ತಮಿಳುನಾಡಿನಲ್ಲಿ ಪುರೋಹಿತರ ಕೋರ್ಸ್ ಪೂರೈಸಿ ಅರ್ಚಕಿಯಾಗಲಿದ್ದಾರೆ ಮೂವರು ಮಹಿಳೆಯರು
ತಮಿಳುನಾಡು ಸರ್ಕಾರವು ಎಲ್ಲಾ ಸಮುದಾಯಗಳ ಅರ್ಚಕರಿಗೆ ತರಬೇತಿ ನೀಡುವ ಆರು 'ಅರ್ಚಕರ್ ಪಯಿರ್ಚಿ ಪಲ್ಲಿ' (ಪುರೋಹಿತರ ತರಬೇತಿ ಶಾಲೆಗಳು) ನಡೆಸುತ್ತಿದೆ. ಡಿಎಂಕೆ ಅಧಿಕಾರಕ್ಕೆ ಬಂದ ನಂತರ ಮಹಿಳೆಯರನ್ನು ಸಂಸ್ಥೆಗೆ ದಾಖಲಿಸಿ ತರಬೇತಿ ನೀಡಲಾಯಿತು. ಪುರೋಹಿತರ ತರಬೇತಿ ಶಾಲೆಗಳು ತಿರುವಣ್ಣಾಮಲೈ, ಪಳನಿ, ತಿರುಚೆಂದೂರ್, ಮಧುರೈ, ಶ್ರೀರಂಗಂ ಮತ್ತು ಚೆನ್ನೈ ಸೇರಿದಂತೆ ತಮಿಳುನಾಡಿನ ಆರು ಸ್ಥಳಗಳಲ್ಲಿ ಆಗಮಗಳು ಮತ್ತು ಪೂಜೆಗಳ ಕುರಿತು ತರಗತಿಗಳನ್ನು ನಡೆಸುತ್ತವೆ

ಚೆನ್ನೈ ಸೆಪ್ಟೆಂಬರ್ 14: ತಮಿಳುನಾಡಿನಲ್ಲಿ (Tamil Nadu) ‘ಎಲ್ಲ ಜಾತಿಯ ಅರ್ಚಕರು’ (All-Caste Priests) ಯೋಜನೆಯಡಿ ಅರ್ಚಕರಾಗಲು ಕೋರ್ಸ್ ಪೂರ್ಣಗೊಳಿಸಿದ ಮೂವರು ಮಹಿಳೆಯರಿಗೆ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ ಸಚಿವ ಪಿ.ಕೆ.ಸೇಕರ್ ಬಾಬು (PK Sekar Babu) ಅವರು ಅರ್ಚಕ ತರಬೇತಿ ಪೂರ್ಣಗೊಳಿಸಿದ ಪ್ರಮಾಣಪತ್ರವನ್ನು ನೀಡಿದ್ದಾರೆ. ರಾಜ್ಯದಲ್ಲಿ 50,000 ಕ್ಕೂ ಹೆಚ್ಚು ಹಿಂದೂ ದೇವಾಲಯಗಳು ಈ ಇಲಾಖೆಯ ಅಡಿಯಲ್ಲಿದೆ. ಅರ್ಚಕಿಯರಾದ ರಂಜಿತಾ, ಕೃಷ್ಣವೇಣಿ ಮತ್ತು ರಮ್ಯಾ ಅವರು ಶ್ರೀರಂಗಂ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದಿದ್ದು, ತಮ್ಮ ಒಂದು ವರ್ಷದ ತರಬೇತಿಯನ್ನು ಪೂರ್ಣಗೊಳಿಸಿದ್ದಾರೆ. ಇವರೊಂದಿಗೆ 91 ಪುರುಷರು 2022-2023ರಲ್ಲಿ ಅರ್ಚಕ ತರಬೇತಿಯನ್ನು ಪೂರ್ಣಗೊಳಿಸಿದ್ದಾರೆ.
ತಮಿಳುನಾಡು ಸರ್ಕಾರವು ಎಲ್ಲಾ ಸಮುದಾಯಗಳ ಅರ್ಚಕರಿಗೆ ತರಬೇತಿ ನೀಡುವ ಆರು ‘ಅರ್ಚಕರ್ ಪಯಿರ್ಚಿ ಪಲ್ಲಿ’ (ಪುರೋಹಿತರ ತರಬೇತಿ ಶಾಲೆಗಳು) ನಡೆಸುತ್ತಿದೆ. ಡಿಎಂಕೆ ಅಧಿಕಾರಕ್ಕೆ ಬಂದ ನಂತರ ಮಹಿಳೆಯರನ್ನು ಸಂಸ್ಥೆಗೆ ದಾಖಲಿಸಿ ತರಬೇತಿ ನೀಡಲಾಯಿತು. ಪುರೋಹಿತರ ತರಬೇತಿ ಶಾಲೆಗಳು ತಿರುವಣ್ಣಾಮಲೈ, ಪಳನಿ, ತಿರುಚೆಂದೂರ್, ಮಧುರೈ, ಶ್ರೀರಂಗಂ ಮತ್ತು ಚೆನ್ನೈ ಸೇರಿದಂತೆ ತಮಿಳುನಾಡಿನ ಆರು ಸ್ಥಳಗಳಲ್ಲಿ ಆಗಮಗಳು ಮತ್ತು ಪೂಜೆಗಳ ಕುರಿತು ತರಗತಿಗಳನ್ನು ನಡೆಸುತ್ತವೆ.
2021ರಲ್ಲಿ, 28 ವರ್ಷದ ಮಹಿಳೆ ಸುಹಂಜನಾ ಗೋಪಿನಾಥ್ ಅವರನ್ನು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರನ್ನು ಚೆಂಗಲ್ಪಟ್ಟುವಿನ ಮಡಂಬಾಕ್ಕಂ ಪ್ರದೇಶದ ಧೇನುಪುರೀಶ್ವರ ದೇವಸ್ಥಾನದಲ್ಲಿ ಅರ್ಚಕಿಯಾಗಿ ನೇಮಕ ಮಾಡಿದ್ದರು.
ಮಹಿಳಾ ಅರ್ಚಕರ ಬಗ್ಗೆ ಟ್ವೀಟ್ ಮಾಡಿದ ಸ್ಟಾಲಿನ್, ಪೈಲಟ್ ಗಳು ಮತ್ತು ಗಗನಯಾತ್ರಿಗಳಾಗಿ ಮಹಿಳೆಯರ ಸಾಧನೆಗಳ ಹೊರತಾಗಿಯೂ, ದೇವಾಲಯದ ಅರ್ಚಕರ ಪವಿತ್ರ ಪಾತ್ರದಿಂದ ಅವರನ್ನು ನಿರ್ಬಂಧಿಸಲಾಗಿದೆ. ಸ್ತ್ರೀ ದೇವತೆಗಳ ದೇವಾಲಯಗಳಲ್ಲಿಯೂ ಸಹ ಅಶುದ್ಧವೆಂದು ಪರಿಗಣಿಸಲಾಗಿದೆ. ಅದರೆ ಇಲ್ಲಿ ಬದಲಾವಣೆ ಬಂದಿದೆ. ತಮಿಳುನಾಡಿನಲ್ಲಿ, ನಮ್ಮ ದ್ರಾವಿಡ ಮಾದರಿ ಸರ್ಕಾರವು ತಂಥೈ ಪೆರಿಯಾರ್ ಅವರ ಹೃದಯಲ್ಲಿದ್ದ ಮುಳ್ಳನ್ನು ತೆಗೆದುಹಾಕಿ, ಎಲ್ಲಾ ಜಾತಿಯ ಜನರನ್ನು ಅರ್ಚಕರನ್ನಾಗಿ ನೇಮಿಸುವ ಮೂಲಕ ಮಹಿಳೆಯರು ಕೂಡ ಈಗ ಗರ್ಭಗುಡಿಗಳಿಗೆ ಕಾಲಿಡುತ್ತಿದ್ದಾರೆ. ಒಳಗೊಳ್ಳುವಿಕೆ ಮತ್ತು ಸಮಾನತೆಯ ಹೊಸ ಯುಗವನ್ನು ತರುತ್ತಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಇಂಡಿಯಾ ಮೈತ್ರಿಕೂಟವನ್ನು ಗೇಲಿ ಮಾಡಿದ್ದಕ್ಕೆ ತಿರುಗೇಟು ನೀಡಿದ ಕಾಂಗ್ರೆಸ್
ಸುಧಾರಣಾವಾದಿ ನಾಯಕ ಪೆರಿಯಾರ್ ಇವಿ ರಾಮಸಾಮಿ ಅವರು ಬ್ರಾಹ್ಮಣೇತರರಿಗೆ ದೇವಾಲಯಗಳಲ್ಲಿ ಅರ್ಚಕರ ಪಾತ್ರವನ್ನು ನಿರ್ವಹಿಸಲು ಅವಕಾಶ ನೀಡದಿರುವುದು ಹೃದಯದಲ್ಲಿನ “ಮುಳ್ಳು” ಎಂದು ಬಣ್ಣಿಸಿದ್ದರು. ಈಗಾಗಲೇ ರಾಜ್ಯದ ಕೆಲವು ದೇವಸ್ಥಾನಗಳಲ್ಲಿ ಮಹಿಳೆಯರೇ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಿಂದೂ ಧಾರ್ಮಿಕ ಮತ್ತು ದತ್ತಿ ಸಚಿವ ಪಿ.ಕೆ.ಸೇಕರ್ ಬಾಬು ಅವರು 2021 ರಲ್ಲಿ ಮಹಿಳೆಯರ ತರಬೇತಿಯ ನಂತರ ದೇವಾಲಯಗಳಲ್ಲಿ ಅರ್ಚಕರಾಗಿ ನೇಮಕಗೊಳ್ಳಬಹುದು ಎಂದು ಹೇಳಿದ್ದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ