ದೆಹಲಿ: ಅಮೆಜಾನ್ (Amazon) ಅನ್ನು ಗಾಂಜಾ (marijuana)ಮಾರಾಟಕ್ಕೆ ಮಾಧ್ಯಮವಾಗಿ ಬಳಸಲಾಗುತ್ತಿದೆ ಎಂಬ ವರದಿಗಳನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ತನಿಖೆ ಮಾಡಬೇಕು ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (CAIT) ಸೋಮವಾರ ಹೇಳಿದೆ. ಮಧ್ಯಪ್ರದೇಶದಲ್ಲಿ ಇ-ಕಾಮರ್ಸ್ ದೈತ್ಯ ಅಮೆಜಾನ್ ಮೂಲಕ ಗಾಂಜಾ ಮಾರಾಟ ಆರೋಪದ ಬಗ್ಗೆ ವರದಿಗಳ ಕುರಿತು ಎನ್‌ಸಿಬಿ ತನಿಖೆಗೆ ಒತ್ತಾಯಿಸಿ ವ್ಯಾಪಾರಿಗಳ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ (Praveen Khandelwal) ಪತ್ರಿಕಾಗೋಷ್ಠಿ ನಡೆಸಿದರು. ಭಿಂಡ್ ಜಿಲ್ಲೆಯ ರಸ್ತೆ ಬದಿಯ ಉಪಾಹಾರ ಗೃಹದಲ್ಲಿ 20 ಕೆಜಿ ಗಾಂಜಾದೊಂದಿಗೆ ಇಬ್ಬರನ್ನು ಮಧ್ಯ ಪ್ರದೇಶ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ವಿಚಾರಣೆ ವೇಳೆ ಆಂಧ್ರಪ್ರದೇಶದ ವಿಶಾಖಪಟ್ಟಣಂನಿಂದ (Visakhapatnam) ಗಾಂಜಾವನ್ನು ಕಳ್ಳಸಾಗಣೆ ಮಾಡಲು ಅಮೆಜಾನ್ ಬಳಸಿದ್ದೇವೆ ಎಂದು ಇಬ್ಬರೂ ಪೊಲೀಸರಿಗೆ ತಿಳಿಸಿದ್ದಾರೆ. ಕಳೆದ ನಾಲ್ಕು ತಿಂಗಳುಗಳಲ್ಲಿ ಒಂದೇ ವೇದಿಕೆಯನ್ನು ಬಳಸಿಕೊಂಡು ಸುಮಾರು ಒಂದು ಟನ್ (1,000 ಕೆಜಿ) ಗಾಂಜಾವನ್ನು ಈಗಾಗಲೇ ಅವರಿಂದ ಪಡೆಯಲಾಗಿದೆ. ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ 1.10 ಕೋಟಿ ರೂಪಾಯಿ ಮೌಲ್ಯದ ವಿತ್ತೀಯ ವಹಿವಾಟು ನಡೆದಿದೆ ಎಂದು ಭಿಂಡ್ ಡಿಎಸ್ಪಿ ಮನೋಜ್ ಕುಮಾರ್ ಸಿಂಗ್ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.
Latest media story about 1 crore worth Drugs ( Marijuana) sold on Amazon is extremely shocking and a huge threat to the nation. We demand an immediate NCB investigation into this report – @praveendel. @PMOIndia @narendramodi @PiyushGoyal @smritiirani @Suhelseth @yogrishiramdev pic.twitter.com/nlnWZH4eJP
— Confederation of All India Traders (CAIT) (@CAITIndia) November 14, 2021
ಇವರಿಬ್ಬರು ಡ್ರಗ್ ದಂಧೆಯ ಗ್ಯಾಂಗ್‌ನ ಭಾಗವಾಗಿದ್ದಾರೆ ಎಂದು ಸಿಂಗ್ ಮತ್ತೊಂದು ಮಾಧ್ಯಮ ಸಂಸ್ಥೆಗೆ ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ಕು ಗುರುತಿಸಲ್ಪಟ್ಟ ಮತ್ತು ಆರು ಅಪರಿಚಿತ ಆರೋಪಿಗಳನ್ನು ಬಂಧಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು.
ಈ ದಂಧೆಯ ಹಿಂದಿನ ಮಾಸ್ಟರ್ ಮೈಂಡ್ ಕರಿಬೇವು (ಕಡಿ ಪತ್ತಾ) ಎಂದು ಭಿಂಡ್ (ಮಧ್ಯ ಪ್ರದೇಶ), ಆಗ್ರಾ (ಯುಪಿ), ದೆಹಲಿ, ಗ್ವಾಲಿಯರ್ (ಮಧ್ಯಪ್ರದೇಶ ) ಮತ್ತು ಕೋಟಾ (ರಾಜಸ್ಥಾನ) ದ ಏಜೆಂಟ್‌ಗಳಿಗೆ ಗಾಂಜಾವನ್ನು ಕಳ್ಳಸಾಗಣೆ ಮಾಡಿದ್ದಾನೆ ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.
ಇದನ್ನೂ ಓದಿ: 20 ವರ್ಷಗಳಲ್ಲಿ 1,888 ಕಸ್ಟಡಿ ಸಾವು; ಇದರಲ್ಲಿ ಶಿಕ್ಷೆ ಆಗಿದ್ದು ಕೇವಲ 26 ಪೊಲೀಸರಿಗೆ