ಬಿಹಾರ: ಪ್ರವಾಹದ ನೀರಿಗೆ ಬಿದ್ದ ಸೇನಾ ಹೆಲಿಕಾಪ್ಟರ್
ಬಿಹಾರದಲ್ಲಿ ಪ್ರವಾಹದ ನೀರಿಗೆ ಸೇನಾ ಹೆಲಿಕಾಪ್ಟರ್ ಬಿದ್ದಿರುವ ಮಾಹಿತಿ ಲಭ್ಯವಾಗಿದೆ.
ಬಿಹಾರದಲ್ಲಿ ಪ್ರವಾಹದ ನೀರಿಗೆ ಸೇನಾ ಹೆಲಿಕಾಪ್ಟರ್ ಬಿದ್ದಿರುವ ಮಾಹಿತಿ ಲಭ್ಯವಾಗಿದೆ. ಬಿಹಾರದ ಮುಜಾಫರ್‌ಪುರದಲ್ಲಿ ವಾಯುಪಡೆಯ ಹೆಲಿಕಾಪ್ಟರ್ ಪ್ರವಾಹದ ನೀರಿನಲ್ಲಿ ಬಿದ್ದಿದೆ. ಸದ್ಯ ರಕ್ಷಣಾ ಕಾರ್ಯ ನಡೆಯುತ್ತಿದೆ. ಈ ಅಪಘಾತದಲ್ಲಿ ಯಾರಿಗೂ ಯಾವುದೇ ಬಗೆಯ ಸಮಸ್ಯೆಗಳಾಗಿಲ್ಲ. ಔರೈನ ಮಧುಬನ್ ಬೆಸಿಯಲ್ಲಿ ಈ ಅಪಘಾತ ಸಂಭವಿಸಿದೆ. ಅಪಘಾತದ ವೇಳೆ ಹೆಲಿಕಾಪ್ಟರ್‌ನಲ್ಲಿ 4 ಮಂದಿ ಇದ್ದರು ಎಂದು ಹೇಳಲಾಗುತ್ತಿದೆ. ಅಪಘಾತದಲ್ಲಿ ಎಲ್ಲರೂ ಗಾಯಗೊಂಡಿದ್ದಾರೆ ಆದರೆ ಅವರ ಸ್ಥಿತಿ ಸ್ಥಿರವಾಗಿದೆ.
बिहार औराई के मधुबन बेसी में हेलीकॉप्टर क्रैश, हेलीकॉप्टर में थे 4 लोग मौजूद सभी सुरक्षित हैं। #BiharFlood pic.twitter.com/B6qPdaCWAN
— SIDDHI KUMARI 🇮🇳 (@kumari_siddhi01) October 2, 2024
ಈ ಬಗ್ಗೆ ವಾಯುಪಡೆ ತನಿಖೆಗೆ ಆದೇಶಿಸಿದೆ. ಅಪಘಾತ ಏಕೆ ಸಂಭವಿಸಿತು ಎಂಬುದರ ಕುರಿತು ವಾಯುಪಡೆ ಇನ್ನೂ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:28 pm, Wed, 2 October 24