ಸಿಬಿಐ ಅಧಿಕಾರಿಗಳಿಗೆ ಸಂಬಂಧಪಟ್ಟ ಸ್ಥಳಗಳ ಮೇಲೆ ಸಿಬಿಐ ದಾಳಿ; ಉನ್ನತ ತನಿಖಾ ಸಂಸ್ಥೆಗೆ ಮುಜುಗರ ತಂದಿಟ್ಟ ವಿಚಾರವಿದು !

ಇಂದು ಬೆಳಗ್ಗೆಯಿಂದ ಸಿಬಿಐ ಅಧಿಕಾರಿಗಳು ತಮ್ಮ ಸಂಸ್ಥೆಯ ಅಧಿಕಾರಿಗಳ ವಿರುದ್ಧ ಕಾರ್ಯಾಚರಣೆ ಶುರು ಮಾಡಿದ್ದಾರೆ. ಆದರೆ ಅವರ ಹೆಸರನ್ನು ಹೇಳುತ್ತಿಲ್ಲ. ಹಾಗೇ ಉನ್ನತ ತನಿಖಾ ಸಂಸ್ಥೆಗೆ ಇದೊಂದು ದೊಡ್ಡ ಮುಜುಗರದ ಸಂಗತಿಯಾಗಿದ್ದು, ಈ ಬಗ್ಗೆ ಏನನ್ನೂ ಬಾಯ್ಬಿಡುತ್ತಿಲ್ಲ.

ಸಿಬಿಐ ಅಧಿಕಾರಿಗಳಿಗೆ ಸಂಬಂಧಪಟ್ಟ ಸ್ಥಳಗಳ ಮೇಲೆ ಸಿಬಿಐ ದಾಳಿ; ಉನ್ನತ ತನಿಖಾ ಸಂಸ್ಥೆಗೆ ಮುಜುಗರ ತಂದಿಟ್ಟ ವಿಚಾರವಿದು !
ಪ್ರಾತಿನಿಧಿಕ ಚಿತ್ರ
Follow us
Lakshmi Hegde
| Updated By: Skanda

Updated on: Jan 14, 2021 | 7:18 PM

ದೆಹಲಿ: ಕೆಲವು ಸಿಬಿಐ ಅಧಿಕಾರಿಗಳ ವಿರುದ್ಧ ಸ್ವತಃ ಸಿಬಿಐ ಪ್ರಕರಣ ದಾಖಲಿಸಿ, ಆ ಅಧಿಕಾರಿಗಳಿಗೆ ಸಂಬಂಧಪಟ್ಟ ಸ್ಥಳಗಳ ಮೇಲೆ ದಾಳಿ ನಡೆಸಿದ ಅಪರೂಪದ ಘಟನೆ ನಡೆದಿದೆ. ಭ್ರಷ್ಟಾಚಾರ ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ಈ ದಾಳಿ ನಡೆದಿದ್ದು, ಅದರಲ್ಲೂ ನಾಲ್ವರು ಸಿಬಿಐ ಅಧಿಕಾರಿಗಳ ಮೇಲೆ ಸಿಬಿಐ ತೀವ್ರ ನಿಗಾವಹಿಸಿದೆ ಎಂದು ಮೂಲಗಳು ತಿಳಿಸಿವೆ.

ಬ್ಯಾಂಕ್​ಗೆ ವಂಚಿಸಿದ ಕಂಪನಿಯೊಂದರ ಬಳಿ ಲಂಚ ಪಡೆದು, ಆ ಕಂಪನಿಯ ಪರವಾಗಿ ಕೆಲಸ ಮಾಡಿದ್ದಲ್ಲದೆ, ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ವಂಚಿಸಿದ್ದ ಕಂಪನಿಯ ಪರವಾಗಿಯೇ ಕೆಲಸ ಮಾಡಿದ ಆರೋಪವನ್ನು ದಾಳಿಗೊಳಗಾದ ಅಧಿಕಾರಿಗಳು ಎದುರಿಸುತ್ತಿದ್ದಾರೆ. ಸದ್ಯ ಸಿಬಿಐ ಅಧಿಕಾರಿಗಳು ದೆಹಲಿ, ನೊಯ್ಡಾ, ಘಾಜಿಯಾಬಾದ್​, ಗುರುಗ್ರಾಮ​, ಕಾನ್ಪುರ ಮತ್ತು ಮೀರತ್​ ಸೇರಿ ಒಟ್ಟು 14 ಪ್ರದೇಶಗಳಲ್ಲಿ ದಾಳಿ ನಡೆಸಿ, ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಪಟ್ಟ ದಾಖಲೆಗಳಿಗಾಗಿ ಹುಡುಕಿದ್ದಾರೆ. ಇನ್ನು ಘಾಜಿಯಾಬಾದ್​ ಸಿಬಿಐ ಅಧಿಕಾರಿಯೊಬ್ಬರ ವಿಚಾರಣೆಯನ್ನೂ ಮಾಡಲಾಗಿದೆ. ಈ ಅಧಿಕಾರಿ ಸದ್ಯ ಸಿಬಿಐ ಅಕಾಡೆಮಿಯಲ್ಲಿ ಇದ್ದಾರೆ ಎಂದು ತಿಳಿದುಬಂದಿದೆ.

ಇಂದು ಬೆಳಗ್ಗೆಯಿಂದ ಸಿಬಿಐ ಅಧಿಕಾರಿಗಳು ತಮ್ಮ ಸಂಸ್ಥೆಯ ಅಧಿಕಾರಿಗಳ ವಿರುದ್ಧ ಕಾರ್ಯಾಚರಣೆ ಶುರು ಮಾಡಿದ್ದಾರೆ. ಆದರೆ ಅವರ ಹೆಸರನ್ನು ಹೇಳುತ್ತಿಲ್ಲ. ಉನ್ನತ ತನಿಖಾ ಸಂಸ್ಥೆಗೆ ಇದೊಂದು ದೊಡ್ಡ ಮುಜುಗರದ ಸಂಗತಿಯಾಗಿದ್ದು, ಈ ಬಗ್ಗೆ ಏನನ್ನೂ ಬಾಯ್ಬಿಡುತ್ತಿಲ್ಲ. ಇನ್ನು ಕೆಲವು ಸಿಬಿಐ ಅಧಿಕಾರಿಗಳೂ ಪೂರ್ತಿ ಭ್ರಷ್ಟರಾಗಿದ್ದಾರೆ. ಬ್ಯಾಂಕ್​ಗಳಿಂದ ಸಾಲ ಪಡೆದು ವಂಚನೆ ಮಾಡುತ್ತಿರುವ ಕಂಪನಿಗಳಿಂದ ನಿರಂತರವಾಗಿ ಇಂತಿಷ್ಟು ಎಂದು ಹಣ ಪಡೆಯುತ್ತಾ, ಆ ಕಂಪನಿಗಳನ್ನು ರಕ್ಷಿಸುತ್ತವೆ ಎಂದು ಸಿಬಿಐ ಮೂಲಗಳೇ ತಿಳಿಸಿವೆ.

‘53 ವರ್ಷಗಳ ಅನುಭವದಲ್ಲಿ ಇದೇ ಮೊದಲು; ಮೋಡ ಅಡ್ಡ ಬಂದಿದ್ದರಿಂದ ಯುದ್ಧಕಾಂಡ ನಡೆಯಬಹುದು’