ಸಾಮಾಜಿಕ ಮಾಧ್ಯಮಗಳಲ್ಲಿ ರಾಷ್ಟ್ರಧ್ವಜದ ಡಿಪಿ ಹಾಕುವಂತೆ ಅಮಿತ್ ಶಾ ಕರೆ
ಆಜಾದಿ ಕಾ ಅಮೃತ್ ಮಹೋತ್ಸವವನ್ನು ಆಚರಿಸಲು ಪ್ರಧಾನಿ ನರೇಂದ್ರ ಮೋದಿಯವರ ಘೋಷಣೆಯ ಮೇರೆಗೆ ನನ್ನ ಸಾಮಾಜಿಕ ಮಾಧ್ಯಮ ಖಾತೆಗಳ ಡಿಸ್ಪ್ಲೇ ಇಮೇಜ್ ತಿರಂಗ ಮಾಡಿದ್ದೇನೆ. ರಾಷ್ಟ್ರಧ್ವಜದ ಮೇಲಿನ ಪ್ರೀತಿ ಮತ್ತು ಗೌರವವನ್ನು ತೋರಿಸಲು...
ಕೇಂದ್ರ ಸಹಕಾರಿ ಮತ್ತು ಗೃಹ ಸಚಿವ ಅಮಿತ್ ಶಾ (Amit Shah) ಅವರು ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ತಿರಂಗ ಡಿಪಿ ಹಾಕುವಂತೆ ನೆಟ್ಟಿಗರಿಗೆ ಕರೆ ನೀಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅಮಿತ್ ಶಾ, ಆಜಾದಿ ಕಾ ಅಮೃತ್ ಮಹೋತ್ಸವವನ್ನು ಆಚರಿಸಲು ಪ್ರಧಾನಿ ನರೇಂದ್ರ ಮೋದಿಯವರ ಘೋಷಣೆಯ ಮೇರೆಗೆ ನನ್ನ ಸಾಮಾಜಿಕ ಮಾಧ್ಯಮ ಖಾತೆಗಳ ಡಿಸ್ಪ್ಲೇ ಇಮೇಜ್ ತಿರಂಗ ಮಾಡಿದ್ದೇನೆ. ರಾಷ್ಟ್ರಧ್ವಜದ ಮೇಲಿನ ಪ್ರೀತಿ ಮತ್ತು ಗೌರವವನ್ನು ತೋರಿಸಲು ನೀವು ನಿಮ್ಮ ಸಾಮಾಜಿಕ ಮಾಧ್ಯಮಗಳ ಡಿಪಿಯನ್ನು ತಿರಂಗ ಆಗಿ ಬದಲಾಯಿಸಿಕೊಳ್ಳಿ ಎಂದಿದ್ದಾರೆ. ಇಂದು ಆಗಸ್ಟ್ 2. ನಮ್ಮ ದೇಶದ ಇತಿಹಾಸದಲ್ಲಿ ವಿಶೇಷ ದಿನ. ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ಸಂಭ್ರಮದ ಹಿನ್ನೆಲೆಯಲ್ಲಿ ನಮ್ಮ ದೇಶದ ಪ್ರತಿ ಮನೆಯಲ್ಲಿಯೂ ತ್ರಿವರ್ಣ ಧ್ವಜ ಹಾರಿಸುವ ‘ಹರ್ ಘರ್ ತಿರಂಗಾ’ ಅಭಿಯಾನ ಆರಂಭವಾಗಿದೆ. ನಾನು ನನ್ನ ಸಾಮಾಜಿಕ ಮಾಧ್ಯಮದ ಡಿಸ್ಪ್ಲೇ ಇಮೇಜ್ ಬದಲಿಸಿದ್ದೇನೆ. ನೀವೂ ಹೀಗೆ ಮಾಡಬೇಕು ಎಂದು ಕೋರುತ್ತೇನೆ’ ಎಂದು ನರೇಂದ್ರ ಮೋದಿ ಅವರು ಫೇಸ್ಬುಕ್ ಪೋಸ್ಟ್ನಲ್ಲಿ ವಿನಂತಿಸಿದ್ದಾರೆ.
आजादी के अमृत महोत्सव को यादगार बनाने के @narendramodi जी के आह्वान पर आज अपनी सभी सोशल मीडिया प्रोफाइल फोटो पर तिरंगा लगाया।
राष्ट्रीय ध्वज के प्रति अपना प्यार और सम्मान दिखाने के लिए मैं सभी से अपने सोशल मीडिया अकाउंट्स की DP पर तिरंगा लगाने की अपील करता हूं। #HarGharTiranga
— Amit Shah (@AmitShah) August 2, 2022
ರಾಷ್ಟ್ರಧ್ವಜದ ವಿನ್ಯಾಸಕಾರ ಪಿಂಗಾಳಿ ವೆಂಕಯ್ಯ ಅವರ ಜನ್ಮದಿನವಿಂದು. ಕಳೆದ ವರ್ಷಕ್ಕೆ ನಮ್ಮ ರಾಷ್ಟ್ರ ಧ್ವಜಕ್ಕೆ 100 ವರ್ಷಗಳು ಪೂರೈಸಿತು. ಪಿಂಗಳಿ ವೆಂಕಯ್ಯ ಅವರು ಸ್ವತಂತ್ರ ಭಾರತಕ್ಕೆ ಧ್ವಜವನ್ನು ಕೊಟ್ಟು 100 ವರ್ಷಗಳು ಕಳೆದರೂ 19363 ನಂತರ ಅವರ ನೆನಪು ತ್ರಿವರ್ಣ ಧ್ವಜದ ಹಿಂದೆ ಅಡಗಿದೆ.
ಯಾರು ಪಿಂಗಾಳಿ ವೆಂಕಯ್ಯ? ಆಗಸ್ಟ್ 2, 1876 ರಂದು ಆಂಧ್ರಪ್ರದೇಶದ ಮಚಲಿಪಟ್ಟಣಂ ಬಳಿ ಜನಿಸಿದ ಪಿಂಗಳಿ ವೆಂಕಯ್ಯ ಅವರು ಉತ್ಸಾಹಭರಿತ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಗಾಂಧೀ ವಿಚಾರವಾದಿಯಾಗಿರುವ ಇವರು ಭಾಷಾಶಾಸ್ತ್ರಜ್ಞ, ಭೂವಿಜ್ಞಾನಿ ಮತ್ತು ಬರಹಗಾರರಾಗಿದ್ದರು. ಭಾತರಕ್ಕೊಂದು ಧ್ವಜ ನೀಡುವಲ್ಲಿ ಹಲವು ವರ್ಷಗಳನ್ನೇ ಮುಡಿಪಾಗಿಟ್ಟು 1916 ರಲ್ಲಿ ಭಾರತೀಯ ಧ್ವಜವನ್ನು ಮಾಡಬಹುದಾದ ಮೂವತ್ತು ವಿನ್ಯಾಸಗಳನ್ನು ನೀಡುವ ಪುಸ್ತಕವನ್ನು ಪ್ರಕಟಿಸಿದರು. 1921 ರ ಏಪ್ರಿಲ್ 1ರಂದು ವಿಜಯವಾಡದಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಭೆಯಲ್ಲಿ ಮಹಾತ್ಮ ಗಾಂಧಿಯವರು ವೆಂಕಯ್ಯ ಅವರ ಧ್ವಜದ ವಿನ್ಯಾಸವನ್ನು ಅನುಮೋದಿಸಿದರು. ಪಿಂಗಳಿ ಅವರು ಬ್ರಿಟಿಷ್ ಸೈನ್ಯದಲ್ಲಿದ್ದರು. ಬ್ರಿಟಿಷ್ ಸೇನೆಗೆ ಸೇರಿದ್ದ ಪಿಂಗಾಳಿ ಅವರು ಬ್ರಿಟನ್ ಪರ ಹೋರಾಡಲು ತಮ್ಮ 19ನೇ ವಯಸ್ಸಿಗೆ ದಕ್ಷಿಣ ಆಫ್ರಿಕಾಕ್ಕೆ ತೆರಳಿದ್ದರು. ಅಲ್ಲಿ ಬ್ರಿಟಿಷ್ ಸೇನಾಧಿಕಾರಿ ಬ್ರಿಟನ್ ಧ್ವಜಕ್ಕೆ ವಂದಿಸುವಂತೆ ಒತ್ತಾಯಿಸುತ್ತಿದ್ದ. ಇದು ಪಿಂಗಳಿ ಅವರಿಗೆ ಸಹಿಸಿಕೊಳ್ಳಲು ಸಾಧ್ಯವಾಗದೆ ದಕ್ಷಿಣ ಆಫ್ರಿಕ ಬಿಟ್ಟು ಭಾರತಕ್ಕೆ ವಾಪಸ್ಸಾದರು. ನಂತರ ಭಾರತಕ್ಕೊಂದು ಧ್ವಜ ರೂಪಿಸಬೇಕು ಎಂದು ತಮ್ಮ ಜೀವನವನ್ನು ಸ್ವಾತಂತ್ರ್ಯ ಹೋರಾಟದ ಜೊತೆಗೆ ಮುಡಿಪಾಗಿಟ್ಟರು.1963 ಜುಲೈ 4ರಂದು ಪಿಂಗಾಳಿ ಇಹಲೋಕ ತ್ಯಜಿಸಿದರು.