‘ಒಂದಾಗಿ ಬಿಜೆಪಿಯನ್ನು ವಿರೋಧಿಸೋಣ ಬನ್ನಿ..’ ಕಾಂಗ್ರೆಸ್ಗೆ ಆಹ್ವಾನ ನೀಡಿದ ಟಿಎಂಸಿ
ಕಾಂಗ್ರೆಸ್ ಮತ್ತು ಎಡ ಪಕ್ಷಗಳು ಕೇಸರಿ ಪಕ್ಷವನ್ನು ವಿರೋಧಿಸುವುದೇ ಹೌದಾದಲ್ಲಿ ಅವರು ಟಿಎಂಸಿ ಜೊತೆ ಕೈಜೋಡಿಸಲಿ. ಮಮತಾ ಬ್ಯಾನರ್ಜಿಯವರನ್ನು ಹಿಂಬಾಲಿಸಲಿ. ಎಲ್ಲರೂ ಒಗ್ಗೂಡಿ ಕೋಮುವಾದಿ ಬಿಜೆಪಿಯ ವಿರುದ್ಧ ಹೋರಾಡೋಣ ಎಂದು ತೃಣಮೂಲ ಕಾಂಗ್ರೆಸ್ ಸಂಸದ ಸೌಗತಾ ರಾಯ್ ಹೇಳಿದ್ದಾರೆ.
ಕೋಲ್ಕತ್ತಾ: ಒಡೆದು ಆಳುವ ನೀತಿಯ ಕೋಮುವಾದಿ ಬಿಜೆಯನ್ನು ಸೋಲಿಸಲು ಎಲ್ಲರೂ ಒಂದಾಗಿ ಹೆಜ್ಜೆಯಿಡಬೇಕು. ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯನ್ನು ಮಟ್ಟಹಾಕಬೇಕೆಂದರೆ ಕಾಂಗ್ರೆಸ್ ಮತ್ತು ಎಡಪಕ್ಷಗಳು ಮಮತಾ ಬ್ಯಾನರ್ಜಿ ಅವರನ್ನು ಹಿಂಬಾಲಿಸಬೇಕು ಎಂದು ತೃಣಮೂಲ ಕಾಂಗ್ರೆಸ್ ಸಂಸದ ಸೌಗತಾ ರಾಯ್ ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್ ಮತ್ತು ಎಡ ಪಕ್ಷಗಳು ಕೇಸರಿ ಪಕ್ಷವನ್ನು ವಿರೋಧಿಸುವುದೇ ಹೌದಾದಲ್ಲಿ ಅವರು ಟಿಎಂಸಿ ಜೊತೆ ಕೈಜೋಡಿಸಲಿ. ಮಮತಾ ಬ್ಯಾನರ್ಜಿಯವರನ್ನು ಹಿಂಬಾಲಿಸಲಿ. ಎಲ್ಲರೂ ಒಗ್ಗೂಡಿ ಕೋಮುವಾದಿ ಬಿಜೆಪಿಯ ವಿರುದ್ಧ ಹೋರಾಡೋಣ ಎಂದು ಹೇಳಿದ್ದಾರೆ.
ಆದರೆ, ಈ ಹೇಳಿಕೆಗೆ ತಿರುಗೇಟು ನೀಡಿರುವ ಪ.ಬಂಗಾಳದ ಕಾಂಗ್ರೆಸ್ ಮುಖ್ಯಸ್ಥ ಅಧೀರ್ ರಂಜನ್ ಚೌಧರಿ, ನಾವು ಮಮತಾ ಬ್ಯಾನರ್ಜಿಯನ್ನು ಹಿಂಬಾಲಿಸುವ ಅವಶ್ಯಕತೆ ಇಲ್ಲ. ನಮಗೆ ಆ ಪಕ್ಷದೊಂದಿಗೆ ಮೈತ್ರಿ ಬೆಳೆಸುವ ಆಸಕ್ತಿಯೂ ಇಲ್ಲ. ಬೇಕಿದ್ದರೆ ಮಮತಾ ಬ್ಯಾನರ್ಜಿ ಕಾಂಗ್ರೆಸ್ ಸೇರಿಕೊಳ್ಳಲಿ. ಟಿಎಂಸಿಯನ್ನು ಕಾಂಗ್ರೆಸ್ ಜೊತೆ ವಿಲೀನ ಮಾಡಲಿ ಎಂದು ಪ್ರತಿಕ್ರಿಯಿಸಿದ್ದಾರೆ.
ಕಾಂಗ್ರೆಸ್ ರಾಷ್ಟ್ರಮಟ್ಟದಲ್ಲಿ ದೊಡ್ಡ ಪಕ್ಷವಾಗಿದೆ. ಆದ್ದರಿಂದ ಮಮತಾ ಬ್ಯಾನರ್ಜಿ ಕಾಂಗ್ರೆಸ್ ಸೇರುವುದೇ ಒಳ್ಳೆಯದು. ಅಸಲಿಗೆ ಪ.ಬಂಗಾಳದಲ್ಲಿ ಬಿಜೆಪಿ ಬೆಳೆಯಲು ಟಿಎಂಸಿ ಪಕ್ಷವೇ ಕಾರಣ. ಕಳೆದ 10 ವರ್ಷಗಳಲ್ಲಿ ಕಾಂಗ್ರೆಸ್ನಿಂದ ಹಲವು ಶಾಸಕರನ್ನು ತನ್ನೆಡೆಗೆ ಸೆಳೆದಿರುವ ಟಿಎಂಸಿ ಕಡೆಗೆ ನಮಗೆ ಯಾವುದೇ ಒಲವಿಲ್ಲ. 1998ರಲ್ಲಿ ಮಮತಾ ಬ್ಯಾನರ್ಜಿ ಕಾಂಗ್ರೆಸ್ನಿಂದ ಹೊರನಡೆದು ಟಿಎಂಸಿ ಕಟ್ಟಿದರು. ಬಿಜೆಪಿಯನ್ನು ವಿರೋಧಿಸಲು ಅಷ್ಟೊಂದು ಉತ್ಸಾಹವಿದ್ದರೆ ಅವರು ಕಾಂಗ್ರೆಸ್ಸಿಗೆ ಬರಲಿ ಎಂದು ಹೇಳಿದ್ದಾರೆ.
ಮಮತಾದೀ, ಯಾಕೆ ಅಷ್ಟು ಹೆದರಿದ್ದೀರಿ? ಏನಾಯಿತು?: ದೀದಿಗೆ ಕುಟುಕಿದ ಜೆ.ಪಿ. ನಡ್ಡಾ
Published On - 6:52 pm, Thu, 14 January 21