ತಪ್ಪಿದ ಭಾರೀ ಅನಾಹುತ; ಮುಂಬೈ ವಿಮಾನ ನಿಲ್ದಾಣದಲ್ಲಿ ಹೊತ್ತಿ ಉರಿದ ಪುಶ್​ಬ್ಯಾಕ್ ವಾಹನ

| Updated By: ಸುಷ್ಮಾ ಚಕ್ರೆ

Updated on: Jan 10, 2022 | 6:36 PM

ಮುಂಬೈ ವಿಮಾನ ನಿಲ್ದಾಣದಲ್ಲಿ ಪುಷ್‌ಬ್ಯಾಕ್ ಟ್ರ್ಯಾಕ್ಟರ್‌ಗೆ ಇಂದು ಬೆಂಕಿ ಹೊತ್ತಿಕೊಂಡಿದೆ. ಯಾರಿಗೂ ಯಾವುದೇ ರೀತಿಯ ಗಾಯ ಅಥವಾ ಪ್ರಾಣಹಾನಿ ಆಗಿಲ್ಲ

ತಪ್ಪಿದ ಭಾರೀ ಅನಾಹುತ; ಮುಂಬೈ ವಿಮಾನ ನಿಲ್ದಾಣದಲ್ಲಿ ಹೊತ್ತಿ ಉರಿದ ಪುಶ್​ಬ್ಯಾಕ್ ವಾಹನ
ಮುಂಬೈ ವಿಮಾನ ನಿಲ್ದಾಣದಲ್ಲಿ ಪುಶ್​ಬ್ಯಾಕ್ ವಾಹನಕ್ಕೆ ಬೆಂಕಿ
Follow us on

ಮುಂಬೈ: ಮಹಾರಾಷ್ಟ್ರದ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದೊಡ್ಡ ದುರಂತವೊಂದು ಕೊಂಚದರಲ್ಲೇ ತಪ್ಪಿದೆ. ಏರ್​ ಇಂಡಿಯಾ ವಿಮಾನಕ್ಕೆ ಪುಶ್​​ಬ್ಯಾಕ್​ ನೀಡುತ್ತಿದ್ದ ವಾಹನ ವಿಮಾನದ ಬಳಿಯೇ ಹೊತ್ತಿ ಉರಿದಿದೆ. ಇಂದು ಬೆಳಗ್ಗೆ 11 ಗಂಟೆಗೆ ಈ ಘಟನೆ ನಡೆದಿದೆ. ಅದೃಷ್ಟವಶಾತ್ ವಿಮಾನದಲ್ಲಿರುವವರಿಗೆ ಮತ್ತು ಹೊರಭಾಗದಲ್ಲಿದ್ದ ಸಿಬ್ಬಂದಿಗೆ ಯಾವುದೇ ಅಪಾಯವಾಗಿಲ್ಲ.

ಮುಂಬೈ ವಿಮಾನ ನಿಲ್ದಾಣದ ಅಧಿಕಾರಿಗಳು 10 ನಿಮಿಷದಲ್ಲಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಲಭ್ಯವಾಗಿರುವ ಮಾಹಿತಿ ಪ್ರಕಾರ, ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಯಾರಿಗೂ ಯಾವುದೇ ರೀತಿಯ ಗಾಯ ಅಥವಾ ಪ್ರಾಣಹಾನಿ ಆಗಿಲ್ಲ. ಏರ್​ ಇಂಡಿಯಾ ವಿಮಾನ ಮುಂಬೈನಿಂದ ಗುಜರಾತ್‌ನ ಜಾಮ್​ನಗರಕ್ಕೆ ತೆರಳುತ್ತಿತ್ತು. ಇದರಲ್ಲಿ 85 ಪ್ರಯಾಣಿಕರಿದ್ದರು ಎಂದು ತಿಳಿದು ಬಂದಿದೆ.

ಮುಂಬೈ ವಿಮಾನ ನಿಲ್ದಾಣದಲ್ಲಿ ಪುಷ್‌ಬ್ಯಾಕ್ ಟ್ರ್ಯಾಕ್ಟರ್‌ಗೆ ಇಂದು ಬೆಂಕಿ ಹೊತ್ತಿಕೊಂಡಿದೆ. ಏರ್ ಇಂಡಿಯಾ ವಾಹನವು V26R ಸ್ಟ್ಯಾಂಡ್‌ನಲ್ಲಿತ್ತು. ವಿಮಾನಕ್ಕೆ ಯಾವುದೇ ಹಾನಿಯಾಗಿಲ್ಲ.

ಇದನ್ನೂ ಓದಿ: Bengaluru: ಸಿಲಿಂಡರ್ ಸ್ಫೋಟವಾಗಿ 7 ಜನರಿಗೆ ಗಾಯ; ಬೆಂಕಿ ನಂದಿಸುತ್ತಿರುವ 9ಕ್ಕೂ ಹೆಚ್ಚು ಅಗ್ನಿಶಾಮಕ ವಾಹನ

ಟೇಕ್​ ಆಫ್​ ಆಗುವ ಮೊದಲೇ ರೈಲ್ವೆ ಹಳಿಯ ಮೇಲೆ ಬಿದ್ದ ವಿಮಾನ: ಪೊಲೀಸರ ಸಮಯ ಪ್ರಜ್ಞೆಯಿಂದ ಬದುಕುಳಿದ ಪೈಲೆಟ್​