Amit Shah Tirupati Visit: ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಅಮಿತ್ ಶಾ

|

Updated on: May 31, 2024 | 12:26 PM

ಕೇಂದ್ರ ಗೃಹ ಸಚಿವ ಅಮಿತ್ ಶಾ ತಿರುಪತಿಗೆ ತೆರಳಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಅಮಿತ್ ಶಾ ಕುಟುಂಬ ಸಮೇತರಾಗಿ ಆಗಮಿಸಿದ್ದರು, ಮೊದಲು ರೇಣುಗುಂಟ ವಿಮಾನ ನಿಲ್ದಾಣಕ್ಕೆ ಬಂದಿಳಿದರು ರಸ್ತೆಯ ಮೂಲಕ ತಿರುಪತಿಗೆ ತಲುಪಿದರು. ಪ್ರಧಾನ ಅರ್ಚಕರು ವೈದಿಕ ಸ್ತೋತ್ರ ಪಠಣದ ನಡುವೆ ಅವರಿಗೆ ಸಾಂಪ್ರದಾಯಿಕ ಸ್ವಾಗತವನ್ನು ನೀಡಲಾಯಿತು.

ಅಂತಿಮ ಹಂತದ ಲೋಕಸಭಾ ಚುನಾವಣೆ(Lok Sabha Election)ಗೆ ಅಬ್ಬರದ ಪ್ರಚಾರ ಮುಗಿಸಿರುವ ಗೃಹ ಸಚಿವ ಅಮಿತ್ ಶಾ(Amit Shah) ಇಂದು ತಿರುಪತಿಗೆ ಭೇಟಿ ನೀಡಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಅಮಿತ್ ಶಾ ಕುಟುಂಬ ಸಮೇತರಾಗಿ ಆಗಮಿಸಿದ್ದರು, ಮೊದಲು ರೇಣುಗುಂಟ ವಿಮಾನ ನಿಲ್ದಾಣಕ್ಕೆ ಬಂದಿಳಿದರು ರಸ್ತೆಯ ಮೂಲಕ ತಿರುಪತಿಗೆ ತಲುಪಿದರು. ಪ್ರಧಾನ ಅರ್ಚಕರು ವೈದಿಕ ಸ್ತೋತ್ರ ಪಠಣದ ನಡುವೆ ಅವರಿಗೆ ಸಾಂಪ್ರದಾಯಿಕ ಸ್ವಾಗತವನ್ನು ನೀಡಲಾಯಿತು. ಒಂದೆಡೆ ಪ್ರಧಾನಿ ನರೇಂದ್ರ ಮೋದಿ ಕನ್ಯಾಕುಮಾರಿಗೆ ತೆರಳಿದ್ದು 48 ಗಂಟೆಗಳ ಕಾಲ ಧ್ಯಾನ ಮಾಡಲಿದ್ದಾರೆ.

ಅಮಿತ್ ಶಾ ಗಾಂಧಿನಗರದಿಂದ ಕಣಕ್ಕಿಳಿದಿದ್ದು ಅಲ್ಲಿ ಮತದಾನ ಮುಗಿದಿದೆ. 2024ರ ಲೋಕಸಭಾ ಚುನಾವಣೆಯ ಏಳನೇ ಹಾಗೂ ಕೊನೆಯ ಹಂತದ ಮತದಾನ ಜೂನ್​ 1ರಂದು ನಡೆಯಲಿದೆ. ಈ ಹಂತದಲ್ಲಿ 8 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿನ 57 ಸ್ಥಾನಗಳಿಗೆ ಮತದಾನ ನಡೆಯಲಿದೆ. ಅದೇ ದಿನ ಪಂಜಾಬ್​ ಹಾಗೂ ಹಿಮಾಚಲಪ್ರದೇಶದ ಎಲ್ಲಾ ಸ್ಥಾನಗಳಲ್ಲಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.

ಮತ್ತಷ್ಟು ಓದಿ: Kanniyakumari: ವಿವೇಕಾನಂದ ರಾಕ್ ಸ್ಮಾರಕದಲ್ಲಿ ಪ್ರಧಾನಿ ಮೋದಿ ಧ್ಯಾನ , ಇಲ್ಲಿದೆ ಫೋಟೋ

ಈ ಹಂತದಲ್ಲಿ ಬಿಹಾರದ ಎಂಟು, ಚಂಡೀಗಢದ 1, ಹಿಮಾಚಲಪ್ರದೇಶದ 4, ಜಾರ್ಖಂಡ್​ನ 3, ಒಡಿಶಾಲದ 6, ಪಂಜಾಬ್​ನ 13, ಉತ್ತರ ಪ್ರದೇಶದ 13 ಮತ್ತು ಪಶ್ಚಿಮ ಬಂಗಾಳದ 9 ಸ್ಥಾನಗಳಿಗೆ ಮತದಾನ ನಡೆಯಲಿದೆ. ಈ ಹಂತದ ಚುನಾವಣೆಯಲ್ಲಿ ಪ್ರಧಾನಿ ಮೋದಿ ಸೇರಿದಂತೆ ದೊಡ್ಡ ದೊಡ್ಡ ನಾಯಕರ ಭವಿಷ್ಯ ನಿರ್ಧಾರವಾಗಲಿದೆ.

ವಾರಾಣಸಿಯಿಂದ ಚುನಾವಣೆಗೆ ಸ್ಪರ್ಧಿಸತ್ತಿರುವ ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್​ನ ಅಜಯ್​ ರೈ ಕಣದಲ್ಲಿದ್ದಾರೆ, ಹಿಮಾಚಲ ಪ್ರದೇಶದಿಂದ ಸ್ಪರ್ಧಿಸುತ್ತಿರುವ ನಟಿ ಕಂಗನಾ ರಣಾವತ್ ವಿರುದ್ಧ ಕಾಂಗ್ರೆಸ್​ನ ವಿಕ್ರಮಾದಿತ್ಯ ಸಿಂಗ್ ಕಣದಲ್ಲಿದ್ದಾರೆ. ಗೋರಖ್​ಪುರದಿಂದ ರವಿ ಕಿಶನ್ ಸ್ಪರ್ಧಿಸುತ್ತಿದ್ದಾರೆ ಅವರ ವಿರುದ್ಧ ಎಸ್​ಪಿಯ ಕಾಜಲ್ ನಿಶಾದ್ ಇದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ