ಸೇನಾಪಡೆಯಲ್ಲಿ ವ್ಯಭಿಚಾರವನ್ನು ಅಪರಾಧ ಎಂದು ಪರಿಗಣಿಸಿ : ಸುಪ್ರೀಂಕೋರ್ಟ್ಗೆ ಕೇಂದ್ರ ಮನವಿ
ಸಹೋದ್ಯೋಗಿಯ ಹೆಂಡತಿಯೊಂದಿಗೆ ವ್ಯಭಿಚಾರ ಎಸಗಿದ್ದಕ್ಕಾಗಿ ನಡವಳಿಕೆಯ ಆಧಾರದ ಮೇಲೆ ಸಿಬ್ಬಂದಿಯನ್ನು ಸೇವೆಯಿಂದ ತೆಗೆದುಹಾಕುವ 2018 ರ ತೀರ್ಪುನ್ನು ಸೇನಾ ಪಡೆಗಳಿಗೆ ಅನ್ವಯಿಸಬಾರದು ಎಂದು ಕೇಂದ್ರವು ತನ್ನ ಮನವಿಯಲ್ಲಿ ತಿಳಿಸಿದೆ.
ನವದೆಹಲಿ: ವ್ಯಭಿಚಾರವನ್ನು ಅಪರಾಧಮುಕ್ತಗೊಳಿಸಿದ್ದ 2018 ರ ಸುಪ್ರೀಂಕೋರ್ಟ್ ತೀರ್ಪನ್ನು ಸೇನಾ ಸಿಬ್ಬಂದಿಗಳಿಗೆ ಅನ್ವಯಿಸುವುದು ಬೇಡ ಎಂದು ಕೇಂದ್ರ ಸರ್ಕಾರ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಬುಧವಾರ ನೋಟಿಸ್ ಜಾರಿ ಮಾಡಿದೆ.
ಸಹೋದ್ಯೋಗಿಯ ಹೆಂಡತಿಯೊಂದಿಗೆ ವ್ಯಭಿಚಾರ ಎಸಗಿದ್ದಕ್ಕಾಗಿ ನಡವಳಿಕೆಯ ಆಧಾರದ ಮೇಲೆ ಸಿಬ್ಬಂದಿಯನ್ನು ಸೇವೆಯಿಂದ ತೆಗೆದುಹಾಕುವ 2018 ರ ತೀರ್ಪುನ್ನು ಸೇನಾ ಪಡೆಗಳಿಗೆ ಅನ್ವಯಿಸಬಾರದು ಎಂದು ಕೇಂದ್ರವು ತನ್ನ ಮನವಿಯಲ್ಲಿ ತಿಳಿಸಿದೆ. ನ್ಯಾಯಮೂರ್ತಿ ಆರ್.ಎಫ್. ನಾರೀಮನ್, ನವೀನ್ ಸಿನ್ಹಾ ಮತ್ತು ಕೆಎಂ ಜೋಸೆಫ್ ಅವರ ನ್ಯಾಯಪೀಠವು ಈ ಪ್ರಕರಣವನ್ನು ಐವರು ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾವಣೆ ಮಾಡುವಂತೆ ಕೋರಿದ್ದಾರೆ.
ವ್ಯಭಿಚಾರವನ್ನು ಪುರುಷರಿಗೆ ಶಿಕ್ಷಾರ್ಹ ಅಪರಾಧವನ್ನಾಗಿ ಮಾಡುವ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 497 ಅನ್ನು ಸುಪ್ರೀಂ ಕೋರ್ಟ್ 2018 ರ ಸೆಪ್ಟೆಂಬರ್‌ನಲ್ಲಿ ಸರ್ವಾನುಮತದಿಂದ ತೆಗೆದುಹಾಕಿತ್ತು. ನಾಲ್ಕು ಪ್ರತ್ಯೇಕ, ಆದರೆ ಏಕಕಾಲದ ತೀರ್ಪುಗಳಲ್ಲಿ ಸುಪ್ರೀಂ ಕೋರ್ಟ್‌ನ ಐವರು ನ್ಯಾಯಾಧೀಶರ ನ್ಯಾಯಪೀಠವು 158 ವರ್ಷಗಳ ಹಳೆಯ ಕಾನೂನು ಅಸಂವಿಧಾನಿಕವಾಗಿದೆ. ಆರ್ಟಿಕಲ್ 21 (ಬದುಕು ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯ) ಮತ್ತು ಆರ್ಟಿಕಲ್ 14 (ಸಮಾನತೆಯ ಹಕ್ಕು) ಗಳನ್ನು ನಿರಾಕರಿಸುತ್ತದೆ ಎಂದು ಪೀಠ ಹೇಳಿತ್ತು.
ವ್ಯಕ್ತಿಯೊಬ್ಬನ ಪತ್ನಿ ಬೇರೊಬ್ಬ ವ್ಯಕ್ತಿಯೊಂದಿಗೆ ವಿವಾಹೇತರ ಸಂಬಂಧದಲ್ಲಿ ತೊಡಗಿದ್ದರೆ ಆಕೆಯ ಗಂಡನಿಗೆ ಕಾನೂನು ಕ್ರಮಕೈಗೊಳ್ಳಲು ಅನುಮತಿ ನೀಡುವ ಸಿಆರ್ಪಿಸಿಯ ಸೆಕ್ಷನ್ 198 (1) , 198(2) ಕೂಡಾ ಸಂವಿಧಾನ ವಿರುದ್ಧ ಎಂದು ಸುಪ್ರೀಂಕೋರ್ಟ್ ಹೇಳಿತ್ತು . ವಿವಾಹೇತರ ಲೈಂಗಿಕ ಸಂಬಂಧ ವಿವಾಹ ವಿಚ್ಛೇದನಕ್ಕೆ ಕಾರಣವಾಗುವುದಾದರೂ ಅದು ಕ್ರಿಮಿನಲ್ ಪ್ರಕರಣವಲ್ಲ ಎಂದು ಹೇಳಿದ ನ್ಯಾಯಪೀಠದ ತೀರ್ಪು ಪ್ರಶ್ನಿಸಿ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು.
ಸುಪ್ರೀಂ ಕೋರ್ಟ್ ರಚಿಸಿದ ಸಮಿತಿಯ ಸದಸ್ಯತ್ವ ನಿರಾಕರಿಸಿದ ಭೂಪೇಂದರ್ ಸಿಂಗ್ ಮನ್