ಮುಂಬೈನಲ್ಲಿ ಹೊಸ ಮನೆ ಖರೀದಿಸಿದ ಸೊನಾಕ್ಷಿ ಸಿನ್ಹಾ: ಬೆಲೆ ಎಷ್ಟು ಕೋಟಿ?

Sonakshi Sinha: ಬಾಲಿವುಡ್​ನ ಹಲವು ನಟ-ನಟಿಯರು ರಿಯಲ್ ಎಸ್ಟೇಟ್​ ಮೇಲೆ ಬಂಡವಾಳ ಹೂಡುತ್ತಿದ್ದಾರೆ. ಅಮಿತಾಬ್ ಬಚ್ಚನ್, ಸಾರಾ ಅಲಿ ಖಾನ್, ಕಿಯಾರಾ ಅಡ್ವಾಣಿ ಅವರುಗಳ ಬಳಿಕ ಈಗ ಭಾರಿ ಮೊತ್ತ ತೆತ್ತು ಮುಂಬೈನಲ್ಲಿ ಫ್ಲ್ಯಾಟ್ ಖರೀದಿಸಿದ್ದಾರೆ ನಟಿ ಸೊನಾಕ್ಷಿ ಸಿನ್ಹ.

ಮುಂಬೈನಲ್ಲಿ ಹೊಸ ಮನೆ ಖರೀದಿಸಿದ ಸೊನಾಕ್ಷಿ ಸಿನ್ಹಾ: ಬೆಲೆ ಎಷ್ಟು ಕೋಟಿ?
ಸೋನಾಕ್ಷಿ
Follow us
ಮಂಜುನಾಥ ಸಿ.
|

Updated on: Sep 13, 2023 | 4:26 PM

ಬಾಲಿವುಡ್ (Bollywood) ಸೆಲೆಬ್ರಿಟಿಗಳು ಸಾಲು-ಸಾಲಾಗಿ ರಿಯಲ್ ಎಸ್ಟೇಟ್ ಮೇಲೆ ಹೂಡಿಕೆ ಮಾಡುತ್ತಿದ್ದಾರೆ. ಮೊದಲಿನಿಂದಲೂ ಆಸ್ತಿ ಖರೀದಿ ಎಂಬುದು ನಟರ ಮೆಚ್ಚಿನ ಹೂಡಿಕೆಯಾಗಿತ್ತಾದರೂ ಕೋವಿಡ್ ಬಳಿಕ ಈ ಅಭ್ಯಾಸ ತುಸು ಹೆಚ್ಚಾಗಿದೆ. ಮುಂಬೈನಲ್ಲಿ ರಿಯಲ್ ಎಸ್ಟೇಟ್ ಉದ್ದಿಮೆ ಬೂಮ್ ಆದುದ್ದೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಇದೀಗ ನಟಿ ಸೊನಾಕ್ಷಿ ಸಿನ್ಹ ಕೋಟ್ಯಂತರ ರೂಪಾಯಿ ಹಣ ತೆತ್ತು ಮುಂಬೈನಲ್ಲಿ ಐಶಾರಾಮಿ ಅಪಾರ್ಟ್​ಮೆಂಟ್ ಖರೀದಿ ಮಾಡಿದ್ದಾರೆ.

ಮುಂಬೈನಲ್ಲಿ ಬಹುತೇಕ ಸ್ಟಾರ್ ನಟರು ಇರುವುದು ಬಾಂದ್ರಾ, ವರ್ಸೋವಾ, ಜುಹು ಏರಿಯಾಗಳಲ್ಲಿಯೇ. ಇದೀಗ ನಟಿ ಸೋನಾಕ್ಷಿ ಸಹ ಇದೇ ಏರಿಯಾದಲ್ಲಿ ಹೊಸ ಮನೆ ಖರೀದಿ ಮಾಡಿದ್ದಾರೆ. ಬಾಂದ್ರಾದ ಐಶಾರಾಮಿ ಅಪಾರ್ಟ್​ಮೆಂಟ್​ನ 26ನೇ ಮಹಡಿಯಲ್ಲಿ ದೊಡ್ಡ ಫ್ಲ್ಯಾಟ್ ಒಂದನ್ನು ಸೊನಾಕ್ಷಿ ಖರೀದಿ ಮಾಡಿದ್ದಾರೆ. ಈ ಪ್ಲ್ಯಾಟ್ ಖರೀದಿಗೆ ಸೊನಾಕ್ಷಿ ಬರೊಬ್ಬರಿ 11 ಕೋಟಿ ರೂಪಾಯಿ ವ್ಯಯಿಸಿದ್ದಾರೆ.

ಬಾಂದ್ರಾದ ಪ್ರೀಮಿಯಮ್ ರೆಸೆಡೆನ್ಷಿಯಲ್ ಟವರ್​ ಅಪಾರ್ಟ್​ಮೆಂಟ್ ಸಮುಚ್ಛಯದಲ್ಲಿ ಸೊನಾಕ್ಷಿ ಪ್ಲ್ಯಾಟ್ ಖರೀದಿಸಿದ್ದು, 2430 ಚದರ ಅಡಿಯ ಈ ಫ್ಲ್ಯಾಟ್​ಗೆ 11 ಕೋಟಿ ರೂಪಾಯಿ ತೆತ್ತಿದ್ದಾರೆ. ಇನ್ನು ಇದರ ಇಂಟೀರಿಯರ್ ಇನ್ನಿತರೆಗಳಿಗೆ ಸುಮಾರು 1 ಕೋಟಿ ಖರ್ಚು ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ಸಮುಚ್ಛಯವನ್ನು ಪಿರಮಡ್ ಡೆವೆಲಪರ್ಸ್​ ಮತ್ತು ಅಲ್ಟ್ರಾ ಲೈಫ್​ಸ್ಪೇಸ್ ಸಂಸ್ಥೆ ನಿರ್ಮಾಣ ಮಾಡಿದ್ದು, ಸೊನಾಕ್ಷಿ, ನೇರವಾಗಿ ಡೆವೆಲಪರ್​ಗಳಿಂದಲೇ ಪ್ಲ್ಯಾಟ್ ಅನ್ನು ಖರೀದಿ ಮಾಡಿದ್ದಾರೆ.

ಇದನ್ನೂ ಓದಿ: ಬಾಲಿವುಡ್​ನ ಈ ಸಿನಿಮಾಗಳನ್ನು ರಿಜೆಕ್ಟ್ ಮಾಡಿದ್ದ ದಕ್ಷಿಣ ಭಾರತದ ಸ್ಟಾರ್​ ಕಲಾವಿದರಿವರು

ಇದೇ ಆಗಸ್ಟ್ ತಿಂಗಳಲ್ಲಿ ಈ ಫ್ಲ್ಯಾಟ್ ಅನ್ನು ಸೊನಾಕ್ಷಿ ಖರೀದಿ ಮಾಡಿದ್ದಾರೆ. ಅಂದಹಾಗೆ ಈ ಸಮುಚ್ಛಯದಲ್ಲಿ ಇದು ಅವರ ಎರಡನೇ ಫ್ಲ್ಯಾಟ್ ಖರೀದಿ. ಈ ಹಿಂದೆ 2020ರ ಮಾರ್ಚ್ ತಿಂಗಳಲ್ಲಿ ಇದೇ ಅಪಾರ್ಟ್​ಮೆಂಟ್​ನಲ್ಲಿ 4632 ಚದರ ಅಡಿಯ ಫ್ಲ್ಯಾಟ್ ಒಂದನ್ನು ಖರೀದಿ ಮಾಡಿದ್ದರು. ಈ ಫ್ಲ್ಯಾಟ್​ 16ನೇ ಮಹಡಿಯಲ್ಲಿದೆ. ಈ ಫ್ಲ್ಯಾಟ್​ಗೆ ಆಗ 14 ಕೋಟಿ ರೂಪಾಯಿಗಳನ್ನು ಸೊನಾಕ್ಷಿ ಸಿನ್ಹ ವ್ಯಯಿಸಿದ್ದರು.

ಕೆಲವು ದಿನಗಳ ಹಿಂದಷ್ಟೆ ಬಾಲಿವುಡ್ ಸ್ಟಾರ್ ನಟ ಅಮಿತಾಬ್ ಬಚ್ಚನ್ ಮುಂಬೈನ ಓಷಿವಾರಾ ಪ್ರದೇಶದಲ್ಲಿ ಸುಮಾರು 8500 ಚದರ ಅಡಿಗಳ ಆಫೀಸ್ ಸ್ಪೇಸ್ ಅನ್ನು ಅಮಿತಾಬ್ ಬಚ್ಚನ್ ಖರೀದಿ ಮಾಡಿದ್ದು, ಇದಕ್ಕಾಗಿ ಸುಮಾರು 29 ಕೋಟಿ ರೂಪಾಯಿ ವೆಚ್ಚ ಮಾಡಿದ್ದರು. ಸಾರಾ ಅಲಿ ಖಾನ್, 2100 ಚದರ ಅಡಿಯ ಪ್ಲ್ಯಾಟ್ ಅನ್ನು 9 ಕೋಟಿ ಹಣ ನೀಡಿ ಖರೀದಿ ಮಾಡಿದ್ದಾರೆ. ಕಾರ್ತಿಕ್ ಆರ್ಯನ್ ಸಹ ಇದೇ ಪ್ರಾಜೆಕ್ಟ್​ನಲ್ಲಿ 2100 ಚದರ ಅಡಿಯ ಫ್ಲ್ಯಾಟ್ ಅನ್ನು 10 ಕೋಟಿ ಹಣ ನೀಡಿ ಖರೀದಿ ಮಾಡಿದ್ದಾರೆ. ಇದೇ ವರ್ಷದ ಜುಲೈ ತಿಂಗಳಲ್ಲಿ ಕಾರ್ತಿ ಕ್ ಆರ್ಯನ್ ಜುಹು ಏರಿಯಾನಲ್ಲಿನ ಸಿದ್ಧಿ ವಿನಾಯಕ ಅಪಾರ್ಟ್​ಮೆಂಟ್​ನಲ್ಲಿ 17.50 ಕೋಟಿ ಖರ್ಚು ಮಾಡಿ 1916 ಚದರ ಅಡಿಯ ಫ್ಲ್ಯಾಟ್ ಒಂದನ್ನು ಖರೀದಿ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ