ಮುಂಬೈ ವಿಮಾನ ನಿಲ್ದಾಣದ ರನ್‌ವೇಯಿಂದ ಜಾರಿದ ಖಾಸಗಿ ವಿಮಾನ, ಮೂವರಿಗೆ ಗಾಯ
ವೈಜಾಗ್‌ನಿಂದ ಮುಂಬೈಗೆ ಬರುತ್ತಿದ್ದ VSR ವೆಂಚರ್ಸ್ ಲಿಯರ್‌ಜೆಟ್ 45 ವಿಮಾನ VT-DBL ವಿಮಾನವು ಮುಂಬೈ ವಿಮಾನ ನಿಲ್ದಾಣದಲ್ಲಿ ರನ್‌ವೇ 27 ರಲ್ಲಿ ಇಳಿಯುವಾಗ ಸ್ಕಿಡ್ ಆಗಿದೆ. ವಿಮಾನದಲ್ಲಿ 06 ಪ್ರಯಾಣಿಕರು ಮತ್ತು 02 ಸಿಬ್ಬಂದಿ ಇದ್ದರು. ಭಾರೀ ಮಳೆಯಿದ್ದ ಕಾರಣ ಗೋಚರತೆ 700 ಮೀಟರ್ ಆಗಿತ್ತು ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು ಹೇಳಿಕೆಯಲ್ಲಿ ತಿಳಿಸಿದೆ.
ಮುಂಬೈ ಸೆಪ್ಟೆಂಬರ್ 14: ಗುರುವಾರ ಮಳೆಯಿಂದಾಗಿ ಎಂಟು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನವೊಂದು ಮುಂಬೈ ವಿಮಾನ ನಿಲ್ದಾಣದ (Mumbai Airport) ರನ್‌ವೇಯಿಂದ ಸ್ಕಿಡ್ ಆದ ಘಟನೆ ವರದಿ ಆಗಿದೆ. ಈ ಅವಘಡದಲ್ಲಿಮೂವರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮುಂಬೈ ವಿಪತ್ತು ಪ್ರಾಧಿಕಾರ (Mumbai disaster authority) ತಿಳಿಸಿದೆ. ವೈಜಾಗ್‌ನಿಂದ ಮುಂಬೈಗೆ ಬರುತ್ತಿದ್ದ VSR ವೆಂಚರ್ಸ್ ಲಿಯರ್‌ಜೆಟ್ 45 ವಿಮಾನ VT-DBL ವಿಮಾನವು ಮುಂಬೈ ವಿಮಾನ ನಿಲ್ದಾಣದಲ್ಲಿ ರನ್‌ವೇ 27 ರಲ್ಲಿ ಇಳಿಯುವಾಗ ಸ್ಕಿಡ್ ಆಗಿದೆ. ವಿಮಾನದಲ್ಲಿ 06 ಪ್ರಯಾಣಿಕರು ಮತ್ತು 02 ಸಿಬ್ಬಂದಿ ಇದ್ದರು. ಭಾರೀ ಮಳೆಯಿದ್ದ ಕಾರಣ ಗೋಚರತೆ 700 ಮೀಟರ್ ಆಗಿತ್ತು ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯವು ಹೇಳಿಕೆಯಲ್ಲಿ ತಿಳಿಸಿದೆ.
ವಿಮಾನವು ದಿಲೀಪ್ ಬಿಲ್ಡ್‌ಕಾನ್ ಎಂಬ ಮೂಲಸೌಕರ್ಯ ಕಂಪನಿಯ ಒಡೆತನದಲ್ಲಿದೆ. ಮುಂಬೈ ವಿಮಾನ ನಿಲ್ದಾಣವು ಪ್ರಸ್ತುತ ಕಾರ್ಯಾಚರಣೆಗಾಗಿ ಮುಚ್ಚಲ್ಪಟ್ಟಿದ್ದು ಪರಿಶೀಲನೆಯಲ್ಲಿದೆ. ಮುಂಬೈ ವಿಪತ್ತು ಪ್ರಾಧಿಕಾರವು ಹಂಚಿಕೊಂಡ ಪ್ರಾಥಮಿಕ ಮಾಹಿತಿಯ ಪ್ರಕಾರ, ಘಟನೆಯನ್ನು ಮುಂಬೈ ಅಗ್ನಿಶಾಮಕ ದಳವು ಸಂಜೆ 5:45 ಕ್ಕೆ ವರದಿ ಮಾಡಿದೆ.
#WATCH | VSR Ventures Learjet 45 aircraft VT-DBL operating flight from Visakhapatnam to Mumbai was involved in runway excursion (veer off) while landing on runway 27 at Mumbai airport. There were 6 passengers and 2 crew members on board. Visibility was 700m with heavy rain. No… pic.twitter.com/KxwNZrcmO5
— ANI (@ANI) September 14, 2023
MFB ಮತ್ತು ಏರ್‌ಪೋರ್ಟ್ ಡ್ಯೂಟಿ ಆಫೀಸರ್‌ನ ಮಾಹಿತಿಯಂತೆ ಒಂದು ಸಣ್ಣ ಖಾಸಗಿ ಜೆಟ್ ಪ್ಲೇನ್ VTDBL ( 6 ಪ್ರಯಾಣಿಕರು ಮತ್ತು 2 ಸಿಬ್ಬಂದಿ) ರನ್‌ವೇಯಿಂದ ಸ್ಕಿಡ್ ಆಗಿ ನಂತರ ದೇಶೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಮಾಡುವಾಗ ಅಪಘಾತಕ್ಕೀಡಾಯಿತು ಎಂದು ಹೇಳಿಕೆ ತಿಳಿಸಿದೆ.
ಇದನ್ನೂ ಓದಿ: ಇಂಡಿಯಾ ಮೈತ್ರಿಕೂಟವನ್ನು ಗೇಲಿ ಮಾಡಿದ್ದಕ್ಕೆ ತಿರುಗೇಟು ನೀಡಿದ ಕಾಂಗ್ರೆಸ್
ರನ್‌ವೇಯನ್ನು ಮುಚ್ಚಲಾಗಿದೆ. ಈ ಸಮಯದಲ್ಲಿ ವಿಸ್ತಾರಾ ಏರ್‌ಲೈನ್ಸ್ ತನ್ನ ಐದು ವಿಮಾನಗಳನ್ನು ಬೇರೆಡೆ ತಿರುಗಿಸಿದ್ದು ಇತರ ವಿಮಾನ ಪ್ರಯಾಣದ ಮೇಲೂ ಇದು “ಪರಿಣಾಮ ಬೀರುವ ಸಾಧ್ಯತೆಯಿದೆ” ಎಂದು ಹೇಳಿದೆ. UK622 (ವಾರಣಾಸಿಯಿಂದ) ಮತ್ತು UK124 (ಬ್ಯಾಂಕಾಕ್‌ನಿಂದ) ಮತ್ತು UK933 (ದೆಹಲಿಯಿಂದ), UK518. (ಕೊಚ್ಚಿಯಿಂದ), ಮತ್ತು UK865 (ಡೆಹ್ರಾಡೂನ್‌ನಿಂದ) ವಿಮಾನಗಳಲ್ಲಿ ಎರಡನ್ನು ಹೈದರಾಬಾದ್‌ಗೆ ತಿರುಗಿಸಲಾಗಿದೆ ಮತ್ತು ನಂತರದ ಮೂರು ವಿಮಾನಗಳನ್ನು ಗೋವಾದ ಮೋಪಾ ವಿಮಾನ ನಿಲ್ದಾಣಕ್ಕೆ ಕಳುಹಿಸಲಾಗಿದೆ.
ಸ್ಪೈಸ್ ಜೆಟ್ ತನ್ನ ಪ್ರಯಾಣಿಕರಿಗೆ ವಿಮಾನ ಸಂಚಾರದ ಮೇಲೆ ಇದು ಪರಿಣಾಮ ಬೀರಬಹುದು ಎಂದು ಸಲಹೆ ನೀಡಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:49 pm, Thu, 14 September 23