ಮಣಿಪುರ: ವಿಧಾನಸಭೆ ಚುನಾವಣೆಗೆ ಮುನ್ನ ಬಿಜೆಪಿ ಕಾರ್ಯಕರ್ತ ಸೇರಿ ಇಬ್ಬರ ಹತ್ಯೆ

ಮಣಿಪುರ: ವಿಧಾನಸಭೆ ಚುನಾವಣೆಗೆ ಮುನ್ನ ಬಿಜೆಪಿ ಕಾರ್ಯಕರ್ತ ಸೇರಿ ಇಬ್ಬರ ಹತ್ಯೆ
ಬಿಜೆಪಿ (ಪ್ರಾತಿನಿಧಿಕ ಚಿತ್ರ)

ಇದು ಹೇಡಿತನದ ಕೃತ್ಯ ಎಂದು ಸಚಿವ ಲುಖೋಯ್ ಹೇಳಿದ್ದಾರೆ "ಅವರ ತಪ್ಪುಗಳು ಏನೇ ಇರಲಿ, ಅವರ ಮಾರ್ಗಗಳನ್ನು ಸರಿಪಡಿಸಲು ಅವರಿಗೆ ಅವಕಾಶ ನೀಡಬೇಕು. ಕೊಲ್ಲುವುದು ಪರಿಹಾರವಲ್ಲ'' ಎಂದು ಸಚಿವರು ಹೇಳಿದ್ದಾರೆ.

TV9kannada Web Team

| Edited By: Rashmi Kallakatta

Jan 10, 2022 | 5:53 PM

ಇಂಫಾಲ್: ಮಣಿಪುರದ ಸಚಿವರೊಬ್ಬರಿಗೆ (Manipur) ನಿಕಟವಾಗಿರುವ ಬಿಜೆಪಿ (BJP) ಕಾರ್ಯಕರ್ತ ಮತ್ತು ಅವರ ಸೋದರ ಸಂಬಂಧಿಯನ್ನು ಇಂಫಾಲ್ ಪಶ್ಚಿಮ ಜಿಲ್ಲೆಯ ಸಮುರೌನಲ್ಲಿ ಭಾನುವಾರ ರಾತ್ರಿ ಗುಂಡಿಕ್ಕಿ ಹತ್ಯೆ ಮಾಡಲಾಗಿದ್ದು ಇದು ಈಶಾನ್ಯ ರಾಜ್ಯದಲ್ಲಿ ರಾಜಕೀಯ ಹಿಂಸಾಚಾರ ಎಂದು ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ (N Biren Singh)ಅವರು ಹೇಳಿದ್ದಾರೆ. ಕೃಷಿ ಸಚಿವ ಓ ಲುಖೋಯ್  (O Lukhoi)ಅವರ ನಿಕಟವರ್ತಿ ಅಬುಜಮ್ ಜಾನ್ (57) ಮತ್ತು ಅವರ ಸೋದರಸಂಬಂಧಿ ಅಬುಜಮ್ ಶಶಿಕಾಂತ, ಇಂಡಿಯಾ ರಿಸರ್ವ್ ಬೆಟಾಲಿಯನ್‌ನಲ್ಲಿ ಹವಿಲ್ದಾರ್ ಆಗಿದ್ದು, ಜಾನ್ ಅವರ ಮನೆಯ ಬಳಿ ರಾತ್ರಿ 10 ಗಂಟೆಗೆ ಸಮುರೌ ಬಜಾರ್‌ನಲ್ಲಿ ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಅವರು ಇಂಫಾಲ್‌ನ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜಾನ್ ಅವರ ಪತ್ನಿ ಬಿಮೋ ಪ್ರಕಾರ  ಅವರ ಪತಿ ರಾತ್ರಿ ಊಟ ಮುಗಿಸಿ ಹೊರಗೆ ಹೋಗಿದ್ದರು ಮತ್ತು ಸ್ವಲ್ಪ ಸಮಯದವರೆಗೆ ಮನೆಗೆ ಹಿಂತಿರುಗಲಿಲ್ಲ. ನಾನು ಅವರನ್ನು ಹುಡುಕುತ್ತಾ ಹೊರಗೆ ಹೋದಾದ ಜಾನ್ ಶಶಿಕಾಂತನೊಂದಿಗೆ ಹರಟೆ ಹೊಡೆಯುವುದನ್ನು ಕಂಡೆ. ಕೆಲವು ಕ್ಷಣಗಳ ನಂತರ, ಒಬ್ಬ ವ್ಯಕ್ತಿ ಇಬ್ಬರನ್ನು ಸಮೀಪಿಸುತ್ತಿರುವುದನ್ನು ತಾನು ನೋಡಿದೆ. ನಂತರ ಗುಂಡಿನ ಸದ್ದು ಕೇಳಿತು ಎಂದು ಬಿಮೋ ಹೇಳಿರುವುದಾಗಿ ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ಮೃತರ ಕುಟುಂಬಗಳನ್ನು ಭೇಟಿ ಮಾಡಿದ ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್, ಘಟನೆಯನ್ನು ಖಂಡಿಸಿದ್ದು ಇದು ಬಿಜೆಪಿ ಕಾರ್ಯಕರ್ತರ ಮೇಲಿನ ದಾಳಿ. ತಪ್ಪಿತಸ್ಥರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಹೇಳಿದ್ದಾರೆ.

ಇದು ಹೇಡಿತನದ ಕೃತ್ಯ ಎಂದು ಸಚಿವ ಲುಖೋಯ್ ಹೇಳಿದ್ದಾರೆ “ಅವರ ತಪ್ಪುಗಳು ಏನೇ ಇರಲಿ, ಅವರ ಮಾರ್ಗಗಳನ್ನು ಸರಿಪಡಿಸಲು ಅವರಿಗೆ ಅವಕಾಶ ನೀಡಬೇಕು. ಕೊಲ್ಲುವುದು ಪರಿಹಾರವಲ್ಲ” ಎಂದು ಸಚಿವರು ಹೇಳಿದ್ದಾರೆ.

ಹತ್ಯೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸಮುರೌನ ಸ್ಥಳೀಯರು ರಸ್ತೆಯಲ್ಲಿ ಟೈರ್‌ಗಳನ್ನು ಸುಡುವ ಮೂಲಕ ಆ ಪ್ರದೇಶದ ಮೂಲಕ ಹಾದು ಹೋಗುವ ಹೆದ್ದಾರಿಯಲ್ಲಿ ಸಂಚಾರಕ್ಕೆ ಅಡ್ಡಿಪಡಿಸಿದರು. ಫೆಬ್ರವರಿ 27 ಮತ್ತು ಮಾರ್ಚ್ 3 ರಂದು ಚುನಾವಣೆ ನಡೆಯಲಿರುವ ಈಶಾನ್ಯ ರಾಜ್ಯದಲ್ಲಿ ರಾಜಕೀಯ ಹಿಂಸಾಚಾರ ಹೆಚ್ಚಾಗಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಹೀರೋಕ್ ತೌಬಲ್ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತ ಎಂದು ಕಾಲೇಜು ವಿದ್ಯಾರ್ಥಿಯೊಬ್ಬನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.

ಇದನ್ನೂ ಓದಿ: ಸೈನಾ ನೆಹ್ವಾಲ್ ಟ್ವೀಟ್​​ಗೆ ಕೆಟ್ಟದಾಗಿ ಪ್ರತಿಕ್ರಿಯಿಸಿದ ನಟ ಸಿದ್ಧಾರ್ಥ್ ಟ್ವಿಟರ್ ಖಾತೆ ಬ್ಲಾಕ್ ಮಾಡಿ: ಟ್ವಿಟರ್​​ಗೆ ಮಹಿಳಾ ಆಯೋಗ ಮನವಿ

Follow us on

Related Stories

Most Read Stories

Click on your DTH Provider to Add TV9 Kannada