ನೋಯ್ಡಾದಲ್ಲಿ ರೇವ್ ಪಾರ್ಟಿಗಳಿಗಾಗಿ ಹಾವಿನ ವಿಷ: ಯೂಟ್ಯೂಬರ್ ಎಲ್ವಿಶ್ ಯಾದವ್ ವಿರುದ್ಧ ಕೇಸ್

ಎಲ್ವಿಶ್ ಯಾದವ್ ತನ್ನ ನೋಯ್ಡಾದ ಫಾರ್ಮ್‌ಹೌಸ್‌ನಲ್ಲಿ ಹಾವಿನ ವಿಷ ಮತ್ತು ಜೀವಂತ ಹಾವುಗಳೊಂದಿಗೆ ವಿಡಿಯೊಗಳನ್ನು ಚಿತ್ರೀಕರಿಸಿದ್ದಾರೆ ಮತ್ತು ವಿದೇಶಿ ಹುಡುಗಿಯರನ್ನು ನಿಯಮಿತವಾಗಿ ಆಹ್ವಾನಿಸುವ "ಕಾನೂನುಬಾಹಿರ" ರೇವ್ ಪಾರ್ಟಿಗಳನ್ನು ಆಯೋಜಿಸಿದ್ದಾರೆ ಎಂದು ನಮಗೆ ಮಾಹಿತಿ ಇದೆ ಎಂದು ನೋಯ್ಡಾ ಪೊಲೀಸರಿಗೆ ದೂರು ನೀಡಿದವರು ತಿಳಿಸಿದ್ದಾರೆ. ದೂ

ನೋಯ್ಡಾದಲ್ಲಿ ರೇವ್ ಪಾರ್ಟಿಗಳಿಗಾಗಿ ಹಾವಿನ ವಿಷ: ಯೂಟ್ಯೂಬರ್ ಎಲ್ವಿಶ್ ಯಾದವ್ ವಿರುದ್ಧ ಕೇಸ್
ಎಲ್ವಿಶ್ ಯಾದವ್
Follow us
ರಶ್ಮಿ ಕಲ್ಲಕಟ್ಟ
|

Updated on: Nov 03, 2023 | 1:08 PM

ನೋಯ್ಡಾ ನವೆಂಬರ್ 03: ರೇವ್ ಪಾರ್ಟಿಗಾಗಿ (rave party) ಹಾವಿನ ವಿಷ ಬಳಕೆ ಪ್ರಕರಣದಲ್ಲಿ ಯೂಟ್ಯೂಬರ್, ಪ್ರಭಾವಿ ಮತ್ತು ಬಿಗ್ ಬಾಸ್ OTT2 (Bigg Boss OTT2) ವಿಜೇತ ಎಲ್ವಿಶ್ ಯಾದವ್ (Elvish Yadav) ಮತ್ತು ಆತ ಐದು ಸಹಚರರ ವಿರುದ್ಧ  ಪ್ರಕರಣ ದಾಖಲಾಗಿದೆ. ಅವರ ಬಳಿಯಿಂದ 20 ಮಿಲ್ಲಿ ವಿಷ, ರೇವ್ ಪಾರ್ಟಿಗಳ ಸಮಯದಲ್ಲಿ ಅವರು ಬಳಸಿದ 9 ವಿಷಕಾರಿ ಹಾವುಗಳನ್ನು ವಶಪಡಿಸಿಕೊಳ್ಳಲಾಗಿದೆ. ನೋಯ್ಡಾ ಪೊಲೀಸ್ ಎಫ್‌ಐಆರ್ ಪ್ರಕಾರ, 5 ನಾಗರಹಾವು, 1 ಹೆಬ್ಬಾವು ಮತ್ತು 1 ಎರಡು ತಲೆಯ ಹಾವು, ಒಂದು ಕೇರೆ ಹಾವು ವಶದಿಂದ ವಶಪಡಿಸಿಕೊಳ್ಳಲಾಗಿದೆ. ಎಲ್ವಿಶ್ ಯಾದವ್ ವಿರುದ್ಧ ಸಾಕಷ್ಟು ಸಮಯದಿಂದ ಪ್ರಕರಣವನ್ನು ಮುಂದುವರಿಸುತ್ತಿದ್ದ ಬಿಜೆಪಿ ಸಂಸದೆ ಮೇನಕಾ ಗಾಂಧಿ ಅವರ ಎನ್‌ಜಿಒ, ಹಾವಿನ ವಿಷ ಬಳಕೆಯ ರೇವ್ ಪಾರ್ಟಿ ವಿರುದ್ಧ ದೂರು ದಾಖಲಿಸಿದೆ.

ನೋಯ್ಡಾ ರೇವ್ ಪಾರ್ಟಿ ಭೇದಿಸಿದ್ದು ಹೇಗೆ?

ಎಲ್ವಿಶ್ ಯಾದವ್ ತನ್ನ ನೋಯ್ಡಾದ ಫಾರ್ಮ್‌ಹೌಸ್‌ನಲ್ಲಿ ಹಾವಿನ ವಿಷ ಮತ್ತು ಜೀವಂತ ಹಾವುಗಳೊಂದಿಗೆ ವಿಡಿಯೊಗಳನ್ನು ಚಿತ್ರೀಕರಿಸಿದ್ದಾರೆ ಮತ್ತು ವಿದೇಶಿ ಹುಡುಗಿಯರನ್ನು ನಿಯಮಿತವಾಗಿ ಆಹ್ವಾನಿಸುವ “ಕಾನೂನುಬಾಹಿರ” ರೇವ್ ಪಾರ್ಟಿಗಳನ್ನು ಆಯೋಜಿಸಿದ್ದಾರೆ ಎಂದು ನಮಗೆ ಮಾಹಿತಿ ಇದೆ ಎಂದು ನೋಯ್ಡಾ ಪೊಲೀಸರಿಗೆ ದೂರು ನೀಡಿದವರು ತಿಳಿಸಿದ್ದಾರೆ. ದೂರಿನ ಪ್ರಕಾರ, ಎನ್‌ಜಿಒದ ವ್ಯಕ್ತಿಯೊಬ್ಬರು ಎಲ್ವಿಶ್ ಯಾದವ್ ಅವರನ್ನು ಸಂಪರ್ಕಿಸಿ ಸ್ವಲ್ಪ ನಾಗರಹಾವಿನ ವಿಷವನ್ನು ಪಡೆಯಲು ಕೇಳಿದರು. ಎಲ್ವಿಶ್ ತನ್ನ ಏಜೆಂಟರ ವಿವರಗಳನ್ನು ನೀಡಿ, ಅವರ ಫೋನ್ ಸಂಖ್ಯೆಯನ್ನು ಒದಗಿಸಿದರು.

ಸಂಪರ್ಕಿಸಿದಾಗ, ಏಜೆಂಟ್ ಹಾವು ಮತ್ತು ಹಾವಿನ ವಿಷವನ್ನು ನೀಡಲು ಒಪ್ಪಿಕೊಂಡರು. ನಂತರ ರಾಹುಲ್, ಟಿಟುನಾಥ್, ಜಯಕರನ್, ನಾರಾಯಣ್, ರವಿನಾಥ್ ಎಂಬವರ ಪಾರ್ಟಿಯ ಸ್ಥಳಕ್ಕೆ ತಲುಪಿದರು. ನಂತರ ಎನ್‌ಜಿಒ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದು, ಹಾವು ಮತ್ತು ಹಾವಿನ ವಿಷವನ್ನು ತಂದ ಐವರನ್ನು ಪೊಲೀಸರಿಗೆ ಒಪ್ಪಿಸಲಾಗಿದೆ. ಎಲ್ಲ ಐವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಅವರು ಸ್ಪಷ್ಟವಾಗಿ ಎಲ್ವಿಶ್ ಯಾದವ್ ಅವರನ್ನು ಹೆಸರಿಸಿದ್ದಾರೆ.

9 ವಿಷಕಾರಿ ಹಾವುಗಳು ಪತ್ತೆ

ಇವರಿಂದ 5 ನಾಗರಹಾವು, 1 ಹೆಬ್ಬಾವು ಮತ್ತು 1 ಎರಡು ತಲೆಯ ಹಾವು, ಒಂದು ಕೇರೆ ಹಾವು ಸೇರಿದಂತೆ 9 ಹಾವುಗಳನ್ನು ವಶಪಡಿಸಿಕೊಳ್ಳಲಾಗಿದೆ.

ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಅವರು ಎಫ್‌ಐಆರ್ ಸುದ್ದಿಗೆ ಪ್ರತಿಕ್ರಿಯಿಸಿದ್ದು, ಎಲ್ವಿಶ್ ಯಾದವ್ ಅವರು ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರೊಂದಿಗೆ ಇರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. “ಹರ್ಯಾಣದ ಸಿಎಂ ಈ ವ್ಯಕ್ತಿಯನ್ನು ವೇದಿಕೆಯಿಂದ ಪ್ರಚಾರ ಮಾಡುತ್ತಾರೆ. ಒಂದೆಡೆ ಸಾಕ್ಷಿ ಮಲಿಕ್, ಬಜರಂಗ್ ಪೂನಿಯಾರಂಥಾ ಪ್ರತಿಭೆಗಳಿಗೆ ಬೀದಿಗಳಲ್ಲಿ ಹೊಡೆಯಲಾಗುತ್ತದೆ. ಹರ್ಯಾಣಣ ಸರ್ಕಾರವು ಅಂತಹ ಜನರನ್ನು ಉತ್ತೇಜಿಸುತ್ತದೆ. ಅದರ ವಿಡಿಯೊಗಳಲ್ಲಿ ನೀವು ಹುಡುಗಿಯರ ಮೇಲೆ ಅಶ್ಲೀಲ ಕಾಮೆಂಟ್‌ಗಳು ಮತ್ತು ನಿಂದನೀಯ ಭಾಷೆಯನ್ನು ಕಾಣಬಹುದು. ನಾಯಕರು ಮತಕ್ಕಾಗಿ ಏನು ಬೇಕಾದರೂ ಮಾಡಬಹುದು.. ಎಂದು ಸ್ವಾತಿ ಮಲಿವಾಲ್ ಟ್ವೀಟ್ ಮಾಡಿದ್ದಾರೆ.

ಇತ್ತೀಚೆಗಷ್ಟೇ ಎಲ್ವಿಶ್‌ಗೆ ₹1 ಕೋಟಿ ನೀಡುವಂತೆ ಸುಲಿಗೆ ಕರೆ ಬಂದಿತ್ತು. ಎಲ್ವಿಶ್‌ಗೆ ಈ ಸುಲಿಗೆ ಕರೆಗಳನ್ನು ಮಾಡಿದ್ದಕ್ಕಾಗಿ ಗುಜರಾತ್‌ನ 25 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ. ಅವರ ದೊಡ್ಡ OTT ಗೆಲುವಿನ ನಂತರ, ಎಲ್ವಿಶ್ ದುಬೈನಲ್ಲಿ ₹8 ಕೋಟಿ ಮೌಲ್ಯದ ಮನೆಯನ್ನು ಖರೀದಿಸಿದರು.

ಎಲ್ವಿಶ್ ಯಾದವ್ ಯೂಟ್ಯೂಬ್‌ನಲ್ಲಿ 7.51 ಮಿಲಿಯನ್ ಚಂದಾದಾರರನ್ನು ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ 15.6 ಮಿಲಿಯನ್ ಫಾಲೋವರ್ ಹೊಂದಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ