ಐಸಿಸ್ ಮಾಡ್ಯೂಲ್ ಪ್ರಕರಣ: ಆರೋಪಿ ಮೊಹಮ್ಮದ್ ಶಹನವಾಜ್ ಆಲಂ ಬಂಧನ

ಮೊಹಮ್ಮದ್ ಶಹನವಾಜ್ ಆಲಂ ಜಾರ್ಖಂಡ್‌ನ ಹಜಾರಿಬಾಗ್‌ನವ. ಪುಣೆ ಐಸಿಸ್ ಮಾಡ್ಯೂಲ್ ಪ್ರಕರಣ ಬೆಳಕಿಗೆ ಬಂದ ನಂತರ ಆತ ತಲೆಮರೆಸಿಕೊಂಡಿದ್ದ. ಆತನ ವಿರುದ್ಧ ದೆಹಲಿಯಲ್ಲಿ ಭಯೋತ್ಪಾದನಾ ಕೃತ್ಯದ ಪ್ರಕರಣ ದಾಖಲಾಗಿತ್ತು. ಆತನ ಇಬ್ಬರು ಸಹಚರರು ಜುಲೈ 18ರಂದು ಪುಣೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು

ಐಸಿಸ್ ಮಾಡ್ಯೂಲ್ ಪ್ರಕರಣ: ಆರೋಪಿ ಮೊಹಮ್ಮದ್ ಶಹನವಾಜ್ ಆಲಂ ಬಂಧನ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Nov 03, 2023 | 12:16 PM

ಪುಣೆ ನವೆಂಬರ್ 3: ಪುಣೆ ಪೊಲೀಸರು (Pune Police) ಮೋಟಾರ್ ಸೈಕಲ್ ಕಳ್ಳತನ ಪ್ರಕರಣದ ತನಿಖೆ ನಡೆಸುತ್ತಿರುವಾಗ ಇಬ್ಬರನ್ನು ಬಂಧಿದ್ದು, ಜುಲೈ 18, 2023 ರಂದು ನಡೆದ ಈ ಘಟನೆಯಲ್ಲಿ ಇಬ್ಬರು ಆರೋಪಿಗಳು ಉಗ್ರರು ಎಂದು ತಿಳಿದುಬಂದಿದೆ. ಮುಹಮ್ಮದ್ ಇಮ್ರಾನ್ ಮುಹಮ್ಮದ್ ಯೂಸುಫ್ ಖಾನ್ ಅಲಿಯಾಸ್ ಅಮೀರ್ ಅಬ್ದುಲ್ ಹಮೀದ್ ಖಾನ್ ಮತ್ತು ಮುಹಮ್ಮದ್ ಯೂನಸ್ ಮುಹಮ್ಮದ್ ಯಾಕೂಬ್ ಸಾಕಿ ಎಂಬುದು ಅವರ ಹೆಸರು. ಆ ವೇಳೆ ಆತನ ಮೂರನೇ ಸಹಚರ ಮೊಹಮ್ಮದ್ ಶಹನವಾಜ್ ಆಲಂ (Mohammad Shahnawaz Alam) ತಲೆಮರೆಸಿಕೊಂಡಿದ್ದ. ಇದೀಗ ಶಹನವಾಜ್ ನ್ನು  ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಬಂಧಿಸಿದೆ. ಆತನನ್ನು ಸೆರೆಹಿಡಿದರೆ ಮೂರು ಲಕ್ಷ ಬಹುಮಾನ ನೀಡುವುದಾಗಿ ಘೋಷಣೆ ಆಗಿತ್ತು. ಪುಣೆ ಐಸಿಸ್ ಮಾಡ್ಯೂಲ್ ಪ್ರಕರಣದಲ್ಲಿ ಇದು ಎಂಟನೇ ಬಂಧನವಾಗಿದೆ. ಅವರ ವಿಚಾರಣೆಯಿಂದ ಮಹತ್ವದ ಮಾಹಿತಿ ಸಿಗುವ ಸಾಧ್ಯತೆ ಇದೆ.

ಮೂರು ತಿಂಗಳಿನಿಂದ ಶಹನವಾಜ್ ತಲೆಮರೆಸಿಕೊಂಡಿದ್ದ

ಮೊಹಮ್ಮದ್ ಶಹನವಾಜ್ ಆಲಂ ಜಾರ್ಖಂಡ್‌ನ ಹಜಾರಿಬಾಗ್‌ನವ. ಪುಣೆ ಐಸಿಸ್ ಮಾಡ್ಯೂಲ್ ಪ್ರಕರಣ ಬೆಳಕಿಗೆ ಬಂದ ನಂತರ ಆತ ತಲೆಮರೆಸಿಕೊಂಡಿದ್ದ. ಆತನ ವಿರುದ್ಧ ದೆಹಲಿಯಲ್ಲಿ ಭಯೋತ್ಪಾದನಾ ಕೃತ್ಯದ ಪ್ರಕರಣ ದಾಖಲಾಗಿತ್ತು. ಆತನ ಇಬ್ಬರು ಸಹಚರರು ಜುಲೈ 18ರಂದು ಪುಣೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ಆ ವೇಳೆ ಆತ ತಲೆಮರೆಸಿಕೊಂಡಿದ್ದ. ದೆಹಲಿ ಪೊಲೀಸರ ವಿಶೇಷ ತನಿಖಾ ತಂಡ ಆತನಿಗಾಗಿ ಹುಡುಕಾಟ ನಡೆಸಿತ್ತು. ಕಳೆದ ತಿಂಗಳು ದೆಹಲಿ ಪೊಲೀಸರ ವಿಶೇಷ ದಳ ಅವರನ್ನು ಬಂಧಿಸಿತ್ತು. ಇದೀಗ ದೆಹಲಿ ಪೊಲೀಸರಿಂದ ಎನ್‌ಐಎ ಆತನನ್ನು ವಶಕ್ಕೆ ಪಡೆದಿದೆ.

ಮೊಹಮ್ಮದ್ ಶಹನವಾಜ್ ಆಲಂ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನು ಸಂಗ್ರಹಿಸಿದ್ದು, ದೆಹಲಿಯಲ್ಲಿ ಕೊಠಡಿ ಬಾಡಿಗೆ ಪಡೆದು ವಾಸವಾಗಿದ್ದರು. ದ್ವಿಚಕ್ರವಾಹನ ಕಳ್ಳತನ ಪ್ರಕರಣದಲ್ಲಿ ಆತನ ಇಬ್ಬರು ಸಹಚರರನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ. ಆ ಬಳಿಕ ಆತ ಪರಾರಿಯಾಗಿದ್ದ. ಆತನಿಗೆ ಮೂರು ಲಕ್ಷ ಬಹುಮಾನ ಘೋಷಿಸಲಾಗಿತ್ತು.

ಇದನ್ನೂ ಓದಿ: ಮರಾಠ ಮೀಸಲಾತಿ: ಸಮರೋಪಾದಿಯಲ್ಲಿ ನಡೆಯುತ್ತಿದೆ ಕುಣಬಿ ದಾಖಲೆಗಳನ್ನು ಪತ್ತೆ ಹಚ್ಚುವ ಕೆಲಸ

NIA ಪ್ರಕಾರ, ನಡೆಯುತ್ತಿರುವ ಪುಣೆ ಐಸಿಸ್ ಮಾಡ್ಯೂಲ್ ಪ್ರಕರಣದಲ್ಲಿ ಈತ ಇತರ ವ್ಯಕ್ತಿಗಳೊಂದಿಗೆ ನೇರವಾಗಿ ಸಂಬಂಧ ಹೊಂದಿದ್ದನು.

ಈ ಪ್ರಕರಣದಲ್ಲಿ ಎನ್‌ಐಎ ಈ ಹಿಂದೆ ಜುಲ್ಫಿಕರ್ ಅಲಿ ಬರೋಡಾವಾಲಾ, ಸಿಮಾಬ್ ನಾಸಿರುದ್ದೀನ್ ಕಾಜಿ, ಅಬ್ದುಲ್ ಕದಿರ್ ಪಠಾಣ್, ಶಾಮಿಲ್ ಸಾಕಿಬ್ ನಾಚನ್, ಮೊಹಮ್ಮದ್ ಇಮ್ರಾನ್ ಖಾನ್ ಮತ್ತು ಮೊಹಮ್ಮದ್ ಯೂನಸ್ ಸಾಕಿ ಮತ್ತು ಡಾ ಅದ್ನಾನ್ ಅಲಿ ಸರ್ಕಾರ್ ಎಂಬವರನ್ನು ಬಂಧಿಸಿತ್ತು.

ಜುಲೈ 19 ರಂದು ಮೊಹಮ್ಮದ್ ಇಮ್ರಾನ್ ಖಾನ್ ಮತ್ತು ಮೊಹಮ್ಮದ್ ಯೂನಸ್ ಸಾಕಿ ಅವರೊಂದಿಗೆ ಬೈಕ್ ಕಳ್ಳತನಕ್ಕೆ ಯತ್ನಿಸಿದ್ದಕ್ಕಾಗಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಾಗ ಆಲಂ, ಪುಣೆ ಪೊಲೀಸರಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು ಎಂದು ಫೆಡರಲ್ ಏಜೆನ್ಸಿ ಪ್ರಕಟಣೆಯಲ್ಲಿ ತಿಳಿಸಿದೆ. ಬಳಿಕ ಆ ಐಸಿಸ್‌ನ ಸಕ್ರಿಯ ಕಾರ್ಯಕರ್ತರು ಎಂಬುದು ಬೆಳಕಿಗೆ ಬಂದಿದೆ. ಆಲಂನನ್ನು ಸೆರೆ ಹಿಡಿಯುವ ಬಗ್ಗೆ ಮಾಹಿತಿ ನೀಡಿದವರಿಗೆ ₹3 ಲಕ್ಷ ಬಹುಮಾನ ನೀಡುವುದಾಗಿ ಎನ್‌ಐಎ ಘೋಷಿಸಿತ್ತು.

ಭಾರತದಲ್ಲಿ ಭಯೋತ್ಪಾದನೆ ಮತ್ತು ಹಿಂಸಾಚಾರ ಮಾಡುವ ಭಯೋತ್ಪಾದಕ ಸಂಘಟನೆಯ ಯೋಜನೆಗಳನ್ನು ವಿಫಲಗೊಳಿಸಲು ಎನ್ಐಎ ವ್ಯಾಪಕ ತನಿಖೆಗಳನ್ನು ನಡೆಸುತ್ತಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:13 pm, Fri, 3 November 23