ಪ್ಯಾರಿಸ್/ದೆಹಲಿ: ಏರ್‌ಬಸ್ ಮತ್ತು ಬೋಯಿಂಗ್ ಎರಡರಿಂದಲೂ ಹತ್ತಾರು ಶತಕೋಟಿ ಡಾಲರ್ ಮೌಲ್ಯದ 500 ಜೆಟ್‌ಲೈನರ್‌ಗಳಿಗೆ ಐತಿಹಾಸಿಕ ಆರ್ಡರ್‌ಗಳನ್ನು ನೀಡಲು ಏರ್ ಇಂಡಿಯಾ (Air India) ಚಿಂತನೆ ನಡೆಸಿದೆ. ಟಾಟಾ ಗ್ರೂಪ್ (Tata Group) ಈ ಮಹತ್ವಾಕಾಂಕ್ಷೆಯ ಯೋಜನೆ ರೂಪಿಸುತ್ತಿದೆ ಎಂದು ಉದ್ಯಮದ ಮೂಲಗಳು ಹೇಳಿರುವುದಾಗಿ ಭಾನುವಾರ ರಾಯಿಟರ್ಸ್‌ಗೆ ವರದಿ ಮಾಡಿದೆ. ಈ ಆರ್ಡರ್ ಗಳಲ್ಲಿ ಏರ್‌ಬಸ್ A350 ಮತ್ತು ಬೋಯಿಂಗ್ 787 ಮತ್ತು 777 ಸೇರಿದಂತೆ 400 ಕಿರಿದಾದ ಗಾತ್ರದ ಜೆಟ್‌ಗಳು ಮತ್ತು 100 ಅಥವಾ ಅದಕ್ಕಿಂತ ಹೆಚ್ಚು ಅಗಲವಾದ ಜೆಟ್ ಸೇರಿವೆ ಎಂದು ಅವರು ಹೇಳಿದರು. ಹೆಸರು ಹೇಳಲು ನಿರಾಕರಿಸಿದ ಅವರು ಮುಂದಿನ ದಿನಗಳಲ್ಲಿ ಬೃಹತ್ ಒಪ್ಪಂದದ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದಿದ್ದಾರೆ.
ಏರ್‌ಬಸ್ ಮತ್ತು ಬೋಯಿಂಗ್ ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿವೆ. ಈ ಬಗ್ಗೆ ಟಾಟಾ ಗ್ರೂಪ್ ತಕ್ಷಣ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ವರದಿ ಹೇಳಿದೆ.
ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ ಲಿಮಿಟೆಡ್ 150 ‘737 ಮ್ಯಾಕ್ಸ್’ ವಿಮಾನಗಳ ಖರೀದಿಗೆ ಬೋಯಿಂಗ್ ಕಂಪನಿ ಜತೆ ಒಪ್ಪಂದಕ್ಕೆ ಸಹಿ ಹಾಕಲು ಮುಂದಾಗಿದೆ. ಏರ್ ಇಂಡಿಯಾ ಖಾಸಗೀಕರಣದ ಬಳಿಕ ನಡೆಯಲಿರುವ ಅತಿ ದೊಡ್ಡ ಒಪ್ಪಂದ ಇದಾಗಿರಲಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ‘ಎಕಾನಮಿಕ್ ಟೈಮ್ಸ್’ ವರದಿ ಮಾಡಿದೆ. 50 ‘737 ಮ್ಯಾಕ್ಸ್’ ವಿಮಾನಗಳನ್ನು ಏರ್ ಇಂಡಿಯಾ ಖರೀದಿಸುವುದು ಬಹುತೇಕ ಖಚಿತವಾಗಿದೆ. ಕ್ರಮೇಣ 150 ವಿಮಾನಗಳನ್ನು ಖರೀದಿಸಲಿದೆ ಎಂದು ವರದಿ ತಿಳಿಸಿದೆ.
ಈ ಕುರಿತು ಪ್ರತಿಕ್ರಿಯಿಸಲು ಬೋಯಿಂಗ್ ವಕ್ತಾರರು ನಿರಾಕರಿಸಿದ್ದಾರೆ. ಏರ್ ಇಂಡಿಯಾ ಕೂಡ ತಕ್ಷಣಕ್ಕೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ. ಹೆಚ್ಚು ಇಂಧನ ದಕ್ಷತೆಯುಳ್ಳ ವಿಮಾನಗಳನ್ನು ಖರೀದಿಸುವ ಮೂಲಕ ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಾರ್ಯಾಚರಣೆ ಹೆಚ್ಚಿಸುವುದು ಏರ್ ಇಂಡಿಯಾ ಉದ್ದೇಶ ಎನ್ನಲಾಗಿದೆ. ಸಿಂಗಾಪುರ ಏರ್ಲೈನ್ಸ್ನ ವಿಸ್ತಾರವನ್ನು ಏರ್ ಇಂಡಿಯಾ ಜತೆ ವಿಲೀನಗೊಳಿಸುವ ಟಾಟಾ ನಿರ್ಧಾರವು ಏರ್ ಇಂಡಿಯಾವನ್ನು ಜಗತ್ತಿನ ವಿಮಾನಯಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಳ್ಳುವಂತೆ ಮಾಡಲಿದೆ ಎಂದು ವರದಿ ತಿಳಿಸಿದೆ. ಈ ವಿಲೀನದಿಂದ ಏರ್ ಇಂಡಿಯಾ ದೇಶದ ಅತಿದೊಡ್ಡ ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆ, ಎರಡನೇ ಅತಿದೊಡ್ಡ ಸ್ಥಳೀಯ ವಿಮಾನಯಾನ ಸಂಸ್ಥೆಯಾಗಿ ಗುರುತಿಸಿಕೊಳ್ಳಲಿದೆ. ವಿಲೀನದ ಬಳಿಕ ಏರ್ ಇಂಡಿಯಾ ಬಳಿ ಇರುವ ವಿಮಾನಗಳ ಸಂಖ್ಯೆ 218 ಆಗಿರಲಿದೆ.
ಏರ್‌ಬಸ್ ಮತ್ತು ಬೋಯಿಂಗ್ ಜತೆ 50 ಶತಕೋಟಿ ಡಾಲರ್ ವಿಮಾನ ಖರೀದಿ ಒಪ್ಪಂದಕ್ಕೆ ಏರ್ ಇಂಡಿಯಾ ಮುಂದಾಗಿದೆ ಎಂದು ಕೈಗಾರಿಕಾ ಮೂಲಗಳು ಜುಲೈನಲ್ಲಿ ತಿಳಿಸಿದ್ದವು. ಈ ಒಪ್ಪಂದ ಸಾಧ್ಯವಾದರೆ ಬೋಯಿಂಗ್ಗೆ ಭಾರತದಿಂದ ಬೇಡಿಕೆ ಕುದುರಿಸಿಕೊಳ್ಳುವಲ್ಲಿ ದೊಡ್ಡ ಮಟ್ಟದ ಯಶಸ್ಸು ದೊರೆತಂತಾಗಲಿದೆ. ಈ ಹಿಂದೆ 2021ರಲ್ಲಿ ಆಕಾಸ ಏರ್ಲೈನ್ 72 ‘737 ಮ್ಯಾಕ್ಸ್’ ವಿಮಾನ ಖರೀದಿಗೆ ಆರ್ಡರ್ ಮಾಡಿದ್ದು ಬಿಟ್ಟರೆ ನಂತರ ಯಾವುದೇ ಆರ್ಡರ್ ಬೋಯಿಂಗ್ಗೆ ಸಿಕ್ಕಿರಲಿಲ್ಲ.
ಟಾಟಾ ಮಾಲೀಕತ್ವ ವಹಿಸಿಕೊಂಡ ಬಳಿಕ ಏರ್ ಇಂಡಿಯಾ ತನ್ನ ಉದ್ಯಮ ಬೆಳೆಸುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಂಡಿದೆ. 5 ಶತಕೋಟಿ ಡಾಲರ್ ಮೌಲ್ಯದ ಕ್ಯಾರಿಯರ್ಗಳನ್ನು ಹೊಂದುವ ಸಲುವಾಗಿ 1 ಶತಕೋಟಿ ಡಾಲರ್ ಫಡಿಂಗ್ ಸಂಗ್ರಹಿಸುವ ಬಗ್ಗೆಯೂ ಏರ್ ಇಂಡಿಯಾ ಚಿಂತನೆ ನಡೆಸಿದೆ ಎಂದು ಬೆಳವಣಿಗೆಗಳ ಬಗ್ಗೆ ನಿಕಟ ಮಾಹಿತಿ ಹೊಂದಿರುವ ಮೂಲಗಳು ಇತ್ತೀಚೆಗೆ ತಿಳಿಸಿದ್ದವು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ