ದೆಹಲಿ ಡಿಸೆಂಬರ್ 20: ತೃಣಮೂಲ ಕಾಂಗ್ರೆಸ್ ಸಂಸದ (TMC) ಕಲ್ಯಾಣ್ ಬ್ಯಾನರ್ಜಿ ಉಪರಾಷ್ಟ್ರಪತಿ ಜಗದೀಪ್ ಧನ್ಖರ್ (Jagdeep Dhankhar) ಅವರನ್ನು ಅಣಕಿಸಿದ ಪ್ರಕರಣದ ನಡುವೆಯೇ, ಬಿಜೆಪಿ (BJP) ಮತ್ತು ಅದರ ಮಿತ್ರಪಕ್ಷಗಳಿಗೆ ಸೇರಿದ ರಾಜ್ಯಸಭಾ ಸಂಸದರು ಉಪರಾಷ್ಟ್ರಪತಿಗೆ ಒಗ್ಗಟ್ಟು ಪ್ರದರ್ಶಿಸಲು ಇಂದು ವಿಶಿಷ್ಟ ಪ್ರತಿಭಟನೆ ನಡೆಸಿದರು. ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರು ಉಪರಾಷ್ಟ್ರಪತಿ ಮತ್ತು ರಾಜ್ಯಸಭೆಯ ಸಭಾಪತಿ ಧನ್ಖರ್ ಅವರಿಗೆ ಬೆಂಬಲ ವ್ಯಕ್ತಪಡಿಸಲು ಎನ್ಡಿಎ ಸದಸ್ಯರು ಸದನದಲ್ಲಿ ಒಂದು ಗಂಟೆ ನಿಲ್ಲುವುದಾಗಿ ಹೇಳಿದ್ದು, ಸಂಸದರು ಎದ್ದು ನಿಂತ ಬೆಂಬಲ ಸೂಚಿಸಿದ್ದಾರೆ.
ಇದನ್ನು ನಾವು ಬಲವಾಗಿ ಖಂಡಿಸುತ್ತೇವೆ. ಅವರು ಎಲ್ಲ ಮಿತಿಗಳನ್ನು ಮೀರುತ್ತಿದ್ದಾರೆ. ಸಾಂವಿಧಾನಿಕ ಹುದ್ದೆಗಳಲ್ಲಿ ಜನರನ್ನು ಪದೇ ಪದೇ ಅವಮಾನಿಸುತ್ತಿದ್ದಾರೆ. ಅವರು 20 ವರ್ಷಗಳಿಂದ ಪ್ರಧಾನಿ ಮತ್ತು ಒಬಿಸಿ ಸಮುದಾಯವನ್ನು ಅವಮಾನಿಸುತ್ತಿದ್ದಾರೆ, ಏಕೆಂದರೆ ಅವರು ವಿನಮ್ರ ಹಿನ್ನೆಲೆಯಿಂದ ಬಂದವರು. ಬುಡಕಟ್ಟು ಮಹಿಳೆ ಎಂದು ಅವರು ರಾಷ್ಟ್ರಪತಿಯನ್ನು ಅವಮಾನಿಸಿದ್ದಾರೆ. ನೀವು ರೈತನ ಮಗ. ಮೊದಲ ಬಾರಿಗೆ ಜಾಟ್ ಸಮುದಾಯದ ಒಬ್ಬರು ಉಪರಾಷ್ಟ್ರಪತಿಯಾದರು. ಅವರು ಈ ಹುದ್ದೆಗೆ ಅವಮಾನ ಮಾಡಿದ್ದಾರೆ.ಉಪರಾಷ್ಟ್ರಪತಿ ಮತ್ತು ಸಂವಿಧಾನದ ಅವಮಾನವನ್ನು ನಾವು ಸಹಿಸುವುದಿಲ್ಲ ಎಂದು ಸ್ಪಷ್ಟಪಡಿಸುತ್ತೇವೆ. ಆದ್ದರಿಂದ, ನಿಮ್ಮ ಗೌರವಾರ್ಥವಾಗಿ ಮತ್ತು ಅವರ ವಿರುದ್ಧ ಪ್ರತಿಭಟಿಸಲು, ನಾವು ಪ್ರಶ್ನೋತ್ತರ ಅವಧಿಯಲ್ಲಿ ನಿಂತು ಭಾಗವಹಿಸುತ್ತೇವೆ” ಎಂದು ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
VIDEO | Rajya Sabha MPs of BJP and other NDA partners stood in the House for nearly an hour to show solidarity with the Vice-President and Chairman Jagdeep Dhankhar earlier today.#ParliamentWinterSession pic.twitter.com/Vc0RGxHUVh
— Press Trust of India (@PTI_News) December 20, 2023
ತೃಣಮೂಲ ಕಾಂಗ್ರೆಸ್ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಸಂಸತ್ತಿನ ಆವರಣದಲ್ಲಿ ಉಪರಾಷ್ಟ್ರಪತಿಯನ್ನು ಅನುಕರಿಸುವ ವಿಡಿಯೊ ರಾಜಕೀಯ ಬಿರುಗಾಳಿ ಎಬ್ಬಿಸಿದೆ. ಕಳೆದ ವಾರ ಸಂಸತ್ತಿನ ಭದ್ರತಾ ಉಲ್ಲಂಘನೆಯ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗೆ ಒತ್ತಾಯಿಸಿದ್ದಕ್ಕಾಗಿ ಅಮಾನತುಗೊಂಡ 141 ವಿರೋಧ ಪಕ್ಷದ ಸಂಸದರಲ್ಲಿ ಬ್ಯಾನರ್ಜಿ ಕೂಡ ಸೇರಿದ್ದಾರೆ. ನಿನ್ನೆ, ಮಕರ ದ್ವಾರದ ಬಳಿ ಹೊಸ ಸಂಸತ್ ಕಟ್ಟಡದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾಗ, ಸೆರಾಂಪೋರ್ ಸಂಸದರು ಉಪರಾಷ್ಟ್ರಪತಿಯನ್ನು ಅನುಕರಿಸಲು ಪ್ರಾರಂಭಿಸಿದರು. ಬ್ಯಾನರ್ಜಿ ಅವರು ಧನ್ಖರ್ ಅವರ ಸನ್ನೆಗಳನ್ನು ಅನುಕರಿಸಿದಾಗ ಇತರ ಸಂಸದರು ನಗುತ್ತಿರುವುದು ಕಂಡುಬಂತು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈ ಕೃತ್ಯವನ್ನು ಚಿತ್ರೀಕರಿಸುತ್ತಿರುವುದು ವಿಡಿಯೊದಲ್ಲಿದೆ.
ಇದನ್ನೂ ಓದಿ: ಹೊಸ ಕ್ರಿಮಿನಲ್ ಕಾನೂನುಗಳ ಅಡಿಯಲ್ಲಿ ಗುಂಪು ಹತ್ಯೆಯ ಅಪರಾಧಕ್ಕೆ ಮರಣದಂಡನೆ: ಅಮಿತ್ ಶಾ
ನಾನು ವಿಡಿಯೊವನ್ನು ನೋಡಿದ್ದೇನೆ. ಇದರಿಂದ ತುಂಬಾ ನೋವಾಯಿತು ಎಂದು ಸಭಾಪತಿ ಧನ್ಖರ್ ಪ್ರತಿಕ್ರಿಯಿಸಿದ್ದಾರೆ.. ಹಿರಿಯ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರನ್ನು ಉದ್ದೇಶಿಸಿ ಮಾತನಾಡಿದ ಧನ್ಖರ್, ನಿಮ್ಮ ಪಕ್ಷದ ಹಿರಿಯ ನಾಯಕ, ಸಂಸದರೊಬ್ಬರು ನನ್ನನ್ನು ಗೇಲಿ ಮಾಡುವ, ವೈಯಕ್ತಿಕ ದಾಳಿಯ ಕೃತ್ಯವನ್ನು ಚಿತ್ರೀಕರಿಸಿದಾಗ ನನಗೆ ಏನನಿಸಿತು ಎಂದು ಊಹಿಸಿಕೊಳ್ಳಿ ಎಂದಿದ್ದಾರೆ. “ಇದು ಕೇವಲ ರೈತ ಅಥವಾ ಸಮುದಾಯಕ್ಕೆ ಮಾಡಿದ ಅವಮಾನವಲ್ಲ, ಇದು ರಾಜ್ಯಸಭಾ ಅಧ್ಯಕ್ಷ ಸ್ಥಾನಕ್ಕೆ ಅಗೌರವ. ಅದೂ ಕೂಡ ದೇಶವನ್ನು ದೀರ್ಘಕಾಲ ಆಳಿದ ಪಕ್ಷದಿಂದ ಎಂದು ಧನ್ಖರ್ ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ