AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೀನಾದ ಗಡಿ ಒಪ್ಪಂದದ ನಡುವೆ, ಇಂದು ಭಾರತಕ್ಕೆ ಭೇಟಿ ನೀಡಲಿರುವ ಭೂತಾನ್ ರಾಜ

ಭಾರತದ ಜತೆಗೆ ಸಂಬಂಧವನ್ನು ಗಟ್ಟಿಗೊಳಿಸಲು ಭೂತಾನ್​​ನ ರಾಜ ಜಿಗ್ಮೆ ಖೇಸರ್ ನಾಮ್‌ಗೈಲ್ ವಾಂಗ್‌ಚುಕ್ ಇಂದು ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ಭಾರತದ ಸ್ಥಳೀಯ ಹಾಗೂ ಮಿತ್ರ ರಾಷ್ಟ್ರ ಭೂತಾನ್​​​​​ ​​​, ಅನೇಕ ಒಪ್ಪಂದ ಹಾಗೂ ಉತ್ತಮ ಸ್ನೇಹವನ್ನು ಇಟ್ಟುಕೊಂಡಿದೆ. ಇದೀಗ ಚೀನಾದ ಜತೆಗೆ ಭೂತಾನ್​​​​​ ​​​ ಗಡಿ ಪ್ರದೇಶಗಳ ವಿವಾದ ಬಗ್ಗೆ ಚರ್ಚೆ ನಡೆಸುತ್ತಿದೆ.

ಚೀನಾದ ಗಡಿ ಒಪ್ಪಂದದ ನಡುವೆ, ಇಂದು ಭಾರತಕ್ಕೆ ಭೇಟಿ ನೀಡಲಿರುವ ಭೂತಾನ್ ರಾಜ
ಭೂತಾನ್​​ನ ರಾಜ ಜಿಗ್ಮೆ ಖೇಸರ್ ನಾಮ್‌ಗೈಲ್ ವಾಂಗ್‌ಚುಕ್
ಅಕ್ಷಯ್​ ಪಲ್ಲಮಜಲು​​
|

Updated on:Nov 03, 2023 | 11:55 AM

Share

ಒಂದು ಕಡೆ ಚೀನಾದ ಜತೆಗೆ ತಮ್ಮ ಗಡಿ ವಿವಾದವನ್ನು ಬಗೆಹರಿಸಲು ಭೂತಾನ್ ಮತ್ತು ಚೀನಾ (Bhutan and China) ಹೊಸ ಪ್ರಯತ್ನಗಳನ್ನು ನಡೆಸುತ್ತಿದೆ. ಇನ್ನೊಂದು ಕಡೆ ಭಾರತದ ಜತೆಗೆ ಸಂಬಂಧವನ್ನು ಗಟ್ಟಿಗೊಳಿಸಲು ಭೂತಾನ್​​ನ ರಾಜ ಜಿಗ್ಮೆ ಖೇಸರ್ ನಾಮ್‌ಗೈಲ್ ವಾಂಗ್‌ಚುಕ್ (Jigme Khesar Namgyel Wangchuk) ಇಂದು ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ಭಾರತದ ಸ್ಥಳೀಯ ಹಾಗೂ ಮಿತ್ರ ರಾಷ್ಟ್ರ ಭೂತಾನ್​​​​​ ​​​, ಅನೇಕ ಒಪ್ಪಂದ ಹಾಗೂ ಉತ್ತಮ ಸ್ನೇಹವನ್ನು ಇಟ್ಟುಕೊಂಡಿದೆ. ಇದೀಗ ಚೀನಾದ ಜತೆಗೆ ಭೂತಾನ್​​​​​ ​​​ ಗಡಿ ಪ್ರದೇಶಗಳ ವಿವಾದ ಬಗ್ಗೆ ಚರ್ಚೆ ನಡೆಸುತ್ತಿದೆ. ಇದರ ಜತೆಗೆ ಭೂತಾನ್​​​​​ ರಾಜ ಜಿಗ್ಮೆ ಖೇಸರ್ ನಾಮ್‌ಗೈಲ್ ವಾಂಗ್‌ಚುಕ್ ಅವರು ಇಂದಿನಿಂದ ಎಂಟು ದಿನಗಳ ಕಾಲ ಭಾರತದಲ್ಲಿ ಪ್ರವಾಸ ಮಾಡಲಿದ್ದಾರೆ ಎಂದು ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.

ಭಾರತ ಮತ್ತು ಭೂತಾನ್​​​​​ ​​ ಒಳ್ಳೆಯ ಸಂಬಂಧವನ್ನು ಬೆಳೆಸಿಕೊಂಡಿದೆ, ಪ್ರತಿಯೊಂದು ವಿಚಾರದಲ್ಲೂ ಉಭಯ ರಾಷ್ಟ್ರ ಸಹಕಾರ -ಸಂಬಂಧವನ್ನು ಉತ್ತಮವಾಗಿ ನಿರ್ವಹಿಸುತ್ತಿದೆ. ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೂತಾನ್​​​​​ ​​ ರಾಜ ಭೇಟಿಯಾಗಲಿದ್ದಾರೆ. ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಆದರೆ ಈ ಭೇಟಿಯಿಂದ ಚೀನಾಕ್ಕೆ ದೊಡ್ಡ ಚಿಂತೆಯಾಗಿ ಕಾಡಲಿದೆ. ಭಾರತದ ಸುತ್ತಾಲಿನ ರಾಷ್ಟ್ರಗಳನ್ನು ಭಾರತದ ವಿರುದ್ಧ ಎತ್ತಿಕಟ್ಟಲು ಹಾಗೂ ಭಾರತದ ಜತೆಗೆ ಯಾವುದೇ ಉತ್ತಮ ಸಂಬಂಧವನ್ನು ಹೊಂದದಂತೆ ನೋಡಿಕೊಳ್ಳುತ್ತಿದೆ.

ಈಗಾಗಲೇ ಚೀನಾ ಭಾರತದ ಅಕ್ಕ ಪಕ್ಕದ ರಾಷ್ಟ್ರಗಳಿಗೆ ಸಾಲ ನೀಡಿ ತನ್ನ ಹಿಡಿತದಲ್ಲಿ ಇಟ್ಟುಕೊಳ್ಳವ ಪ್ರಯತ್ನ ನಡೆಯುತ್ತಿದೆ. ಇದಕ್ಕೂ ಒಂದು ಕಾರಣ ಇದೆ ಭಾರತ ಈಗಾಗಲೇ ವಿಶ್ವದ ಮುಂದೆ ಬಲಿಷ್ಠ ರಾಷ್ಟ್ರವಾಗಿ ಬೆಳೆಯುತ್ತಿದೆ. ಇದರ ಜತೆಗೆ ಆರ್ಥಿಕವಾಗಿ, ಸೈನ್ಯ, ಎಲ್ಲ ಕ್ಷೇತ್ರದಲ್ಲಿ ಗಮನಿಯ ಸಾಧನೆ ಮಾಡುತ್ತಿದೆ. ಮೇಕ್​​ ಇನ್​​​ ಇಂಡಿಯಾ ಎಂಬ ಚಿಂತನೆ ಚೀನಾಕ್ಕೆ ದೊಡ್ಡ ಚಿಂತೆಯಾಗಿದೆ. ಭಾರತದ ಇತರ ರಾಷ್ಟ್ರಗಳ ಜತೆಗಿನ ಉತ್ತಮ ಸಂಬಂಧ ಚೀನಾಕ್ಕೆ ಸಹಿಸಲಾಗುತ್ತಿಲ್ಲ. ಇದೀಗ ಭೂತಾನ್​​​​​ ​​​ ರಾಜ ಭಾರತಕ್ಕೆ ಭೇಟಿ ನೀಡಿರುವುದು, ಚೀನಾಕ್ಕೆ ಬೆಂಕಿ ಹಾಕಿದಂತಾಗಿದೆ.

ಇತ್ತೀಚೆಗೆಷ್ಟೇ ಭೂತಾನ್​​​​​ ರಕ್ಷಣಾ ಸಚಿವ ಚೀನಾಕ್ಕೆ ಭೇಟಿ ನೀಡಿದ್ದರು. ಇದೀಗ ಭೂತನ್​​​ನ ಈ ನಡೆ ಚೀನಾದ ಗೊಂದಲಕ್ಕೆ ಕಾರಣವಾಗಿದೆ. ಇನ್ನು ಭಾರತ ಮತ್ತು ಭೂತಾನ್​​​​​ ಅನೇಕ ದ್ವೀಪಕ್ಷಿಯ ವಿಚಾರಗಳ ಬಗ್ಗೆ ಮಾತಕತೆ ನಡೆಸಲಿದೆ ಹಾಗೂ ಚೀನಾ ಜತೆಗಿನ ಗಡಿ ಒಪ್ಪಂದದಿಂದ ಭಾರತಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಭೂತಾನ್​​​​​ ಹೇಳಿದೆ.

ಚೀನಾ ಮತ್ತು ಭೂತಾನ್​​​​​ ​​​​​ಏಳು ವರ್ಷಗಳಿಂದ ಗಡಿ ವಿಚಾರದ ಒಪ್ಪಂದ ಬಗ್ಗೆ 25 ಬಾರಿ ಮಾತುಕತೆ ನಡೆಸಿದೆ. ಈ ಬಗ್ಗೆ ಎರಡು ದೇಶಗಳು ಒಂದು ನಿರ್ಧಾರಕ್ಕೆ ಬರಲಿದೆ ಎಂದು ಭೂತಾನ್​​​​​ ​​ ಹೇಳಿದೆ. ಭೂತಾನ್ ಪ್ರಧಾನಿ ಲೋಟೆ ತ್ಶೆರಿಂಗ್ ಅವರು ಚೀನಾ ಜತೆಗಿನ ಗಡಿ ವಿವಾದ ಬಗ್ಗೆ ತಕ್ಷಣದಲ್ಲೇ ಬಗೆಹರಿಸಲಾಗುವುದು ಎಂದು ಹೇಳಿದ್ದಾರೆ. ಆದರೆ ಈ ವಿಚಾರವಾಗಿ ಭಾರತ ಕೂಡ ಭೂತಾನ್​​ಗೆ ಸಲಹೆಯನ್ನು ನೀಡಿದೆ. ಗಡಿ ಒಪ್ಪಂದವನ್ನು ಭಾರತಕ್ಕೆ ತೊಂದರೆ ಆಗದಂತೆ ಮಾಡಬೇಕು. ಯಾವುದೇ ಅತುರದ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು ಎಂದು ಹೇಳಿದೆ. ಈ ಗಡಿ ಒಪ್ಪಂದದಿಂದ ಭಾರತಕ್ಕೆ ಅಪಾಯವನ್ನುಂಟು ಮಾಡಬಹುದು ಎಂದು ಭಾರತ ಹೇಳಿದೆ.

ಇದನ್ನೂ ಓದಿ:ಬ್ರಿಕ್ಸ್ ಗುಂಪನ್ನು ವಿಸ್ತರಣೆ ಮಾಡುವ ಚೀನಾದ ಆಗ್ರಹಕ್ಕೆ ಭಾರತ ಮತ್ತು ಬ್ರೆಜಿಲ್ ಆಕ್ಷೇಪ

ಡೋಕ್ಲಾಮ್ ಟ್ರೈ-ಜಂಕ್ಷನ್ ವಿವಾದ

ವಿಶೇಷವಾಗಿ ಭಾರತದ ಭದ್ರತೆಗೆ ನಿರ್ಣಾಯಕವಾದ ಡೋಕ್ಲಾಮ್ ಟ್ರೈ-ಜಂಕ್ಷನ್ ಬಗ್ಗೆ ಎಚ್ಚರಿಕೆ ಎಂಬ ಖಡಕ್​​ ಸಂದೇಶವನ್ನು ಭಾರತ ಸರ್ಕಾರ ನೀಡಿದೆ. ಡೋಕ್ಲಾಮ್ ಟ್ರೈ-ಜಂಕ್ಷನ್ ಸಮಸ್ಯೆ ಬಗೆಹರಿಸುವಲ್ಲಿ ಮೂರು ದೇಶಗಳ ಅಭಿಪ್ರಾಯ ಅಗತ್ಯ ಎಂದು ಹೇಳಿದೆ. ಈ ಬಗ್ಗೆಯೂ 2012ರಲ್ಲಿ ಮೂರು ದೇಶಗಳ ನಡುವೆ ಒಪ್ಪಂದ ಕೂಡ ಆಗಿರುವುದನ್ನು ಮರಿಯಬಾರದು ಎಂದು ಹೇಳಿದೆ.

ಚೀನಾದ ಬೆಲ್ಟ್ ಮತ್ತು ರೋಡ್ ಇನಿಶಿಯೇಟಿವ್ ಯೋಜನೆಗೆ ಸೇರಿಕೊಳ್ಳದ ಭೂತಾನ್

ಇನ್ನು ಚೀನಾದ ಬೆಲ್ಟ್ ಮತ್ತು ರೋಡ್ ಇನಿಶಿಯೇಟಿವ್ ಯೋಜನೆಗೆ ಸೇರಿಕೊಳ್ಳದ ಭಾರತದ ನೆರೆಹೊರೆಯಲ್ಲಿರುವ ಏಕೈಕ ದೇಶ ಭೂತಾನ್. ಚೀನಾದ ಬೆಲ್ಟ್ ಮತ್ತು ರೋಡ್ ಇನಿಶಿಯೇಟಿವ್ ಯೋಜನೆಯು ಏಷ್ಯಾ, ಯುರೋಪ್ ಮತ್ತು ಆಫ್ರಿಕಾ ನಡುವೆ ಭೂಮಿ ಮತ್ತು ಸಮುದ್ರದಲ್ಲಿ ಸಂಪರ್ಕವನ್ನು ಹೆಚ್ಚಿಸಲು ಚೀನಾ ಪ್ರಾರಂಭಿಸಿದ ಯೋಜನೆಯಾಗಿದೆ. ರಸ್ತೆ, ರೈಲು ಮತ್ತು ಜಲಮಾರ್ಗಗಳ ಮೂಲಕ ಚೀನಾದ ವಸ್ತುಗಳನ್ನು ಯುರೋಪ್, ಆಫ್ರಿಕಾ ಮತ್ತು ಏಷ್ಯಾದೊಂದಿಗೆ ಸಂಪರ್ಕಿಸುವುದು ಇದರ ಗುರಿಯಾಗಿದೆ. ಆದರೆ ಈ ಯೋಜನೆಯನ್ನು ಭೂತಾನ್​​ ಹಂಚಿಕೊಂಡಿಲ್ಲ ಎಂದು ಹೇಳಲಾಗಿದೆ. ಈ ಕಾರಣಕ್ಕೆ ಚೀನಾ ಇದರ ಜತೆಗೆ ಗಡಿ ವಿಚಾರವಾಗಿ ಒಪ್ಪಂದವನ್ನು ಮಾಡಿಕೊಳ್ಳಲು ಹಾಗೂ ಈ ಯೋಜನೆ ಜತೆಗೆ ಭೂತಾನ್​​​​ ಉತ್ತಮ ಸಂಬಂಧವನ್ನು ಹೊಂದುವ ಪ್ರಯತ್ನ ಮಾಡುತ್ತಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:51 am, Fri, 3 November 23