ಬಿಹಾರದಲ್ಲಿ ಭೀಕರ ಅಪಘಾತ; ಅಂತ್ಯಕ್ರಿಯೆ ಮುಗಿಸಿ ವಾಪಸ್ ಬರುತ್ತಿದ್ದ ಆರು ಮಂದಿ ಸಾವು
ಟ್ರಕ್ ಹಾಗೂ ಎಸ್ಯುವಿ ಡಿಕ್ಕಿಯ ರಭಸಕ್ಕೆ ಎಸ್ಯುವಿ ವಾಹನದಲ್ಲಿದ್ದ ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉಳಿದಂತೆ ಗಾಯಗೊಂಡ ನಾಲ್ವರನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಬಿಹಾರದ ಜಮುಯಿ ಎಂಬಲ್ಲಿ ಟ್ರಕ್ ಮತ್ತು ಎಸ್ಯುವಿ ವಾಹನದ ನಡುವೆ ಭೀಕರ ಅಪಘಾತ ನಡೆದಿದ್ದು, ಆರು ಮಂದಿ ಮೃತಪಟ್ಟಿದ್ದಾರೆ. ಹಾಗೇ, ನಾಲ್ವರಿಗೆ ಗಂಭೀರ ಗಾಯವಾಗಿದೆ. ಹಲ್ಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ, ಪಿಪ್ರಾ ಎಂಬ ಹಳ್ಳಿಯ ಸಮೀಪ ಸಿಕಂದ್ರಾ-ಶೇಖ್ಪುರ ಮುಖ್ಯರಸ್ತೆಯಲ್ಲಿ ದುರ್ಘಟನೆ ನಡೆದದ್ದು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಮೃತಪಟ್ಟವರಲ್ಲಿ 5 ಮಂದಿ ಜಮುಯಿಯ ಖೈರಾ ಬ್ಲಾಕ್ನ ನೌದಿಹಾದವರು. ಮತ್ತೊಬ್ಬರು ಸ್ಥಳೀಯರಲ್ಲ. ಇವರೆಲ್ಲ ಜಮುಯಿ ಖೈರಾದಿಂದ ಪಾಟ್ನಾಕ್ಕೆ ಒಂದು ಅಂತ್ಯಕ್ರಿಯೆಗಾಗಿ ತೆರಳಿದ್ದರು. ಅಲ್ಲಿಂದ ವಾಪಸ್ ಬರುವಾಗ ಅಪಘಾತ ಉಂಟಾಗಿದೆ.
ಟ್ರಕ್ ಹಾಗೂ ಎಸ್ಯುವಿ ಡಿಕ್ಕಿಯ ರಭಸಕ್ಕೆ ಎಸ್ಯುವಿ ವಾಹನದಲ್ಲಿದ್ದ ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉಳಿದಂತೆ ಗಾಯಗೊಂಡ ನಾಲ್ವರನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಭೀಕರ ಅಪಘಾತವಾಗುತ್ತಿದ್ದಂತೆ ಒಂದೇ ಬಾರಿಗೆ ಅನೇಕರು ಸ್ಥಳದಲ್ಲಿ ಸೇರಿದ ಪರಿಣಾಮ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಮೃತರ ಮತ್ತು ಗಾಯಗೊಂಡವರ ಕುಟುಂಬಕ್ಕೆ ವಿಷಯ ತಿಳಿಸಲಾಗಿದ್ದು, ಅವರೂ ಕೂಡ ಇಲ್ಲಿಗೆ ಆಗಮಿಸಿದ್ದಾರೆ.
ಇದನ್ನೂ ಓದಿ: Viral Video: ತನ್ನ ಎದುರಿಗಿದ್ದ ಮೊಸಳೆಗೆ ಚಪ್ಪಲಿ ತೋರಿಸಿ ಹೆದರಿಸಿದ ಮಹಿಳೆ! ಹೇಗಂತೀರಾ? ವಿಡಿಯೊ ನೋಡಿ