ಸ್ವಾಮಿ ವಿವೇಕಾನಂದರು ಅದೇ ಬಂಡೆಯ ಮೇಲೆ ಧ್ಯಾನ ಮಾಡಿದ್ದರಿಂದ ಅವರ ಜೀವನದಲ್ಲಿ ಇದು ಮಹತ್ತರವಾದ ಮಹತ್ವವನ್ನು ಹೊಂದಿದೆ. ವಿವೇಕಾನಂದರು ದೇಶ-ವಿದೇಶಗಳನ್ನು ಸುತ್ತಿ, ಕೊನೆಗೆ ಇಲ್ಲಿಗೆ ಬಂದದ್ದು ಮೂರು ದಿನಗಳ ಕಾಲ ಧ್ಯಾನ ಮಾಡಿದರು. ಇನ್ನು ಹಿಂದೂ ಪುರಾಣಗಳ ಪ್ರಕಾರ, ಪಾರ್ವತಿ ದೇವಿಯು ಶಿವನಿಗಾಗಿ ಈ ಸ್ಥಳದಲ್ಲಿ ಧ್ಯಾನ ಮಾಡುತ್ತಾಳೆ ಎಂದು ಹೇಳಲಾಗಿದೆ. ಕನ್ಯಾಕುಮಾರಿಯು ಭಾರತದ ದಕ್ಷಿಣದ ತುದಿಯಲ್ಲಿದೆ, ಇಲ್ಲಿ ದೇಶದ ಪೂರ್ವ ಮತ್ತು ಪಶ್ಚಿಮ ಕರಾವಳಿಗಳು ಸಂಗಮಿಸುತ್ತವೆ. ಇದು ಹಿಂದೂ ಮಹಾಸಾಗರ, ಬಂಗಾಳಕೊಲ್ಲಿ ಮತ್ತು ಅರಬ್ಬಿ ಸಮುದ್ರವನ್ನು ಛೇದಿಸುವ ಬಿಂದುವಾಗಿದೆ.