AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಲಿ ದಾಳಿಯಿಂದ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದ ಉತ್ತರಾಖಂಡದ ಬಾಲಕ

ಉತ್ತರಾಖಂಡದ ಬಾಲಕ ಹುಲಿ ದಾಳಿಯಿಂದ ಪಾರಾಗಿದ್ದಾರೆ, ಇದು 2023ರ ನವೆಂಬರ್​ನಲ್ಲಿ ನಡೆದ ಘಟನೆ, ಇದೀಗ ಬಾಲಕ ಚೇತರಿಸಿಕೊಳ್ಳುತ್ತಿದ್ದು, ಇನ್ನೂ ಅನೇಕ ಶಸ್ತ್ರಚಿಕಿತ್ಸೆಗಳು ಬಾಕಿ ಇವೆ ಎಂದು ವೈದ್ಯರು ತಿಳಿಸಿದ್ದಾರೆ.

ಹುಲಿ ದಾಳಿಯಿಂದ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದ ಉತ್ತರಾಖಂಡದ ಬಾಲಕ
ಅಂಕಿತ್Image Credit source: India Today
ನಯನಾ ರಾಜೀವ್
|

Updated on: Mar 14, 2024 | 8:36 AM

Share

ಇನ್ನೇನು ಹುಲಿ ಬಾಯಿಗೆ ಸಿಕ್ಕಿ ಜೀವ ಬಿಡುತ್ತಾನೆ ಅನ್ನುವಷ್ಟರಲ್ಲಿ ಹೇಗೋ ದಾಳಿಯಿಂದ ಬಾಲಕ ಪಾರಾಗಿದ್ದ. ಈ ಘಟನೆ ಉತ್ತರಾಖಂಡದಲ್ಲಿ ನಡೆದಿದೆ, 17 ವರ್ಷದ ಬಾಲಕ ಕಾಲೇಜಿನಿಂದ ಮನೆಗೆ ಹೋಗುತ್ತಿರುವಾಗ ಹುಲಿ ದಾಳಿ ನಡೆಸಿದೆ. ರಾಮನಗರ ಪಟ್ಟಣದ ನಿವಾಸಿ ಅಂಕಿತ್ ಅವರು ಮಾರಣಾಂತಿಕ ದಾಳಿಯ ನಂತರ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ, ಈಗ ಎಲ್ಲರಂತೆ ಜೀವನ ನಡೆಸುತ್ತಿದ್ದಾನೆ.

ನವೆಂಬರ್ 2023 ರಲ್ಲಿ ದೊಡ್ಡ ಬೆಕ್ಕು ಅವನ ಮೇಲೆ ದಾಳಿ ಮಾಡಿದ ನಂತರ ಬಾಲಕ ತೀವ್ರವಾಗಿ ಗಾಯಗೊಂಡಿದ್ದ. ನ್ನ ಸ್ನೇಹಿತರೊಂದಿಗೆ ಶಾಲೆಯಿಂದ ಹಿಂತಿರುಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಮರದ ಮೇಲೆ ಕುಳಿತಿದ್ದ ಹುಲಿ ಹಿಂದಿನಿಂದ ದಾಳಿ ಮಾಡಿ ಆತನ ಕತ್ತು ಹಿಡಿದು ತಲೆ ಕಚ್ಚಿತ್ತು.

ದಾಳಿಯ ಸಮಯದಲ್ಲಿ ಹುಲಿ ತನ್ನ ಹಿಡಿತವನ್ನು ಕಳೆದುಕೊಂಡಿದ್ದರಿಂದ, ಅಂಕಿತ್ ತಕ್ಷಣವೇ ತನ್ನ ಬಲಗೈಯನ್ನು ಮುಂದೆ ಒಡ್ಡಿ ಹುಲಿಯ ನಾಲಿಗೆಯನ್ನು ಹಿಡಿದೆಳೆದಿದ್ದಾನೆ. ಆಗ ಹುಲಿ ಆತನನ್ನು ಬಿಟ್ಟಿತ್ತು, ಆತ ಕೂಡಲೇ ಅಲ್ಲಿಂದ ಓಡಿ ಜೀವ ಉಳಿಸಿಕೊಂಡಿದ್ದ. ಆತನ ಜತೆಗಿದ್ದ ಸ್ನೇಹಿತರ ಪ್ರಾಣವೂ ಉಳಿದಿತ್ತು. ಆದರೆ ಆತನ ಕುತ್ತಿಗೆ, ನೆತ್ತಿ ಹಾಗೂ ಬಲಗೈಗೆ ತೀವ್ರ ಗಾಯಗಳಾಗಿತ್ತು.

ತಕ್ಷಣ ಸ್ನೇಹಿತರು ಆತನಿಗೆ ಪ್ರಥಮ ಚಿಕಿತ್ಸೆ ಕೊಡಿಸಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದರು. ಆತನ ಸ್ಥಿತಿ ತುಂಬಾ ಗಂಭೀರವಾಗಿತ್ತು, ಹುಲಿಯ ಬಾಯಿಂದ ತಪ್ಪಿಸಿಕೊಂಡು ಬಂದ ಬಾಲಕನ ಬಗ್ಗೆ ವೈದ್ಯರು ಕೂಡ ಇದು ಹೇಗೆ ಸಾಧ್ಯವಾಯಿತು ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದರು.

ಮತ್ತಷ್ಟು ಓದಿ: ಚಾಮರಾಜನಗರ: ಕುರಿಗಾಹಿಗಳ ಮೇಲೆ ಹುಲಿ ದಾಳಿ: ಇಬ್ಬರಿಗೆ ಗಾಯ

ಆಸ್ಪತ್ರೆಗೆ ದಾಖಲಾಗುವ ವೇಳೆ ಸಾಕಷ್ಟು ರಕ್ತ ನಷ್ಟವಾಗಿತ್ತು. ಬಲ ಕಿವಿ ತೂಗಾಡುತ್ತಿತ್ತು, ತಲೆಗೂ ಗಂಭೀರ ಗಾಯವಾಗಿ ಮಾಂಸ ಹೊರಬಂದಿತ್ತು. ಮುಖವನ್ನು ಪರಚಿತ್ತು, ಬಲಗೈ ಹೆಬ್ಬೆರೆಳು ಭಾಗಶಃ ಕತ್ತರಿಸಿದಂತಾಗಿತ್ತು.

ಅವರ ಮುಖ ಹಾಗೂ ದೇಹವನ್ನು ಮೊದಲಿನಂತೆ ಮಾಡಲು ಇನ್ನೂ ಕೆಲವು ಶಸ್ತ್ರ ಚಿಕಿತ್ಸೆಗಳು ಬೇಕಾಗುತ್ತವೆ ಎಂದು ವೈದ್ಯರು ಹೇಳಿದ್ದಾರೆ. ಅವರ ತಲೆ ಹಾಗೂ ಕೈಯನ್ನು ಸರಿಪಡಿಸಲು ತಿಂಗಳುಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿದ್ದೇವೆ ಎಂದು ವೈದ್ಯರು ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ
ಮೈಸೂರು ಅರಮನೆ ಬಳಿ ವ್ಯಾಪಾರಿಗಳ ಮೇಲೆ ನಿಗಾ ಇಡಲಾಗುತ್ತಾ?
ಮೈಸೂರು ಅರಮನೆ ಬಳಿ ವ್ಯಾಪಾರಿಗಳ ಮೇಲೆ ನಿಗಾ ಇಡಲಾಗುತ್ತಾ?