ್ಕೆ ಎಐಎಡಿಎಂಕೆ ಬಾವುಟ ಇತ್ತು. ಇಂದು ಕೂಡ ಅವರು ತಾವು ಪಕ್ಷಕ್ಕೆ ಹಿಂದಿರುಗುವ ಸೂಚನೆ ಕೊಟ್ಟಿದ್ದಾರೆ. ಎಐಎಡಿಎಂಕೆ ಒಳಿತಿಗಾಗಿ ಮತ್ತು ಜನರ ಕಲ್ಯಾಣಕ್ಕಾಗಿ ಎಲ್ಲರೂ ಒಂದಾಗಬೇಕು ಎಂದು ಹೇಳಿದ್ದಾರೆ.
T20 World Cup: ಭಾರತ ವಿರುದ್ಧದ ಪಂದ್ಯಕ್ಕೆ ಪಾಕ್ ಪರ ಕಣಕ್ಕಿಳಿಯುವ 4 ಬೌಲರ್ಗಳನ್ನು ಹೆಸರಿಸಿದ ನಾಯಕ ಬಾಬರ್