AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Arvind Kejriwal: ಕೇಜ್ರಿವಾಲ್ ತಮ್ಮ ಬಂಗಲೆ ನವೀಕರಣಕ್ಕೆ ಖರ್ಚು ಮಾಡಿದ್ದು 45 ಕೋಟಿಯಲ್ಲ ಬರೋಬ್ಬರಿ 171 ಕೋಟಿ ರೂ : ಅಜಯ್

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್(Arvind Kejriwal) ತಮ್ಮ ಬಂಗಲೆಯ ನವೀಕರಣಕ್ಕೆ ಖರ್ಚು ಮಾಡಿದ್ದು 45 ಕೋಟಿಯಲ್ಲ ಬರೋಬ್ಬರಿ 171 ಕೋಟಿ ರೂ. ಎಂದು ಕಾಂಗ್ರೆಸ್​ನ ಅಜಯ್ ಮಾಕನ್ ಹೇಳಿದ್ದಾರೆ.

Arvind Kejriwal: ಕೇಜ್ರಿವಾಲ್ ತಮ್ಮ ಬಂಗಲೆ ನವೀಕರಣಕ್ಕೆ ಖರ್ಚು ಮಾಡಿದ್ದು 45 ಕೋಟಿಯಲ್ಲ ಬರೋಬ್ಬರಿ 171 ಕೋಟಿ ರೂ : ಅಜಯ್
ಅಜಯ್ ಮಾಕನ್
ನಯನಾ ರಾಜೀವ್
|

Updated on:May 07, 2023 | 4:09 PM

Share

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್(Arvind Kejriwal) ತಮ್ಮ ಬಂಗಲೆಯ ನವೀಕರಣಕ್ಕೆ ಖರ್ಚು ಮಾಡಿದ್ದು 45 ಕೋಟಿಯಲ್ಲ ಬರೋಬ್ಬರಿ 171 ಕೋಟಿ ರೂ. ಎಂದು ಕಾಂಗ್ರೆಸ್​ನ ಅಜಯ್ ಮಾಕನ್ ಹೇಳಿದ್ದಾರೆ. ಕೇಜ್ರಿವಾಲ್ ಅವರ ಮನೆಯ ಸುತ್ತಮುತ್ತಲೂ ಅಧಿಕಾರಿಗಳು ವಾಸಿಸುವ ನಾಲ್ಕು ಬಿಲ್ಡಿಂಗ್​ಗಳಿವೆ, ನವೀಕರಣ ಪ್ರಾರಂಭವಾದಾಗಿನಿಂದ ಬಂಗಲೆಯ ವಿಸ್ತರಣೆಗಾಗಿ ಈ ಫ್ಲ್ಯಾಟ್​ಗಳನ್ನು ಖಾಲಿ ಮಾಡಲಾಗುತ್ತಿದೆ. ಈಗ ಅಧಿಕಾರಿಗಳಿಗೆ ವಸತಿ ಕಲ್ಪಿಸಲು ಸರ್ಕಾರವು ಕಾಮನ್​ವೆಲ್ತ್​ ವಿಲೇಜ್​ನಲ್ಲಿ 21ಟೈಪ್-5 ಫ್ಲಾಟ್​ಗಳನ್ನು ಖರೀದಿಸಿದೆ. ತಲಾ 6 ಕೋಟಿ ರೂ. ವೆಚ್ಚವಾಗುತ್ತದೆ ಇದು ರಾಜ್ಯದ ಬೊಕ್ಕಸದಿಂದ ಬರುತ್ತದೆ ಹಾಗೂ ಇದನ್ನು ಸಿಎಂ ಬಂಗಲೆ ವೆಚ್ಚಕ್ಕೆ ಸೇರಿಸಬೇಕು ಎಂದು ಅಜಯ್ ಹೇಳಿದರು.

ಕೇಜ್ರಿವಾಲ್ ಅವರು ಕಟ್ಟಡದ ಬೈಲಾ ನಿಯಮವನ್ನು ಉಲ್ಲಂಘಿಸುತ್ತಿದ್ದಾರೆ ಎಂದು ನಾನು ಈಗಾಗಲೇ ಹೇಳಿದ್ದೇನೆ ಎಂದು ಬಿಧುರಿ ಹೇಳಿದರು. ಜನರು ಕರೋನಾದಿಂದ ಬಳಲುತ್ತಿರುವಾಗ, ಅವರಿಗೆ ಹಾಸಿಗೆಗಳು ಮತ್ತು ಆಮ್ಲಜನಕದ ವ್ಯವಸ್ಥೆಗಳನ್ನು ಮಾಡಲು ಸಾಧ್ಯವಾಗುತ್ತಿರಲಿಲ್ಲ, ಆದರೆ ಬಂಗಲೆಗೆ ಭಾರಿ ಹಣವನ್ನು ಖರ್ಚು ಮಾಡಿದ್ದರು.

ಮತ್ತಷ್ಟು ಓದಿ: 2 ಕೋಣೆಯಿರುವ ಮನೇಲಿರ್ತೀನಿ ಎಂದಿದ್ದ ಕೇಜ್ರಿವಾಲ್ ಈಗ ಬಂಗಲೆಯ ನವೀಕರಣಕ್ಕೆ 45 ಕೋಟಿ ರೂ. ಖರ್ಚು ಮಾಡಿದ್ದಾರೆ: ಬಿಜೆಪಿ

ಈ ಡಿಯರ್ ಪರ್ಲ್ ಮಾರ್ಬಲ್ ನ ಬೆಲೆ ಒಂದು ಕೋಟಿ 15 ಲಕ್ಷ ರೂಪಾಯಿ. ಈ ಅಮೃತಶಿಲೆಯ ಅಳವಡಿಕೆಯನ್ನು ಸಹ ವಿಭಿನ್ನ ರೀತಿಯಲ್ಲಿ ಮಾಡಲಾಗುತ್ತದೆ ಬಿಜೆಪಿ ನಾಯಕ ರಾಮ್​ವೀರ್ ಸಿಂಗ್ ಬಿಧುರಿ

ಕೇಜ್ರಿವಾಲ್ ವಾಸಿಸುವ ಮನೆಯನ್ನು 1942 ರಲ್ಲಿ ನಿರ್ಮಿಸಲಾಗಿದೆ ಎಂದು ಎಎಪಿ ಸಂಸದ ಮತ್ತು ಪಕ್ಷದ ವಕ್ತಾರ ರಾಘವ್ ಚಡ್ಡಾ ಹೇಳಿದ್ದಾರೆ. 80 ವರ್ಷ ವಯಸ್ಸಾಗಿತ್ತು. ಮನೆಯ ಒಳಗಿನಿಂದ ಮಲಗುವ ಕೋಣೆಯವರೆಗೂ ಸೀಲಿಂಗ್‌ನಿಂದ ನೀರು ಜಿನುಗುತ್ತಿತ್ತು ಎಂದಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:08 pm, Sun, 7 May 23