Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಎಎ ಹಿಂಪಡೆಯುವ ಮಾತೇ ಇಲ್ಲ: ಅಮಿತ್ ಶಾ

ಯಾವುದೇ ಸಂದರ್ಭದಲ್ಲೂ ಸಿಎಎಯನ್ನು ಹಿಂಪಡೆಯುವ ಮಾತೇ ಇಲ್ಲ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ವಿರೋಧ ಪಕ್ಷಗಳು ಸಿಎಎ ವಿರುದ್ಧ ನಿರಂತರವಾಗಿ ಧ್ವನಿ ಎತ್ತುತ್ತಿವೆ. ಪ್ರತಿಪಕ್ಷಗಳಿಗೆ ಬೇರೆ ಕೆಲಸವಿಲ್ಲ, ನಾವು ಸಿಎಎಯನ್ನು ಹಿಂಪಡೆಯುವ ಮಾತೇ ಇಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಸಿಎಎ ಹಿಂಪಡೆಯುವ ಮಾತೇ ಇಲ್ಲ: ಅಮಿತ್ ಶಾ
ಅಮಿತ್ ಶಾImage Credit source: NDTV
Follow us
ನಯನಾ ರಾಜೀವ್
|

Updated on: Mar 14, 2024 | 9:36 AM

ಕೇಂದ್ರ ಸರ್ಕಾರವು ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ಇಡೀ ದೇಶದಲ್ಲಿ ಜಾರಿಗೆ ತಂದಿದೆ. ಆದರೆ ವಿರೋಧ ಪಕ್ಷಗಳು ಸಿಎಎ ವಿರುದ್ಧ ನಿರಂತರವಾಗಿ ಧ್ವನಿ ಎತ್ತುತ್ತಿವೆ. ಪ್ರತಿಪಕ್ಷಗಳಿಗೆ ಬೇರೆ ಕೆಲಸವಿಲ್ಲ, ನಾವು ಸಿಎಎಯನ್ನು ಹಿಂಪಡೆಯುವ ಮಾತೇ ಇಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಸಿಎಎ ಮೂಲಕ ಮತಗಳನ್ನು ಪಡೆಯುವ ತಂತ್ರವನ್ನು ಬಿಜೆಪಿ ಮಾಡುತ್ತಿದೆ ಎನ್ನುವ ವಿರೋಧಪಕ್ಷಗಳ ಮಾತಿಗೆ ಶಾ ತಿರುಗೇಟು ನೀಡಿದ್ದು ಈ ರೀತಿ ಹೇಳುವುದು ಅವರ ಇತಿಹಾಸ, ಆದರೆ ಸಿಎಎ ಜಾರಿಗೆ ತಂದಿರುವುದು ಮೋದಿ ಇತಿಹಾಸ, ಮೋದಿಯವರ ಪ್ರತಿ ಭರವಸೆಯೂ ಈಡೇರಿದೆ ಎಂದಿದ್ದಾರೆ.

ಸರ್ಜಿಕಲ್ ಸ್ಟ್ರೈಕ್ ಹಾಗೂ ಹಾಗೂ ವೈಮಾನಿಕ ದಾಳಿಯಲ್ಲೂ ರಾಜಕೀಯ ಹುಡುಕಿದ್ದಾರೆ, ಭಯೋತ್ಪಾದನೆ ವಿರುದ್ಧ ಕ್ರಮ ಕೈಗೊಳ್ಳಲೇಬೇಕಲ್ಲವೇ?, ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದು ಪಡಿಸಿದ ಬಳಿಕವೂ ಇದನ್ನು ರಾಜಕೀಯದೊಂದಿಗೆ ಜೋಡಿಸಲಾಗಿತ್ತು, ಆದರೆ ಇದರ ಬಗ್ಗೆ 1950ರಿಂದಲೂ ಹೇಳಲಾಗುತ್ತಿದೆ.

ಸಿಎಎಯನ್ನು ಪಶ್ಚಿಮ ಬಂಗಾಳದಲ್ಲಿ ಜಾರಿ ಮಾಡುವುದಿಲ್ಲ ಎನ್ನುವ ಮಮತಾ ಬ್ಯಾನರ್ಜಿ ಹೇಳಿಕೆ ಕುರಿತು ಮಾತನಾಡಿದ ಶಾ, ಬಂಗಾಳದಲ್ಲೂ ಬಿಜೆಪಿ ಅಧಿಕಾರಕ್ಕೆ ಬಂದು ಒಳನುಸುಳುವಿಕೆಯನ್ನು ನಿಲ್ಲಿಸುವ ಸಮಯ ದೂರವಿಲ್ಲ ಎಂದು ಹೇಳಿದರು.

ಮತ್ತಷ್ಟು ಓದಿ: ಮೋದಿ ಸರ್ಕಾರ ಸಿಎಎ ಜಾರಿ ಮಾಡಲಿದೆ, ಅದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ: ಅಮಿತ್ ಶಾ

ನಮ್ಮ ದೇಶದಲ್ಲಿ ಭಾರತೀಯ ಪೌರತ್ವವನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಸಾರ್ವಭೌಮ ಹಕ್ಕು, ನಾವು ಇದರಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದರು.

ಅಲ್ಪಸಂಖ್ಯಾತರು ಅಥವಾ ಯಾವುದೇ ವ್ಯಕ್ತಿ ಭಯಪಡುವ ಅಗತ್ಯವಿಲ್ಲ ಏಕೆಂದರೆ ಯಾರೊಬ್ಬರ ಪೌರತ್ವವನ್ನು ಕಸಿದುಕೊಳ್ಳಲು ಸಿಎಎಯಲ್ಲಿ ಯಾವುದೇ ಅವಕಾಶವಿಲ್ಲ.

ಸಿಎಎ ಹಿಂದೂಗಳು, ಬೌದ್ಧರು, ಜೈನರು, ಸಿಖ್ಖರು, ಕ್ರಿಶ್ಚಿಯನ್ನರು ಮತ್ತು ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಪಾರ್ಸಿ ನಿರಾಶ್ರಿತರಿಗೆ ಹಕ್ಕು ಮತ್ತು ಪೌರತ್ವವನ್ನು ನೀಡಲು ಮಾತ್ರ.

ಸಿಎಎ ಎಂದರೇನು?

ಪೌರತ್ವ ತಿದ್ದುಪಡಿ ಮಸೂದೆ ಭಾರತದ ನೆರೆಯ ದೇಶಗಳಾದ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿ ಧಾರ್ಮಿಕವಾಗಿ ದೌರ್ಜನ್ಯಕ್ಕೊಳಗಾಗಿ 2014ರ ಡಿಸೆಂಬರ್ 31ಕ್ಕೆ ಮುಂಚೆ ಭಾರತಕ್ಕೆ ವಲಸೆ ಅಥವಾ ನಿರಾಶ್ರಿತರಾಗಿ ಬಂದ ಆರು ಅಲ್ಪಸಂಖ್ಯಾತ ಸಮುದಾಯಗಳ ಜನರಿಗೆ ಭಾರತೀಯ ಪೌರತ್ವ ಹೊಂದುವ ಅವಕಾಶ ಕೊಡುತ್ತದೆ. ಆ ಮೂರು ಮುಸ್ಲಿಮ್ ದೇಶಗಳಲ್ಲಿನ ಹಿಂದೂ, ಕ್ರೈಸ್ತ, ಸಿಖ್, ಜೈನ, ಬೌದ್ಧ ಮತ್ತು ಪಾರ್ಸಿ ಸಮುದಾಯಗಳ ಜನರಿಗೆ ಈ ಅವಕಾಶ ಕೊಡಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ