Amit Shah: ಉದ್ಧವ್ ಠಾಕ್ರೆ ಬಿಜೆಪಿಗೆ ದ್ರೋಹ ಬಗೆದಿದ್ದಾರೆ, ಅವರಿಗೆ ಪಾಠ ಕಲಿಸಬೇಕು: ಶಾ

| Updated By: ಅಕ್ಷಯ್​ ಪಲ್ಲಮಜಲು​​

Updated on: Sep 05, 2022 | 4:57 PM

ರಾಜಕೀಯದಲ್ಲಿ ಏನು ಬೇಕಾದರೂ ಸಹಿಸಿಕೊಳ್ಳಬಹುದು ಆದರೆ ದ್ರೋಹವಲ್ಲ ಎಂದು ಸಭೆಯಲ್ಲಿ ಶಾ ಹೇಳಿರುವುದಾಗಿ ಮೂಲಗಳು ತಿಳಿಸಿವೆ.

Amit Shah: ಉದ್ಧವ್ ಠಾಕ್ರೆ  ಬಿಜೆಪಿಗೆ ದ್ರೋಹ ಬಗೆದಿದ್ದಾರೆ, ಅವರಿಗೆ ಪಾಠ ಕಲಿಸಬೇಕು: ಶಾ
Amit Shah
Follow us on

ಮುಂಬೈ: ಉದ್ಧವ್ ಠಾಕ್ರೆ ಅವರು ಬಿಜೆಪಿಗೆ ದ್ರೋಹ ಬಗೆದಿದ್ದಾರೆ, ಅವರಿಗೆ ಪಾಠ ಕಲಿಸಬೇಕು ಎಂದು ಕೇಂದ್ರ ಗೃಹ ಸಚಿವ ಮತ್ತು ಬಿಜೆಪಿಯ ಮುಖ್ಯ ತಂತ್ರಜ್ಞ ಅಮಿತ್ ಶಾ ಮುಂಬೈನಲ್ಲಿ ಇಂದು ನಡೆದ ಪಕ್ಷದ ನಾಯಕರ ಸಭೆಯಲ್ಲಿ ಹೇಳಿದ್ದಾರೆ. ನಾವು ರಾಜಕೀಯದಲ್ಲಿ ಏನು ಬೇಕಾದರೂ ಸಹಿಸಿಕೊಳ್ಳಬಹುದು ಆದರೆ ದ್ರೋಹವಲ್ಲ ಎಂದು ಸಭೆಯಲ್ಲಿ ಶಾ ಹೇಳಿರುವುದಾಗಿ ಮೂಲಗಳು ತಿಳಿಸಿವೆ. ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅವರ ಪಕ್ಷದಲ್ಲಿನ ಒಡಕು ಮತ್ತು ನಂತರದ ಘಟನೆಗಳಿಗೆ ಕಾರಣ ಎಂದು ಶಾ ಆರೋಪಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅವರ ದುರಾಸೆ, ಏಕನಾಥ್ ಶಿಂಧೆಯವರ ಬಂಡಾಯ ಮತ್ತು ನಂತರದ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರವನ್ನು ಪತನಗೊಳಿಸಿದ ಶಾ ಹೇಳಿದರು.

ಉದ್ಧವ್ ಠಾಕ್ರೆ ಅವರು ಬಿಜೆಪಿಗೆ ದ್ರೋಹ ಬಗೆದಿದ್ದಾರೆ ಮಾತ್ರವಲ್ಲದೆ ಸಿದ್ಧಾಂತಕ್ಕೆ ದ್ರೋಹ ಮಾಡಿದ್ದಾರೆ ಮತ್ತು ಮಹಾರಾಷ್ಟ್ರದ ಜನರ ಜನಾದೇಶವನ್ನು ಅವಮಾನಿಸಿದ್ದಾರೆ ಎಂದು ಹೇಳಿದರು. ಅವರ ಅಧಿಕಾರದ ದುರಾಸೆಯಿಂದ ಇಂದು ಅವರ ಪಕ್ಷ ಕುಗ್ಗಿದೆ, ಬಿಜೆಪಿ ಅಲ್ಲ ಎಂದು ಮೂಲಗಳು ಉಲ್ಲೇಖಿಸಿವೆ. ನಾವು ಉದ್ಧವ್ ಠಾಕ್ರೆ ಅವರಿಗೆ ಮುಖ್ಯಮಂತ್ರಿ ಹುದ್ದೆಯ ಭರವಸೆಯನ್ನು ಎಂದಿಗೂ ನೀಡಿಲ್ಲ ಎಂದು ಇಂದು ನಾನು ಮತ್ತೊಮ್ಮೆ ಹೇಳಲು ಬಯಸುತ್ತೇನೆ. ನಾವು ಬಹಿರಂಗವಾಗಿ ರಾಜಕೀಯ ಮಾಡುತ್ತಿದ್ದೇವೆ ಎಂದು ಶಾ ತಿಳಿಸಿದ್ದಾರೆ.

ರಾಜಕೀಯದಲ್ಲಿ ಮೋಸ ಮಾಡುವವರಿಗೆ ಶಿಕ್ಷೆಯಾಗಬೇಕು, ಮುಂಬೈನಲ್ಲಿ ಮುಂಬರುವ ನಾಗರಿಕ ಚುನಾವಣೆಯಲ್ಲಿ ಮಿಷನ್ 150 ಮೂಲಕ ಇದನ್ನು ಸಾಧಿಸಬಹುದು ಎಂದು ಹೇಳಿದ್ದಾರೆ. ಬೃಹನ್‌ ಮುಂಬೈ ಕಾರ್ಪೊರೇಷನ್ ದೇಶದ ಅತ್ಯಂತ ಶ್ರೀಮಂತ ನಾಗರಿಕ ಸಂಸ್ಥೆಯಾಗಿದ್ದು, ಇದನ್ನು ಬಿಜೆಪಿಯು ದೀರ್ಘಕಾಲದಿಂದ ನಿಯಂತ್ರಿಸಲು ಪ್ರಯತ್ನಿಸುತ್ತಿದೆ.

ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ಬಿಜೆಪಿ ಮತ್ತು ನಿಜವಾದ ಶಿವಸೇನೆ ಮೈತ್ರಿಕೂಟದ ಗುರಿ ಬಿಎಂಸಿ ಚುನಾವಣೆಯಲ್ಲಿ 150 ಸ್ಥಾನಗಳನ್ನು ಗೆಲ್ಲಬೇಕು. ಸಾರ್ವಜನಿಕರು ಮೋದಿ ನೇತೃತ್ವದ ಬಿಜೆಪಿ ಜೊತೆಗಿದ್ದಾರೆ. ಸಿದ್ಧಾಂತಕ್ಕೆ ದ್ರೋಹ ಬಗೆದ ಉದ್ಧವ್ ಠಾಕ್ರೆ ಅವರ ಪಕ್ಷದೊಂದಿಗೆ ಅಲ್ಲ ಎಂದು ಹೇಳಿದ್ದರು.

 

Published On - 4:57 pm, Mon, 5 September 22