ಕೊವಿಡ್  ಎರಡನೇ ಅಲೆ ಸಮಯದಲ್ಲಿ ಗಂಗಾ ನದಿಯಲ್ಲಿ  ಎಸೆಯಲಾದ ಮೃತದೇಹಗಳ ಕುರಿತು ಮಾಹಿತಿ ಲಭ್ಯವಿಲ್ಲ: ಕೇಂದ್ರ

ವಿಡ್ ಪ್ರೋಟೋಕಾಲ್‌ಗಳಿಗೆ ಅನುಗುಣವಾಗಿ ಮೃತದೇಹಗಳನ್ನು ವಿಲೇವಾರಿ ಮಾಡಲು ತೆಗೆದುಕೊಂಡ ಕ್ರಮಗಳ ಬಗ್ಗೆ ಮಾಹಿತಿಯನ್ನು ಕೋರಿದ ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಒಬ್ರೇನ್ ಅವರ ಪ್ರಶ್ನೆಗೆ ಸರ್ಕಾರ ನೀಡಿದ ಪ್ರತಿಕ್ರಿಯೆಯಾಗಿದೆ ಇದು

ಕೊವಿಡ್  ಎರಡನೇ ಅಲೆ ಸಮಯದಲ್ಲಿ ಗಂಗಾ ನದಿಯಲ್ಲಿ  ಎಸೆಯಲಾದ ಮೃತದೇಹಗಳ ಕುರಿತು ಮಾಹಿತಿ ಲಭ್ಯವಿಲ್ಲ: ಕೇಂದ್ರ
ಗಂಗಾದಲ್ಲಿ ತೇಲುವ ಮೃತದೇಹ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Feb 07, 2022 | 7:31 PM

ದೆಹಲಿ:  ಕೊವಿಡ್ (Covid19) ಎರಡನೇ ಅಲೆಯ ಉತ್ತುಂಗದಲ್ಲಿ ಗಂಗಾನದಿಯಲ್ಲಿ ತೇಲಿ ಬಂದ ಮೃತದೇಹಗಳ ಸಂಖ್ಯೆಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ ಎಂದು ಸರ್ಕಾರ ಸೋಮವಾರ ರಾಜ್ಯಸಭೆಯಲ್ಲಿ (Rajya Sabha) ತಿಳಿಸಿದೆ. ಗಂಗಾ ನದಿಯಲ್ಲಿ ಎಸೆಯಲಾಗಿದೆ ಎಂದು ಅಂದಾಜಿಸಲಾದ ಕೊವಿಡ್  ಸಂಬಂಧಿತ ಮೃತ ದೇಹಗಳ ಸಂಖ್ಯೆಗೆ ಸಂಬಂಧಿಸಿದಂತೆ ಮಾಹಿತಿ ಲಭ್ಯವಿಲ್ಲ ಎಂದು ಜೂನಿಯರ್ ಜಲಶಕ್ತಿ ಸಚಿವ ಬಿಶ್ವೇಶ್ವರ ತುಡು ಹೇಳಿದ್ದಾರೆ.  ಕೊವಿಡ್ ಪ್ರೋಟೋಕಾಲ್‌ಗಳಿಗೆ ಅನುಗುಣವಾಗಿ ಮೃತದೇಹಗಳನ್ನು ವಿಲೇವಾರಿ ಮಾಡಲು ತೆಗೆದುಕೊಂಡ ಕ್ರಮಗಳ ಬಗ್ಗೆ ಮಾಹಿತಿಯನ್ನು ಕೋರಿದ ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಒಬ್ರೇನ್ ಅವರ ಪ್ರಶ್ನೆಗೆ ಸರ್ಕಾರ ನೀಡಿದ ಪ್ರತಿಕ್ರಿಯೆಯಾಗಿದೆ ಇದು. ನದಿ ಅಥವಾ ಅದರ ದಡದಲ್ಲಿ ವಾರೀಸುದಾರರಿಲ್ಲದ/ಗುರುತಿಸದ, ಸುಟ್ಟ/ಭಾಗಶಃ ಸುಟ್ಟ ಮೃತದೇಹಗಳು ಪತ್ತೆಯಾಗಿವೆ. ಉತ್ತರ ಪ್ರದೇಶ ಮತ್ತು ಬಿಹಾರದ ಜಿಲ್ಲೆಗಳಿಂದ ಈ ಘಟನೆಗಳು ವರದಿಯಾಗಿವೆ ಎಂದು ಸಚಿವರು ಹೇಳಿದರು.  ಸಚಿವಾಲಯವು ನ್ಯಾಶನಲ್ ಮಿಷನ್ ಫಾರ್ ಕ್ಲೀನ್ ಗಂಗಾ ಮೂಲಕ ಆಯಾ ರಾಜ್ಯ ಸರ್ಕಾರಗಳಿಂದ ಮೃತದೇಹಗಳು ಮತ್ತು ವಿಲೇವಾರಿ ಸೇರಿದಂತೆ ತೆಗೆದುಕೊಂಡ ಕ್ರಮಗಳ ಕುರಿತು ವರದಿಯನ್ನು ಕೇಳಿದೆ ಎಂದು ಅವರು ಹೇಳಿದರು.  ಉತ್ತರಾಖಂಡ, ಜಾರ್ಖಂಡ್ ಮತ್ತು ಬಂಗಾಳದ ಮುಖ್ಯ ಕಾರ್ಯದರ್ಶಿಗಳಿಗೂ ಸಲಹೆಗಳನ್ನು ನೀಡಲಾಗಿದೆ ಎಂದು ಅವರು ಹೇಳಿದರು.

ಸರ್ಕಾರದ ಪ್ರತಿಕ್ರಿಯೆಯನ್ನು ಟೀಕಿಸಿದ ಕಾಂಗ್ರೆಸ್​​ನ  ಹಿರಿಯ ನಾಯಕ ಕೆಸಿ ವೇಣುಗೋಪಾಲ್ ಪ್ರಸ್ತುತ ಉತ್ತರವು ಆಮ್ಲಜನಕದ ಕೊರತೆಯಿಂದಾಗಿ ಸಾವುಗಳ ಬಗ್ಗೆ ಒದಗಿಸಿದ ಪ್ರಶ್ನೆಗಳಿಗೆ ಬಹುತೇಕ ಸಮಾನವಾಗಿದೆ ಎಂದು ಸೂಚಿಸಿದರು.

“ಸರ್ಕಾರವು ಸಂಸತ್ತನ್ನು ದಾರಿತಪ್ಪಿಸುತ್ತಿದೆ. ಅದೇ ಉತ್ತರ. ಆಮ್ಲಜನಕದ ಕೊರತೆಯಿಂದ ಎಷ್ಟು ಸಾವುಗಳು ಸಂಭವಿಸಿವೆ ಎಂದು ನಾನು ಕೇಳಿದಾಗ ನನಗೆ ಅದೇ ಉತ್ತರ ಸಿಕ್ಕಿತು ಎಂದು ವೇಣುಗೋಪಾಲ್ ಎನ್‌ಡಿಟಿವಿಗೆ ತಿಳಿಸಿದರು.

ಇತರ ವಿರೋಧ ಪಕ್ಷದ ನಾಯಕರು ಕೂಡಾ ಇದೇ ರೀತಿ ಟೀಕಿಸಿದ್ದು ಒಬ್ರಿಯನ್ ಅವರ ಸಹೋದ್ಯೋಗಿ ಸರ್ಕಾರ “ಸುಳ್ಳು” ಹೇಳುತ್ತಿದೆ ಮತ್ತು “ಸತ್ಯಗಳನ್ನು ಮರೆಮಾಚುತ್ತದೆ” ಎಂದು ಆರೋಪಿಸಿದರು.

ಗಂಗಾನದಿಯಲ್ಲಿ ತೇಲುತ್ತಿರುವ ಶವಗಳನ್ನು ಮಾಧ್ಯಮಗಳು ತೋರಿಸಿದ್ದವು. ಎಷ್ಟು ಶವಗಳನ್ನು ಎಸೆದಿದ್ದಾರೆ ಎಂಬುದನ್ನು ಸರ್ಕಾರ ಸಂಸತ್​​ಗೆ  ತಿಳಿಸಬೇಕು. ಸರ್ಕಾರ ಸತ್ಯವನ್ನು ಮರೆಮಾಚುತ್ತಿದೆ.ಇದು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ, ಸಂಸತ್​​ಗೆ ಅವಮಾನವಾಗಿದೆ ಎಂದು ತೃಣಮೂಲದ ಸುಖೇಂದು ಶೇಖರ್ ರಾಯ್ ಹೇಳಿದ್ದಾರೆ.

ಇದಕ್ಕಿಂತ ಹೆಚ್ಚು ಸಂವೇದನಾರಹಿತ ಮತ್ತು ಅಸಭ್ಯ ಉತ್ತರ ಇರಲಾರದು ಎಂದು ಆರ್‌ಜೆಡಿಯ ಮನೋಜ್ ಝಾ ಹೇಳಿದ್ದಾರೆ.

ಕಳೆದ ವರ್ಷ ಮೇ-ಜೂನ್‌ನಲ್ಲಿ ಪವಿತ್ರ ಗಂಗೆಯ ಕೆಳಗೆ ತೇಲುತ್ತಿರುವ ಮೃತ ದೇಹಗಳ (ಕೊವಿಡ್‌ನಿಂದ ಸತ್ತವರೆಂದು ನಂಬಲಾಗಿದೆ) ಭೀಕರವಾದ ದೃಶ್ಯವು ಭಾರತದಲ್ಲಿ ಮತ್ತು ಪ್ರಪಂಚದಾದ್ಯಂತ ಸುದ್ದಿಯಾಗಿತ್ತು.  ಸುಪ್ರೀಂಕೋರ್ಟ್ ಇದನ್ನು “ಗಂಭೀರ ಸಮಸ್ಯೆ” ಎಂದು ಹೇಳಿದ್ದು ಸಂಬಂಧಪಟ್ಟ ಸರ್ಕಾರಗಳನ್ನು ತರಾಟೆಗೆ ತೆಗೆದುಕೊಂಡಿತ್ತು.

ಎರಡನೇ ಅಲೆಯ ಉತ್ತುಂಗದಲ್ಲಿ, ಪ್ರತಿದಿನ 3,000 ಮತ್ತು 4,000 ಕೊವಿಡ್ ಸಂಬಂಧಿತ ಸಾವುಗಳು ವರದಿಯಾದಾಗ (ಅಧಿಕೃತವಾಗಿ) ನೂರಾರು ಮೃತ ದೇಹಗಳು ಬಿಹಾರ ಮತ್ತು ಯುಪಿಯಲ್ಲಿ ಗಂಗಾನದಿಯ ದಡದಲ್ಲಿ  ತೇಲಿಬಂದಿತ್ತು.

ಮೃತದೇಹಗಳು ಗ್ರಾಮೀಣ ಪ್ರದೇಶದ ಕೊವಿಡ್ ಸಂತ್ರಸ್ತರದ್ದು ಎಂದು ಭಾವಿಸಲಾಗಿತ್ತು, ಅಲ್ಲಿ ಪ್ರೋಟೋಕಾಲ್‌ಗಳ ಅನುಪಸ್ಥಿತಿಯಲ್ಲಿ, ವೈರಸ್ ಮತ್ತಷ್ಟು ಹರಡುವ ಭಯದಿಂದ ಸ್ಥಳೀಯರು ಶವಗಳನ್ನು ನದಿಗೆ ಎಸೆಯುತ್ತಿದ್ದರು.ಶವಸಂಸ್ಕಾರಕ್ಕಾಗಿ ಉರುವಲುಗಳ ದುಬಾರಿ ಬೆಲೆಯಿಂದಾಗಿ ಜನರು ಶವಗಳನ್ನು ಎಸೆಯುತ್ತಿದ್ದಾರೆ ಎಂಬ ಮಾಧ್ಯಮಗಳು ಹೇಳಿದ್ದು ಸರ್ಕಾರ ಅದನ್ನು ನಿರಾಕರಿಸಿತ್ತು.

ದೇಹಗಳು ಯುಪಿ ಮತ್ತು ಬಿಹಾರ ಸರ್ಕಾರಗಳ ನಡುವೆ ಸಾರ್ವಜನಿಕ ಆರೋಗ್ಯದ ಭಯ ಮತ್ತು ಆಪಾದನೆಗೆ ಕಾರಣವಾಯಿತು.

ಮೇ ಮಧ್ಯದಲ್ಲಿ ಕೇಂದ್ರ ಸರ್ಕಾರವು ಬಿಹಾರ ಮತ್ತು ಯುಪಿ ಮತ್ತಷ್ಟು ಶವಗಳನ್ನು ಎಸೆಯುವುದನ್ನು ತಡೆಯಲು ಮತ್ತು ಗೌರವಾನ್ವಿತ ಶವಸಂಸ್ಕಾರ ಮತ್ತು ಅವಶೇಷಗಳ ಸುರಕ್ಷಿತ ವಿಲೇವಾರಿಯತ್ತ ಗಮನಹರಿಸುವಂತೆ ಕೇಳಿಕೊಂಡಿತು.  ಗಂಗಾ ನದಿಯಲ್ಲಿ ಮೃತದೇಹಗಳ ಭಯಾನಕ ದೃಶ್ಯದ ಒಂದು ತಿಂಗಳ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತು ಅವರ ಸರ್ಕಾರವು ಕೊವಿಡ್ ಬಿಕ್ಕಟ್ಟಿನ “ಸಾಟಿಯಿಲ್ಲದ” ನಿರ್ವಹಣೆಯನ್ನು ಶ್ಲಾಘಿಸಿದರು.

ಇದನ್ನೂ ಓದಿ: ಒಂದು ಮತದಲ್ಲಿ ಏನಾಗುತ್ತದೆ? ಮತದಾರರಲ್ಲಿ ಕೇಳಿದ ಉತ್ತರ ಪ್ರದೇಶದ ಅಧಿಕಾರಿಗಳು; ಕ್ರಮ ಕೈಗೊಳ್ಳಲು ಅಖಿಲೇಶ್ ಒತ್ತಾಯ

ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ
ಈ ರಾಶಿಯವರಿಗೆ ಇಂದು ಹಣಕಾಸಿನ ವಿಷಯದಲ್ಲಿ ಒಳ್ಳೆಯದಾಗುತ್ತೆ
ಈ ರಾಶಿಯವರಿಗೆ ಇಂದು ಹಣಕಾಸಿನ ವಿಷಯದಲ್ಲಿ ಒಳ್ಳೆಯದಾಗುತ್ತೆ
ಚೈತ್ರಾ ಕುಂದಾಪುರ ವಿಚಾರದಲ್ಲಿ ಉಲ್ಟಾ ಹೊಡೆತ ರಜತ್; ಸುದೀಪ್​ಗೂ ಇದು ಶಾಕ್
ಚೈತ್ರಾ ಕುಂದಾಪುರ ವಿಚಾರದಲ್ಲಿ ಉಲ್ಟಾ ಹೊಡೆತ ರಜತ್; ಸುದೀಪ್​ಗೂ ಇದು ಶಾಕ್
ಮಾಜಿ ಲವರ್​ನಿಂದ ಯುವತಿಗೆ ಕಿರುಕುಳ: ಬೈಕ್ ಕದ್ದು, ಜಖಂಗೊಳಿಸಿದ ಯುವಕ
ಮಾಜಿ ಲವರ್​ನಿಂದ ಯುವತಿಗೆ ಕಿರುಕುಳ: ಬೈಕ್ ಕದ್ದು, ಜಖಂಗೊಳಿಸಿದ ಯುವಕ