ಬಿಹಾರದಲ್ಲಿ ಶಹಾಬುದ್ದೀನ್ ಸಿದ್ಧಾಂತವನ್ನು ಸೋಲಿಸೋಣ; ಅಮಿತ್ ಶಾ ವಾಗ್ದಾಳಿ

ಬಿಹಾರದಲ್ಲಿ ಶಹಾಬುದ್ದೀನ್ ಪುತ್ರನಿಗೆ ಟಿಕೆಟ್ ನೀಡಿದ್ದಕ್ಕಾಗಿ ಆರ್‌ಜೆಡಿಯನ್ನು ಅಮಿತ್ ಶಾ ಟೀಕಿಸಿದ್ದಾರೆ. ಬಿಹಾರದ ಸಿವಾನ್‌ನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಅಮಿತ್ ಶಾ ಮಾತನಾಡಿದ್ದು, 'ನಾವು ಶಹಾಬುದ್ದೀನ್ ಅವರ ಸಿದ್ಧಾಂತವನ್ನು ಸೋಲಿಸಬೇಕಾಗಿದೆ' ಎಂದಿದ್ದಾರೆ. ಬಿಹಾರ ಮತ್ತು ದೇಶದ ಇತರ ಭಾಗಗಳಲ್ಲಿ ಒಬ್ಬ ನುಸುಳುಕೋರನನ್ನು ಉಳಿಯಲು ಬಿಡುವುದಿಲ್ಲ ಎಂದು ಅವರು ಹೇಳಿದ್ದಾರೆ.

ಬಿಹಾರದಲ್ಲಿ ಶಹಾಬುದ್ದೀನ್ ಸಿದ್ಧಾಂತವನ್ನು ಸೋಲಿಸೋಣ; ಅಮಿತ್ ಶಾ ವಾಗ್ದಾಳಿ
Amit Shah In Bihar

Updated on: Oct 24, 2025 | 8:42 PM

ಪಾಟ್ನಾ, ಅಕ್ಟೋಬರ್ 24: ಬಿಹಾರದ ಸಿವಾನ್‌ನಲ್ಲಿ ಇಂದು ನಡೆದ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಅಮಿತ್ ಶಾ (Amit Shah), ಬಿಹಾರದ ಮತದಾರರು ದರೋಡೆಕೋರ ರಾಜಕಾರಣಿ ಮೊಹಮ್ಮದ್ ಶಹಾಬುದ್ದೀನ್ ಅವರ ಸಿದ್ಧಾಂತವನ್ನು ಸೋಲಿಸಬೇಕಾಗಿದೆ ಎಂದು ಹೇಳಿದ್ದಾರೆ. ವಿಧಾನಸಭೆ ಚುನಾವಣೆಗೆ (Bihar Assembly Elections) ಮುಂಚಿತವಾಗಿ ಬಿಹಾರದ ವಿರೋಧ ಪಕ್ಷ ಇಂಡಿಯ ಬಣವು ಸಂಪೂರ್ಣವಾಗಿ ಛಿದ್ರಗೊಂಡಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

20 ವರ್ಷಗಳ ಕಾಲ ಸುಮಾರು 75 ಪ್ರಕರಣಗಳು, 2 ಜೈಲು ಶಿಕ್ಷೆಗಳು, ತ್ರಿವಳಿ ಕೊಲೆಗಳು, ಎಸ್‌ಪಿ ಮೇಲೆ ಹಲ್ಲೆ ನಡೆಸಿದ ಶಹಾಬುದ್ದೀನ್ ಬುಸಿನೆಸ್ ಮಾಲೀಕರ ಪುತ್ರರ ಚರ್ಮ ಸುಲಿಯುವವರೆಗೂ ಆಸಿಡ್‌ನಿಂದ ಸ್ನಾನ ಮಾಡಿಸಿದ್ದ. ಸಿವಾನ್‌ನ ಧೈರ್ಯಶಾಲಿ ಜನರು ಶಹಾಬುದ್ದೀನ್ ಮುಂದೆ ಎಂದಿಗೂ ಶರಣಾಗಲಿಲ್ಲ. ಅವರ ಮಗನಿಗೆ ರಘುನಾಥಪುರದಿಂದ ಲಾಲು ಪ್ರಸಾದ್ ಯಾದವ್ ಅವರೇ ಟಿಕೆಟ್ ನೀಡಿದ್ದಾರೆ. ಈಗ, ನಿತೀಶ್ ಕುಮಾರ್ ಮತ್ತು ನರೇಂದ್ರ ಮೋದಿ ಅವರ ಆಳ್ವಿಕೆಯಲ್ಲಿ 100 ಶಹಾಬುದ್ದೀನ್ ಬಂದರೂ ಯಾರೂ ನಿಮಗೆ ಯಾವುದೇ ಹಾನಿ ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ: ಘಟಬಂಧನ ಅಲ್ಲ, ಲಠಬಂಧನ; ಬಿಹಾರದಲ್ಲಿ ಆರ್‌ಜೆಡಿ-ಕಾಂಗ್ರೆಸ್ ಮೈತ್ರಿಗೆ ಪ್ರಧಾನಿ ಮೋದಿ ಲೇವಡಿ

ಬಿಹಾರದ ರ್ಯಾಲಿಯಲ್ಲಿ ಬಿಹಾರ ಮತ್ತು ದೇಶದ ಇತರ ಭಾಗಗಳಲ್ಲಿ ಒಬ್ಬ ನುಸುಳುಕೋರನನ್ನು ಉಳಿಯಲು ಬಿಡುವುದಿಲ್ಲ ಎಂದು ಅವರು ಹೇಳಿದ್ದಾರೆ. “ಸಿವಾನ್‌ನಲ್ಲಿ ನುಸುಳುಕೋರರಿಗೆ ವಾಸಿಸಲು ಅವಕಾಶ ನೀಡಬೇಕು ಎಂದು ರಾಹುಲ್ ಗಾಂಧಿ ಹೇಳುತ್ತಾರೆ. ನೀವು ಎನ್‌ಡಿಎಗೆ ಮತ ಹಾಕಿದರೆ ದೇಶದಿಂದ ಪ್ರತಿಯೊಬ್ಬ ನುಸುಳುಕೋರರನ್ನು ನಾವು ತೆಗೆದುಹಾಕುತ್ತೇವೆ ಎಂದು ನಾನು ನಿಮಗೆಲ್ಲರಿಗೂ ಭರವಸೆ ನೀಡುತ್ತೇನೆ” ಎಂದು ಅಮಿತ್ ಶಾ ಹೇಳಿದ್ದಾರೆ.


ನವೆಂಬರ್ 14ರಂದು ಬಿಹಾರ ನಿಜವಾದ ದೀಪಾವಳಿ ಆಚರಿಸಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. “ನಿತೀಶ್ ಕುಮಾರ್ ಜಂಗಲ್ ರಾಜ್ ಅನ್ನು ಕೊನೆಗೊಳಿಸಿದ್ದಾರೆ. ಅವರು ಇಡೀ ಬಿಹಾರವನ್ನು ಜಂಗಲ್ ರಾಜ್​ನಿಂದ ಮುಕ್ತಗೊಳಿಸಿದ್ದಾರೆ. 20 ವರ್ಷಗಳ ನಂತರವೂ ನಾವು ನಿತೀಶ್ ಕುಮಾರ್ ಅವರ ನೇತೃತ್ವದಲ್ಲಿ ಈ ಚುನಾವಣೆಗಳಲ್ಲಿ ಸ್ಪರ್ಧಿಸುತ್ತಿದ್ದೇವೆ” ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ: ಬಿಹಾರ ಚುನಾವಣೆ; ಮಹಾಘಟಬಂಧನದ ಸಿಎಂ ಅಭ್ಯರ್ಥಿಯಾಗಿ ತೇಜಸ್ವಿ ಯಾದವ್ ಹೆಸರು ಘೋಷಣೆ

ಸಿವಾನ್‌ನ ಈ ಭೂಮಿ 20 ವರ್ಷಗಳಿಂದ ಲಾಲು ಮತ್ತು ರಾಬ್ರಿ ಸರ್ಕಾರದ ‘ಜಂಗಲ್ ರಾಜ್’ ಅನ್ನು ಸಹಿಸಿಕೊಂಡಿರುವುದರಿಂದ ಸಿವಾನ್‌ನ ಜನರಿಗೆ ವಂದಿಸಲು ಬಯಸುತ್ತೇನೆ ಎಂದು ಅಮಿತ್ ಶಾ ಹೇಳಿದ್ದಾರೆ. ಸಿವಾನ್ ಅರಾಜಕತೆ, ಕೊಲೆ ಮತ್ತು ಇತರ ಅಪರಾಧಗಳನ್ನು ಸಹಿಸಿಕೊಂಡಿದ್ದಾರೆ, ಆದರೆ ಇಲ್ಲಿನ ಜನರು ಜಂಗಲ್ ರಾಜ್ ವಿರುದ್ಧ ತಲೆಬಾಗಲಿಲ್ಲ” ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:41 pm, Fri, 24 October 25