AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತವನ್ನು ಕಾಪಾಡಲು ಲಾಕ್​ಡೌನ್ ಮಾಡಿ; ಖ್ಯಾತ ಅಮೆರಿಕಾದ ಸಾಂಕ್ರಾಮಿಕ ರೋಗ ತಜ್ಞ ಡಾ. ಆಂಥೊನಿ ಫೌಸಿ

India Lockdown: ಒಂದು ವರ್ಷದ ಹಿಂದೆ ಚೀನಾದಲ್ಲಿ ಕೊವಿಡ್ ವೈರಾಣುವಿನ ಅತಿ ದೊಡ್ಡ ಸ್ಫೋಟವಾಗಿತ್ತು. ಆಗ ಇಡೀ ಚೀನಾವನ್ನು ಲಾಕ್​ಡೌನ್ ಮಾಡಲಾಯಿತು. ಈ ದಾರಿಯ ಮೂಲಕ ಚೀನಾ ಬಹುದೊಡ್ಡ ಅಪಾಯದಿಂದ ಬಚಾವಾಯಿತು ಎಂದು ಅವರು ಸಂದರ್ಶನದಲ್ಲಿ ತಿಳಿಸಿದರು.

ಭಾರತವನ್ನು ಕಾಪಾಡಲು ಲಾಕ್​ಡೌನ್ ಮಾಡಿ; ಖ್ಯಾತ ಅಮೆರಿಕಾದ ಸಾಂಕ್ರಾಮಿಕ ರೋಗ ತಜ್ಞ ಡಾ. ಆಂಥೊನಿ ಫೌಸಿ
ಡಾ.ಆಂಥೊನಿ ಫೌಸಿ
guruganesh bhat
|

Updated on:May 01, 2021 | 4:36 PM

Share

ವಾಷಿಂಗ್ಟನ್ ಡಿಸಿ: ಭಾರತದಲ್ಲಿ ಕೊವಿಡ್ ಸೋಂಕು ಹರಡುವುದನ್ನು ತಡೆಯಲು ತಕ್ಷಣವೇ ಇಡೀ ದೇಶದಲ್ಲಿ ಕೆಲ ವಾರಗಳ ಕಾಲ ಸಂಪೂರ್ಣ ಲಾಕ್​ಡೌನ್ ಘೋಷಿಸಬೇಕು ಎಂದು ಅಮೆರಿಕಾದ ಖ್ಯಾತ ಸಾಂಕ್ರಾಮಿಕ ರೋಗ ತಜ್ಞ ಡಾ. ಆಂಥೊನಿ ಫೌಸಿ ಅಭಿಪ್ರಾಯಪಟ್ಟಿದ್ದಾರೆ. ದಿ ಇಂಡಿಯನ್ ಎಕ್ಸ್​ಪ್ರೆಸ್​ಗೆ ನೀಡಿದ ಸಂದರ್ಶನದಲ್ಲಿ ಕೊವಿಡ್ ತಡೆಯಲು ಭಾರತದಲ್ಲಿ ಕೊವಿಡ್ ಲಸಿಕೆ, ಔಷಧ ಮತ್ತು ಪಿಪಿಇ ಕಿಟ್​ಗಳನ್ನು ಸಂಗ್ರಹಿಸುವುದು ಸಹ ಅತಿ ಪ್ರಮುಖ ಅಂಶವಾಗಿದೆ. ಕೊವಿಡ್ ಸುಳಿಯ ಅಪಾಯಕ್ಕೆ ಸಿಲುಕಿದವರನ್ನು ಅತ್ಯಂತ ಸಂಘಟನಾತ್ಮಕವಾಗಿ ರಕ್ಷಿಸುವ ಅಗತ್ಯವಿದೆ ಎಂದು ಡಾ ಫೌಸಿ ತಿಳಿಸಿದ್ದಾರೆ.

ತಮ್ಮ ಸಂದರ್ಶನದಲ್ಲಿ ಯಾವುದೇ ಸರ್ಕಾರದ ಹೆಸರು ಉಲ್ಲೇಖಿಸದೇ ಭಾರತದ ಕೊವಿಡ್ ಪರಿಸ್ಥಿತಿಯ ಕುರಿತು ಮಾತನಾಡಿದ ಅವರು, ಭಾರತದಲ್ಲಿ ಕೊವಿಡ್ ವಿರುದ್ಧದ ಗೆಲುವನ್ನು ಅತ್ಯಂತ ಅಕಾಲಿಕವಾಗಿ ಮ್ತತು ಬೇಗ ಘೋಷಿಸಲಾಯಿತು. ಸದ್ಯ ಭಾರತಕ್ಕೆ ಎದುರಾಗಲಿರುವ ಮುಂದಿನ ಅಪಾಯದಿಂದ ಪಾರಾಗಲು ತಾತ್ಕಾಲಿಕ ಲಾಕ್​ಡೌನ್ ಘೋಷಿಸಬೇಕು. ವೈರಾಣುವಿನ ವಿರುದ್ಧದ ಹೋರಾಟದಲ್ಲಿ ಮುಂಚಿನಿಂದಲೂ  ವಿವರಿಸಿದಂತೆ ತ್ವರಿತ, ಮಧ್ಯಂತರ ಮತ್ತು ದೀರ್ಘಕಾಲಿಕ ಯೋಜನೆಗಳಿರುತ್ತವೆ. ಅಂತಹ ಯೋಜನೆಗಳನ್ನು ರೂಪಿಸಿಕೊಂಡರೆ ಮಾತ್ರ ವೈರಾಣುವಿನ ದಾಳಿಯಿಂದ ದೇಶವನ್ನು ಪಾರು ಮಾಡಬಹುದು ಎಂದರು.

ಸದ್ಯದ ಅತೀ ಪ್ರಮುಖ ವಿಷಯವೆಂದರೆ ತಕ್ಷಣವೇ ವೈದ್ಯಕೀಯ ಆಕ್ಸಿಜನ್​ನ ಪೂರೈಕೆ ಮಾಡುವುದು. ಔಷಧ, ಪಿಪಿಇ ಕಿಟ್ ಮತ್ತು ಲಸಿಕೆಯನ್ನು ಸಮರ್ಪಕವಾಗಿ ಪೂರೈಸುವುದು. ಇವುಗಳೆಲ್ಲವುಗಳ ಜತೆಗೆ ತಕ್ಷಣಕಜ್ಕೆ ಕೈಗೊಳ್ಳಬೇಕಾದ ಇನ್ನೊಂದು ನಿರ್ಧಾರವೆಂದೆರ ತಾತ್ಕಾಲಿಕವಾಗಿ ಲಾಕ್​ಡೌನ್ ಮಾಡುವುದು ಎಂದು ಅವರು ವಿವರಿಸಿದ್ದಾರೆ. ಚೀನಾದ ಉದಾಹರಣೆಯನ್ನು ಉಲ್ಲೇಖಿಸಿದ ಅವರು, ಒಂದು ವರ್ಷದ ಹಿಂದೆ ಚೀನಾದಲ್ಲಿ ಕೊವಿಡ್ ವೈರಾಣುವಿನ ಅತಿ ದೊಡ್ಡ ಸ್ಫೋಟವಾಗಿತ್ತು. ಆಗ ಇಡೀ ಚೀನಾವನ್ನು ಲಾಕ್​ಡೌನ್ ಮಾಡಲಾಯಿತು. ಈ ದಾರಿಯ ಮೂಲಕ ಚೀನಾ ಬಹುದೊಡ್ಡ ಅಪಾಯದಿಂದ ಬಚಾವಾಯಿತು ಎಂದು ಅವರು ಸಂದರ್ಶನದಲ್ಲಿ ತಿಳಿಸಿದರು.

ತಾತ್ಕಾಲಿಕವಾಗಿ ಒಂದು ತಿಂಗಳ ಮಟ್ಟಿಗಾದರೂ ಭಾರತವನ್ನು ಲಾಕ್​ಡೌನ್ ಮಾಡುವ ಮೂಲಕ ಕೊರೊನಾ ಹಾವಳಿಯನ್ನು ಕಡಿಮೆ ಮಾಡಬಹುದು. ಆರು ತಿಂಗಳಷ್ಟು ದೀರ್ಘಕಾಲ ಕಾಲ ಲಾಕ್​ಡೌನ್ ಮಾಡುವ ಅಗತ್ಯವಿಲ್ಲ. ಆದರೆ ವೈರಸ್​ನ ಚೈನ್​​ ಲಿಂಕ್​ಗಳನ್ನು ಮುರಿಯುವ ಮೂಲಕವೇ ಈ ಅಪಾಯದಿಂದ ಆಚೆ ಬರಬಹುದು ಎಂದು ಅವರು ಅಭಿಪ್ರಾಯಪಟ್ಟರು.

ಇದನ್ನೂ ಓದಿ: ದೇಶಾದ್ಯಂತ ಇಂದು ಶುರುವಾಗಿಲ್ಲ 3ನೇ ಹಂತದ ಕೊರೊನಾ ಲಸಿಕೆ ವಿತರಣೆ; ವ್ಯಾಕ್ಸಿನ್ ಇಲ್ಲ ಅಂದ್ರೂ ಕರ್ನಾಟಕದಲ್ಲಿ ಕ್ಯೂ ನಿಂತ ಜನ !

Covid Helpline Numbers: ಆಕ್ಸಿಜನ್​, ರೆಮ್​ಡೆಸಿವರ್​ ಬೇಕಾದಲ್ಲಿ ಈ ಸಂಖ್ಯೆಗಳನ್ನು ಸಂಪರ್ಕಿಸಿ

(Americas Dr Dr Anthony Fauci advises total lockdown in India for few weeks)

Published On - 3:23 pm, Sat, 1 May 21

Follow Us
guruganesh bhat
guruganesh bhat
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ