ಸಿಂಗ್-ಸಿಧು ಜಗಳ ಕೊನೆಗೂ ಇತ್ಯರ್ಥಗೊಳಿಸಿದ ಕಾಂಗ್ರೆಸ್ ಹೈಕಮಾಂಡ್, ಸಿಧು ಪಿಪಿಸಿಸಿ ಅಧ್ಯಕ್ಷರಾಗಲು ಸಿಂಗ್ ಷರತ್ತುಬದ್ಧ ಸಮ್ಮತಿ!

ಮೂಲಗಳ ಪ್ರಕಾರ ಸಿಂಗ್ ಮತ್ತು ಸಿಧು ನಡುವಿನ ಎಲ್ಲ ಭಿನ್ನಾಬಿಪ್ರಾಯಗಳನ್ನು ಹೈಕಮಾಂಡ್ ಇತ್ಯರ್ಥಗೊಳಿಸಿಲ್ಲ. ತನ್ನ ವಿರುದ್ಧ ಮಾಡಿರುವ ಟ್ವೀಟ್​ಗಳ ಬಗ್ಗೆ ಸಿಧು ಅವರು ಬಹಿರಂಗವಾಗಿ ಕ್ಷಮೆ ಕೇಳದ ಹೊರತು ತಾನು ಅವರನ್ನು ಭೇಟಿಯಾಗುವುದಿಲ್ಲ ಎಂದು ಅಮರಿಂದರ್ ಸಿಂಗ್ ಹೇಳಿದ್ದಾರೆ.

ಸಿಂಗ್-ಸಿಧು ಜಗಳ ಕೊನೆಗೂ ಇತ್ಯರ್ಥಗೊಳಿಸಿದ ಕಾಂಗ್ರೆಸ್ ಹೈಕಮಾಂಡ್, ಸಿಧು ಪಿಪಿಸಿಸಿ ಅಧ್ಯಕ್ಷರಾಗಲು ಸಿಂಗ್ ಷರತ್ತುಬದ್ಧ ಸಮ್ಮತಿ!
ಅಮರಿಂದರ್ ಸಿಂಗ್ ಮತ್ತು ನವಜೋತ್ ಸಿಧು
TV9kannada Web Team

| Edited By: Arun Belly

Jul 17, 2021 | 9:30 PM

ನವದೆಹಲಿ/ಚಂಡೀಗಡ್: ನವಜೋತ್ ಸಿಂಗ್ ಸಿಧು ಅವರಿಗೆ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷನ ಸ್ಥಾನಕ್ಕೆ ಬಡ್ತಿ ನೀಡಲು ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಒಪ್ಪಿಗೆ ಸೂಚಿಸಿರುವರಾದರೂ ಕೆಲವು ಷರತ್ತುಗಳನ್ನು ಒಡ್ಡಿದ್ದಾರೆ. ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳುವಾಗ ತಮ್ಮನ್ನು ಸಹಭಾಗಿ ಮಾಡಬೇಕೆಂದು ಹೇಳಿರುವ ಸಿಂಗ್ ಅವರು ಸಿಧು ಅವರಿಗೆ ನೀಡಲಾಗುವ ಬಡ್ತಿಯು ತಾವು ಇದುವರಗೆ ರಾಜ್ಯಲಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳಿಗೆ ಪೂರಕವಾಗಿರಬೇಕು ಮತ್ತು ಪಕ್ಷವನ್ನು ಪುನಃ ಅಧಿಕಾರಕ್ಕೆ ತರುವಲ್ಲಿ ನೆರವಾಗಬೇಕು ಎಂದಿದ್ದಾರೆ ಅಂತ ಮೂಲಗಳು ತಿಳಿಸಿವೆ.

ಹಾಗೆಯೇ, ಸಂಪುಟವನ್ನು ಪುನಾರಚಿಸಲು ತನ್ನನ್ನು ಮುಕ್ತವಾಗಿ ಬಿಡಬೇಕು ಮತ್ತು ಸಿಧು ಅವರೊಂದಿಗೆ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲು ತನ್ನ ಆಯ್ಕೆ ಸೂಚಿಸಲು ಅವಕಾಶ ನೀಡಬೇಕೆಂದು ಸಿಂಗ್ ಹೇಳಿರುವುದಾಗಿ ವರದಿಯಾಗಿದೆ.

ಆದರೆ ಮೂಲಗಳ ಪ್ರಕಾರ ಸಿಂಗ್ ಮತ್ತು ಸಿಧು ನಡುವಿನ ಎಲ್ಲ ಭಿನ್ನಾಬಿಪ್ರಾಯಗಳನ್ನು ಹೈಕಮಾಂಡ್ ಇತ್ಯರ್ಥಗೊಳಿಸಿಲ್ಲ. ತನ್ನ ವಿರುದ್ಧ ಮಾಡಿರುವ ಟ್ವೀಟ್​ಗಳ ಬಗ್ಗೆ ಸಿಧು ಅವರು ಬಹಿರಂಗವಾಗಿ ಕ್ಷಮೆ ಕೇಳದ ಹೊರತು ತಾನು ಅವರನ್ನು ಭೇಟಿಯಾಗುವುದಿಲ್ಲ ಎಂದು ಅಮರಿಂದರ್ ಸಿಂಗ್ ಹೇಳಿದ್ದಾರೆ.

ಹೈಕಮಾಂಡ್ ಹೆಣೆದಿರುವ ರಾಜಿಸೂತ್ರವು ಸಿಧು ಅವರು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷನನ್ನಾಗಿ ನೇಮಕ ಮಾಡುವುದು ಮತ್ತು ಸಿಂಗ್ ಸೂಚಿಸುವ ಮೂವರು ಕಾರ್ಯಾಧ್ಯಕ್ಷರನ್ನು ನೇಮಕ ಮಾಡುವುದನ್ನು ಒಳಗೊಂಡಿದೆ. ಹಾಗೆಯೇ, ಸಿಂಗ್ ಅವರ ಸಚಿವ ಸಂಪುಟ ವಿಸ್ತರಣೆಯಾಗಬೇಕು ಮತ್ತು ಹಿಂದೂ ಮತ್ತ ದಲಿತರಿಗೆ ಸಂಪುಟದಲ್ಲಿ ಆದ್ಯತೆ ನೀಡಬೇಕು ಎನ್ನುವುದೂ ರಾಜಿಸೂತ್ರದಲ್ಲಿ ಅಡಗಿದೆ ಅಂತ ಮೂಲಗಳು ತಿಳಿಸಿವೆ.

ಸಿಧು ಅವರು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸುನಿಲ್ ಜಾಖರ್ ಸೇರಿದಂತೆ ಪಂಜಾಬಿನ ಹಿರಿಯ ಕಾಂಗ್ರೆಸ್ ನಾಯಕರೊಂದಿಗೆ ಸಾಲು ಸಾಲು ಸಭೆಗಳನ್ನು ನಡೆಸಿ ಎಲ್ಲರಿಂದ ಮಾರ್ಗದರ್ಶನ ಪಡೆಯುತ್ತಿರುವೆ ಅಂತ ಟ್ವೀಟ್​ ಮಾಡಿದಾಗಲೇ, ಹೈಕಮಾಂಡ್ ಕಲಹನಿರತ ಇಬ್ಬರು ನಾಯಕರ ನಡುವೆ ಶಾಂತಿ ಏರ್ಪಡಿಸುವುದರಲ್ಲಿ ಯಶ ಕಂಡಿದೆ ಎಂಬ ಕುರುಹು ಸಿಕ್ಕಿತ್ತು.

‘ಪ್ರತಿಷ್ಠಿತ ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಿಂದ ಮಾರ್ಗದರ್ಶನ ಪಡೆಯುತ್ತಿರುವೆ, ಬುದ್ಧಿವಂತ ನಾಯಕರೊಂದಿಗೆ ಸಮಾಲೋಚನೆ ನಡೆಸುವುದು ತಿಂಗಳಗಟ್ಟಲೆ ಪಡೆಯುವ ಶಿಕ್ಷಣಕ್ಕೆ ಸಮನಾಗಿದೆ,’ ಎಂದು ಸಿಧು ಇಮೇಜುಗಳೊಂದಿಗೆ ಟ್ವೀಟ್​ ಮಾಡಿದ್ದರು.

ಸಿಧು ಅವರನ್ನು ಸುನಿಲ್ ಜಾಖರ್ ಸ್ಥಾನದಲ್ಲಿ ಪಿಪಿಸಿಸಿ ಅಧ್ಯಕ್ಷರನ್ನಾಗಿ ನೇಮಕ ಮಾಡುವುದಕ್ಕೆ ತನ್ನ ವಿರೋಧವಿದೆ ಎಂದು ಶುಕ್ರವಾರದಂದು ಸಿಂಗ್ ಅವರು ಸೋನಿಯಾ ಗಾಂಧಿಗೆ ಪತ್ರ ಬರೆದ ನಂತರ ಸಭೆಗಳ ನಡೆಯಲಾರಂಬಿಸಿದವು. ಸಿಂಗ್, ಸಿಧು ಅವರೊಂದಿಗೆ ಗಾಂಧಿಗಳು ನಡೆಸಿದ ಪ್ರತ್ಯೇಕ ಸಭೆಗಳಲ್ಲಿ ಇದೇ ಸೂತ್ರವನ್ನು ಚರ್ಚಿಸಲಾಗಿತ್ತು.

ಗುರುವಾರದಂದು ಸಿಂಗ್ ಮತ್ತು ಸಿಧು ಬಣಗಳ ನಡುವೆ ವೈಷಮ್ಯ ನಾಟಕೀಯವಾಗಿ ತಾರಕಕ್ಕೇರಿ ಎರಡು ಗುಂಪುಗಳು ಬೇರೆ ಬೇರೆ ಸ್ಥಳಗಳಲ್ಲಿ ಅವರು ಸಭೆ ನಡೆಸಿದ ನಂತರ ಮಾಜಿ ಕ್ರಿಕೆಟರ್ ದೆಹಲಿಗೆ ಬಂದು ಸೋನಿಯಾ ಮತ್ತು ರಾಹುಲ್ ಗಾಂಧಿಯನ್ನು ಭೇಟಿಯಾದರು.

ಸಿಂಗ್ ಮತ್ತು ಸಿಧು ನಡುವಿನ ತಿಕ್ಕಾಟಕ್ಕೆ 5 ವರ್ಷಗಳ ಇತಿಹಾಸವಿದೆ. ಆದರೆ ಪಂಜಾಬ್ ಕಾಂಗ್ರೆಸ್​ನ ಪ್ರಮುಖ ನಾಯಕರಾಗಿರುವ ಅವರಿಬ್ಬರ ಜಗಳ ಮುದಿನ ವರ್ಷ ನಡೆಯಲಿರುವ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರವನ್ನು ಉಳಿಸಿಕೊಳ್ಳುವ ಬಗ್ಗೆ ಸಂಶಯಗಳೆದ್ದಿವೆ.

ಇದನ್ನೂ ಓದಿ: ದೇಶಕ್ಕೆಲ್ಲ ಉಪದೇಶ ನೀಡುವ ಕಾಂಗೈ ನಾಯಕ ನವಜೋತ್​ ಸಿದ್ಧು ಸುಮಾರು ರೂ. 9 ಲಕ್ಷ ವಿದ್ಯುತ್ ಬಿಲ್ ಬಾಕಿಯುಳಿಸಿಕೊಂಡಿದ್ದಾರೆ!

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada