ಕೊವಿಡ್-19 ಲಸಿಕೆ ಮಾತ್ರೆ; ಭಾರತದಲ್ಲಿ ಕ್ಲಿನಿಕಲ್ ಪ್ರಯೋಗದ II ನೇ ಹಂತ ಶೀಘ್ರದಲ್ಲೇ ಪ್ರಾರಂಭಿಸಲು ವ್ಯಾಕ್ಸಾರ್ಟ್ ಸಿದ್ಧತೆ

| Updated By: ರಶ್ಮಿ ಕಲ್ಲಕಟ್ಟ

Updated on: Feb 09, 2022 | 12:29 PM

ಮಾಚಲ ಪ್ರದೇಶದ ಕಸೌಲಿಯಲ್ಲಿರುವ ದೇಶದ ದೊಡ್ಡ ಡ್ರಗ್ ಲ್ಯಾಬೊರೇಟರಿ, ಸೆಂಟ್ರಲ್ ಡ್ರಗ್ಸ್ ಲ್ಯಾಬೋರೇಟರಿ (CDL) ವ್ಯಾಕ್ಸಾರ್ಟ್ ತಯಾರಿಸಿದ VXA-CoV2 Enteric-coated tablets ಮಾದರಿಗಳನ್ನು ಸ್ವೀಕರಿಸಿದೆ. 

ಕೊವಿಡ್-19 ಲಸಿಕೆ ಮಾತ್ರೆ; ಭಾರತದಲ್ಲಿ ಕ್ಲಿನಿಕಲ್ ಪ್ರಯೋಗದ II ನೇ ಹಂತ ಶೀಘ್ರದಲ್ಲೇ ಪ್ರಾರಂಭಿಸಲು ವ್ಯಾಕ್ಸಾರ್ಟ್ ಸಿದ್ಧತೆ
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ: ಅಮೆರಿಕದ ಬಯೋಟೆಕ್ನಾಲಜಿ ಕಂಪನಿ, ವ್ಯಾಕ್ಸಾರ್ಟ್ (Vaxart) ಭಾರತದಲ್ಲಿ ತನ್ನ ಓರಲ್ ಟ್ಯಾಬ್ಲೆಟ್ ಕೊವಿಡ್ -19 (Covid-19) ಲಸಿಕೆಯ ಎರಡನೇ ಹಂತದ ಕ್ಲಿನಿಕಲ್ ಪ್ರಯೋಗವನ್ನು ಶೀಘ್ರದಲ್ಲೇ ಪ್ರಾರಂಭಿಸಲು ಸಿದ್ಧವಾಗಿದೆ ಎಂದು ನ್ಯೂಸ್18 ಡಾಟ್ ಕಾಮ್ ವರದಿ ಮಾಡಿದೆ. ಭಾರತವು ಕಂಪನಿಯ ಜಾಗತಿಕ ಪ್ರಯೋಗದ ಒಂದು ಭಾಗವಾಗಿದೆ. ಇದನ್ನು ಕಳೆದ ಅಕ್ಟೋಬರ್‌ನಲ್ಲಿ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಸುಮಾರು 96 ಜನರಿಗೆ ಇದನ್ನು ನೀಡಲಾಯಿತು. ಹಿಮಾಚಲ ಪ್ರದೇಶದ ಕಸೌಲಿಯಲ್ಲಿರುವ ದೇಶದ ದೊಡ್ಡ ಡ್ರಗ್ ಲ್ಯಾಬೊರೇಟರಿ, ಸೆಂಟ್ರಲ್ ಡ್ರಗ್ಸ್ ಲ್ಯಾಬೋರೇಟರಿ (CDL) ವ್ಯಾಕ್ಸಾರ್ಟ್ ತಯಾರಿಸಿದ ” VXA-CoV2 Enteric-coated tablets” ಮಾದರಿಗಳನ್ನು ಸ್ವೀಕರಿಸಿದೆ.  ಈ ಟ್ಯಾಬ್ಲೆಟ್‌ಗಳನ್ನು ಬೆಂಗಳೂರು ಮೂಲದ ಸಿಂಗೀನ್ ಇಂಟರ್‌ನ್ಯಾಶನಲ್ ಆಮದು ಮಾಡಿಕೊಂಡಿದೆ, ಇದು ಅಮೆರಿಕದ ಔಷಧ ತಯಾರಕರ ಪರವಾಗಿ ಭಾರತದಲ್ಲಿ ಪ್ರಯೋಗಗಳನ್ನು ನಡೆಸಲಿದೆ.ಕೊವಿಡ್ ಲಸಿಕೆ ಮಾತ್ರೆಗಳ ಮಾದರಿಗಳನ್ನು ಪರೀಕ್ಷೆಗಾಗಿ ಸ್ವೀಕರಿಸಲಾಗಿದೆ ಮತ್ತು ನಂತರ ಅವುಗಳನ್ನು ಭಾರತದಲ್ಲಿ ಡೋಸಿಂಗ್ ಪ್ರಾರಂಭಿಸಲು ನೀಡಲಾಗುತ್ತದೆ” ಎಂದು ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ನ್ಯೂಸ್ 18 ಡಾಟ್ ಕಾಮ್ ಗೆ ತಿಳಿಸಿದರು. ಭಾಗವಹಿಸುವವರು 1 ಮತ್ತು 29 ನೇ ದಿನದಲ್ಲಿ ಎರಡು ಡೋಸ್ ಲಸಿಕೆ ಮಾತ್ರೆಗಳನ್ನು ಸ್ವೀಕರಿಸುತ್ತಾರೆ ಮತ್ತು ಪರಿಣಾಮಕಾರಿತ್ವಕ್ಕಾಗಿ ಆರು ತಿಂಗಳ ಕಾಲ ಅವುಗಳನ್ನು ಗಮನಿಸಲಾಗುತ್ತದೆ.

ಇದು ಬಾಯಿ ಮೂಲಕ ಸೇವಿಸುವ ಲಸಿಕೆಯಾಗಿದ್ದು, ಚುಚ್ಚುಮದ್ದಿನ ಬದಲಿಗೆ ಟ್ಯಾಬ್ಲೆಟ್ ನೀಡಬಹುದು.
ಕೊವಿಡ್ -19 ಗೆ ಕಾರಣವಾಗುವ ವೈರಸ್ SARS-CoV-2 ನಂತಹ ಮ್ಯೂಕೋಸಲ್ ಉಸಿರಾಟದ ವೈರಸ್‌ಗಳಿಂದ ರಕ್ಷಿಸಲು ಅದರ ಲಸಿಕೆ ಸೂಕ್ತವಾಗಿದೆ ಎಂದು ವ್ಯಾಕ್ಸಾರ್ಟ್ ಹೇಳಿದೆ.

ಅಕ್ಟೋಬರ್‌ನಲ್ಲಿ ಬಿಡುಗಡೆಯಾದ ಕಂಪನಿಯ ಪತ್ರಿಕಾ ಪ್ರಕಟಣೆಯ ಪ್ರಕಾರ, ಕಂಪನಿಯ ಮುಖ್ಯ ವೈಜ್ಞಾನಿಕ ಅಧಿಕಾರಿ ಡಾ ಸೀನ್ ಟಕರ್, ಲಸಿಕೆ ಪಡೆದವರು ಅಧ್ಯಯನಗಳಲ್ಲಿ  ಹೆಚ್ಚಿನ ಸೀರಮ್ ಪ್ರತಿಕಾಯ ಮಟ್ಟವನ್ನು” ಉತ್ಪಾದಿಸಿದ್ದಾರೆ ಎಂದು ಹೇಳಿದ್ದಾರೆ.

ಇನ್ನೊಂದು ಲಸಿಕೆ ಮಾತ್ರೆ ಭಾರತದಲ್ಲಿ ಸಿದ್ಧವಾಗುತ್ತಿದೆ
ನೋವೆಲ್ ಬಯೋಥೆರಪಿಟಿಕ್ ಮತ್ತು ಲಸಿಕೆ ತಯಾರಿಸುವ ಮತ್ತೊಂದು ಭಾರತೀಯ ಡೆವಲಪರ್, ಪ್ರೇಮಾಸ್ ಬಯೋಟೆಕ್, ನವೆಂಬರ್‌ನಲ್ಲಿ ತನ್ನ ಓರಲ್ ಕೊವಿಡ್ -19 ಲಸಿಕೆಗಾಗಿ ದಕ್ಷಿಣ ಆಫ್ರಿಕಾದಲ್ಲಿ ಮಾನವ ಕ್ಲಿನಿಕಲ್ ಪ್ರಯೋಗಗಳ ಹಂತ 1 ಅನ್ನು ಪ್ರಾರಂಭಿಸಿದೆ.  ಕಂಪನಿಯು ಓರಮೆಡ್ ಫಾರ್ಮಾಸ್ಯುಟಿಕಲ್ಸ್ ಸಹಭಾಗಿತ್ವದಲ್ಲಿ ಓರಲ್ ಲಸಿಕೆಯನ್ನು ಅಭಿವೃದ್ಧಿಪಡಿಸುತ್ತಿದೆ. ಭಾರತೀಯ ಬಯೋಟೆಕ್ ಸಂಸ್ಥೆಯು ವೈರಸ್ ತರಹದ ಕಣ (VLP) ಲಸಿಕೆ ತಂತ್ರಜ್ಞಾನವನ್ನು ವಿನ್ಯಾಸಗೊಳಿಸಿದ್ದರೆ, Oramed ಉತ್ಪನ್ನವನ್ನು ಓರಲ್ ಲಸಿಕೆಯಾಗಿ ಪರಿವರ್ತಿಸಲು ಅದರ ಸ್ವಾಮ್ಯದ ಪ್ರೋಟೀನ್ ಓರಲ್ ಡೆಲಿವರಿ ತಂತ್ರಜ್ಞಾನವನ್ನು ಬಳಸುತ್ತದೆ.

ಯಶಸ್ವಿಯಾದರೆ ಓರಲ್ ಲಸಿಕೆಗಳು – ಟ್ಯಾಬ್ಲೆಟ್ ಅಥವಾ ಕ್ಯಾಪ್ಸುಲ್ ರೂಪದಲ್ಲಿ ಒಂದು ಗೇಮ್ ಚೇಂಜರ್ ಆಗಲಿವೆ. ಏಕೆಂದರೆ ಅವುಗಳನ್ನು ಶೈತ್ಯೀಕರಣವಿಲ್ಲದೆ ಸಂಗ್ರಹಿಸಲು ಮತ್ತು ರವಾನಿಸಲು ಸುಲಭವಾಗುತ್ತದೆ.
ಇದು ಸೂಜಿ ಗಾಯಕ್ಕೆ ಸಂಬಂಧಿಸಿದ ಅಪಾಯಗಳನ್ನು ಸಹ ತೆಗೆದುಹಾಕುತ್ತದೆ. ಇದು ಲಸಿಕೆ ಶಿಬಿರಗಳಿಗೆ ಖರ್ಚು ಮಾಡುವ ಕೋಟ್ಯಂತರ ರೂಪಾಯಿಗಳನ್ನು ಉಳಿಸುತ್ತದೆ ಮತ್ತು ಹೆಚ್ಚು ಉತ್ತಮ, ವೇಗವಾಗಿ ಲಸಿಕೆ ನೀಡಲು ಸಹಾಯವಾಗುತ್ತದೆ

ಇದನ್ನೂ ಓದಿ:ಕೊವಿಡ್  ಎರಡನೇ ಅಲೆ ಸಮಯದಲ್ಲಿ ಗಂಗಾ ನದಿಯಲ್ಲಿ  ಎಸೆಯಲಾದ ಮೃತದೇಹಗಳ ಕುರಿತು ಮಾಹಿತಿ ಲಭ್ಯವಿಲ್ಲ: ಕೇಂದ್ರ