ಅಂತರ್ ಧರ್ಮೀಯ ವಿವಾಹಗಳಿಗೆ ನೋಟಿಸ್ ಪ್ರದರ್ಶನ ಕಡ್ಡಾಯವಲ್ಲ: ಅಲಹಾಬಾದ್ ಹೈಕೋರ್ಟ್

|

Updated on: Jan 14, 2021 | 7:50 PM

ಮದುವೆಯಾಗುವ ಜೋಡಿಗಳು ಈ ರೀತಿ ನೋಟಿಸ್ ಪ್ರದರ್ಶನ ಮಾಡುವುದು ಬೇಡ ಎಂದು ಹೇಳಿದರೆ ಆ ನೋಟಿಸ್ ಪ್ರದರ್ಶಿಸುವಂತಿಲ್ಲ.  ನೋಟಿಸ್ ಪ್ರದರ್ಶನ ಬೇಕೋ ಬೇಡವೋ ಎಂಬುದು ಅವರ ಆಯ್ಕೆಗೆ ಬಿಟ್ಟದ್ದು ಎಂದು ನ್ಯಾಯಾಲಯ ಹೇಳಿದೆ.

ಅಂತರ್ ಧರ್ಮೀಯ ವಿವಾಹಗಳಿಗೆ ನೋಟಿಸ್ ಪ್ರದರ್ಶನ ಕಡ್ಡಾಯವಲ್ಲ: ಅಲಹಾಬಾದ್ ಹೈಕೋರ್ಟ್
ಸಾಂದರ್ಭಿಕ ಚಿತ್ರ
Follow us on

ಲಖನೌ: ಅಂತರ್ ಧರ್ಮೀಯ ವಿವಾಹಗಳಿಗೆ ನೋಟಿಸ್ ಪ್ರದರ್ಶನ ಐಚ್ಛಿಕ. ಈ ರೀತಿ ನೋಟಿಸ್ ಪ್ರದರ್ಶನವು ಸ್ವಾತಂತ್ರ್ಯ ಮತ್ತು ಗೌಪ್ಯತೆಯ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಎಂದು ಅಲಹಾಬಾದ್ ಹೈಕೋರ್ಟ್​ನ ಲಖನೌ ಪೀಠ ಹೇಳಿದೆ.

ವಿಶೇಷ ವಿವಾಹ ಕಾಯ್ದೆ 1954ರ ಸೆಕ್ಷನ್ 6 ಮತ್ತು 7 ತಪ್ಪು. ಯಾರೊಬ್ಬರ ಮಧ್ಯಪ್ರವೇಶ ಇಲ್ಲದೆಯೇ ಬಾಳ ಸಂಗಾತಿಯನ್ನು ಆಯ್ಕೆ ಮಾಡುವುದು ಮೂಲಭೂತ ಹಕ್ಕು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ವಿಶೇಷ ವಿವಾಹ ಕಾಯ್ದೆ 1954ರ ಸೆಕ್ಷನ್ ಅಂತರ್ ಧರ್ಮೀಯ ವಿವಾಹ ಮಾಡಿಕೊಳ್ಳುವ ಜೋಡಿಗಳು ಜಿಲ್ಲಾ ಮೆಜಿಸ್ಟ್ರೇಟ್ ಆಫೀಸರ್​ ಗೆ ನೋಟಿಸ್ ಸಲ್ಲಿಸಬೇಕು. ಈ ನೋಟಿಸ್​ನ್ನು ಕಚೇರಿಯಲ್ಲಿ ಪ್ರದರ್ಶಿಸಿ, ವಿವಾಹಕ್ಕೆ ಯಾರಿಗಾದರೂ ತಕರಾರು ಇದೆಯೇ ಎಂಬುದನ್ನು ಅರಿಯಲು 30 ದಿನಗಳ ಕಾಲಾವಕಾಶ ನೀಡಲಾಗುತ್ತಿತ್ತು.

ಮದುವೆಯಾಗುವ ಜೋಡಿಗಳು ಈ ರೀತಿ ನೋಟಿಸ್ ಪ್ರದರ್ಶನ ಮಾಡುವುದು ಬೇಡ ಎಂದು ಹೇಳಿದರೆ ಆ ನೋಟಿಸ್ ಪ್ರದರ್ಶಿಸುವಂತಿಲ್ಲ. ನೋಟಿಸ್ ಪ್ರದರ್ಶನ ಬೇಕೋ ಬೇಡವೋ ಎಂಬುದು ಅವರ ಆಯ್ಕೆಗೆ ಬಿಟ್ಟದ್ದು. ಈ ರೀತಿಯ ಮದುವೆಗಳಿಗೆ ಯಾರಾದರೂ ತಕರಾರು ಮಾಡಿದರೆ ಅದನ್ನು ಪರಿಗಣಿಸಲಾಗುವುದಿಲ್ಲ. ಇದೆಲ್ಲ ಶತಮಾನದ ಹಿಂದೆ ಇದ್ದ ನಡೆಗಳು. ಇದು ಯುವ ಜನಾಂಗದ ಮೇಲೆ ಮಾಡುವ ಅನ್ಯಾಯ. ಆದಾಗ್ಯೂ, ಮದುವೆಯಾಗುವ ಜೋಡಿಗಳ ಗುರುತು ದೃಢೀಕರಣವನ್ನು ಮ್ಯಾರೇಜ್ ಆಫೀಸರ್ ಮಾಡಬೇಕು ಎಂದು ನ್ಯಾಯಾಲಯ ಹೇಳಿದೆ.

ಸಫಿಯಾಸುಲ್ತಾನ್ ಎಂಬವರು ಅಭಿಷೇಕ್ ಕುಮಾರ್ ಪಾಂಡೆಯನ್ನು ವಿವಾಹವಾದ ನಂತರ ಹಿಂದೂ ಧರ್ಮದ ಪ್ರಕಾರ ತಮ್ಮ ಹೆಸರನ್ನು ಸಿಮ್ರಾನ್ ಎಂದು ಬದಲಿಸಿಕೊಂಡಿದ್ದರು. ಈ ಬಗ್ಗೆ ನ್ಯಾಯಾಲಯದಲ್ಲಿ ಸಲ್ಲಿಸಲಾದ ಹೇಬಿಯಸ್ ಅರ್ಜಿ ವಿಚಾರಣೆ ವೇಳೆ ಲಖನೌ ನ್ಯಾಯಪೀಠದ ನ್ಯಾಯಮೂರ್ತಿ ವಿವೇಕ್ ಚೌಧರಿ ನೋಟಿಸ್ ಪ್ರದರ್ಶನದ ಬಗ್ಗೆ ಈ ರೀತಿ ತೀರ್ಪು ನೀಡಿದ್ದಾರೆ.

ಲವ್ ಜಿಹಾದ್ ತಡೆಗೆ ಕಾನೂನು ಬೇಕಾ? ಧರ್ಮದ ಹೆಸರಲ್ಲಿ ಅಸಲಿ ಪ್ರೇಮಿಗಳಿಗೂ ತೊಂದರೆಯಾಗುತ್ತಿದೆಯಾ?

 

Published On - 7:43 pm, Thu, 14 January 21