WITT: ಇಡಿ, ಸಿಬಿಐ ದಾಳಿಗಳನ್ನು ಪ್ರಶ್ನಿಸುತ್ತಿರುವವರಿಗೆ ಖಡಕ್ ಉತ್ತರ ಕೊಟ್ಟ ಶಾ!
ದೇಶದ ನಂಬರ್ ಒನ್ ನ್ಯೂಸ್ ನೆಟ್ವರ್ಕ್ ಟಿವಿ9 ನಡೆಸಿದ ಮೂರು ದಿನಗಳ ವಾಟ್ ಇಂಡಿಯಾ ಥಿಂಕ್ಸ್ ಟುಡೇ ಸಮಾವೇಶದ ಕೊನೆ ದಿನಾದ ಇಂದು (ಫೆಬ್ರವರಿ 27) ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗಿವಹಿಸಿದ್ದು, ಟಿವಿ9 ಜಾಗತಿಕ ಸಮಾವೇಶವನ್ನ ಅಮಿತ್ ಶಾ ಶ್ಲಾಘಿಸಿದರು. ಅಲ್ಲದೇ ಇದೇ ವೇಳೆ ಭ್ರಷ್ಟ ರಾಜಕಾರಣಿಗಳ ಕುರಿತು ಮಾತನಾಡಿದರು.
ನವದೆಹಲಿ, (ಫೆಬ್ರವರಿ 27): ಟಿವಿ9 ನೆಟ್‌ವರ್ಕ್‌ನ ವಾಟ್ ಇಂಡಿಯಾ ಥಿಂಕ್ಸ್ ಟುಡೇ (WITT) ಕಾರ್ಯಕ್ರಮದ ಕೊನೆ ದಿನವಾದ ಇಂದು(ಫೆ.27) ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಭಾಗವಹಿಸಿದರು. ವೇಳೆ ಭ್ರಷ್ಟ ರಾಜಕಾರಣಿಗಳ ವಿರುದ್ಧ ಕಠಿಣ ಕ್ರಮದ ಕುರಿತು ಮಾತನಾಡಿ ಅಮಿತ್ ಶಾ, ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದ ಹಗರಣಗಳನ್ನು ಪ್ರಸ್ತಾಪಿಸಿ ವಾಗ್ದಾಳಿ ನಡೆಸಿದರು. ಅಲ್ಲದೇ ಕೇಂದ್ರ ತನಿಖಾ ಸಂಸ್ಥೆಗಳ ಬಗ್ಗೆ ಪ್ರಶ್ನಿಸುತ್ತಿರುವ ಕಾಂಗ್ರೆಸ್ಗೆ ಖಡಕ್ ಉತ್ತರ ನೀಡಿದ್ದಾರೆ.
ಇಡಿ ಮತ್ತು ಸಿಬಿಐನಂತಹ ಕೇಂದ್ರೀಯ ತನಿಖಾ ಸಂಸ್ಥೆಗಳ ಕ್ರಮಗಳ ಬಗ್ಗೆ ನಿರಂತರವಾಗಿ ಪ್ರತಿಪಕ್ಷಗಳು ಪ್ರಶ್ನಿಸುತ್ತಿರುವ ಬಗ್ಗೆ ಉತ್ತರಿಸಿದ ಶಾ, ಕೇಂದ್ರೀಯ ತನಿಖಾ ಸಂಸ್ಥೆಗಳು ಯಾರ ವಿರುದ್ಧ ಕ್ರಮ ಕೈಗೊಳ್ಳುತ್ತಿವೆಯೋ ಅವರಲ್ಲಿ ಶೇಕಡಾ 5 ರಷ್ಟು ಮಾತ್ರ. ಉಳಿದ ಕಪ್ಪುಹಣ ಹೊಂದಿರುವವರ ಬಗ್ಗೆ ಮಾತನಾಡಿದರೆ ಅವರ ಸಂಖ್ಯೆ 95 ಇದೆ ಎಂದು ಟಾಂಗ್ ಕೊಟ್ಟರು. ಈ ಮೂಲಕ ಸಿಬಿಐ, ಇಡಿ ದಾಳಿ ಬಗ್ಗೆ ಸಮರ್ಥಿಸಿಕೊಂಡರು.
ದೇಶದಲ್ಲಿ ಯುಪಿಎ ಅಧಿಕಾರದಲ್ಲಿದ್ದಾಗ ಸರ್ಕಾರದೊಳಗೆ ಹಲವು ದೊಡ್ಡ ಹಗರಣಗಳು ನಡೆದಿದ್ದವು. ಯುಪಿಎ ಸರಕಾರdಲ್ಲಿ ಕಾಮನ್‌ವೆಲ್ತ್, 2ಜಿಯಿಂದ ಕಲ್ಲಿದ್ದಲು ಹಗರಣದವರೆಗೆ ಸಂಪೂರ್ಣವಾಗಿ ಹಗರಣಗಳ ಸರಕಾರವಾಗಿತ್ತು. ಆ ಬಗ್ಗೆ ಈಗ ಕೇಂದ್ರ ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿವೆ ಎಂದು ಹೇಳಿದರು.
ಇನ್ನು ಬಿಜೆಪಿಗೆ ಸೇರ್ಪಡೆಯಾದ ನಾಯಕರ ವಿರುದ್ಧದ ಪ್ರಕರಣಗಳನ್ನು ವಾಪಸ್ ಪಡೆಯಲಾಗಿದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅಮಿತ್ ಶಾ, ಬಿಜೆಪಿಗೆ ಸೇರ್ಪಡೆಗೊಂಡಿದ್ದರೆ ಅವರ ವಿರುದ್ಧದ ಯಾವುದೇ ಪ್ರಕರಣಗಳನ್ನು ವಾಪಸ್ ಪಡೆದುಕೊಂಡಿಲ್ಲ.ಯಾವುದೇ ಸಂದರ್ಭದಲ್ಲೂ ಕೇಸ್ಗಳನ್ನು ಹಿಂಪಡೆಯುವುದಿಲ್ಲ. ಕೇಂದ್ರೀಯ ಸಂಸ್ಥೆಗಳಿಂದ ತನಿಖೆ ನಡೆಯುತ್ತಿರುತ್ತವೆ ಎಂದು ಸ್ಪಷ್ಟಪಡಿಸಿದರು.
ಇನ್ನು ಕಾಂಗ್ರೆಸ್ ಬರೀ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತಿರುವ ಕುರಿತ ಮಾತನಾಡಿದ ಅಮಿತ್ ಶಾ, ಈ ಹಿಂದೆ ಇಂದಿರಾ ಗಾಂಧಿಯವರ ಸರ್ಕಾರದ ಅವಧಿಯಲ್ಲಿ ಹೇರಲಾದ ತುರ್ತು ಪರಿಸ್ಥಿತಿಯನ್ನು ನೆನಪಿಸಿ, ಕಾಂಗ್ರೆಸ್ ಪಕ್ಷವು ಪ್ರಜಾಪ್ರಭುತ್ವದ ಬಗ್ಗೆ ಮಾತನಾಡಬಾರದು. ಮಾತನಾಡುವ ನೈತಿಕತೆಯೂ ಇಲ್ಲ ಎಂದರು.
ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:38 pm, Tue, 27 February 24