ಕೊಲ್ಕತ್ತಾ ಏರ್ಪೋರ್ಟ್ ಜಲಾವೃತ! ಚಂಡಮಾರುತಕ್ಕೆ 72 ಮಂದಿ ಬಲಿ
ಪಶ್ಚಿಮ ಬಂಗಾಳ: ಕೊಲ್ಕತ್ತಾದ ಈಶಾನ್ಯ ದಿಕ್ಕಿಗೆ 110ಕಿ.ಮಿ. ದೂರದಲ್ಲಿ ಕೇಂದ್ರೀಕೃತವಾಗಿರುವ ಅಂಫಾನ್ ಚಂಡಮಾರುತವು ಈಶಾನ್ಯ ದಿಕ್ಕಿನಲ್ಲಿ ಚಲಿಸುತ್ತಾ, ಭಾರತದ ಗಡಿಯನ್ನು ದಾಟಿ ಬಾಂಗ್ಲಾದತ್ತ ಸಾಗುತ್ತಿದೆ. ಈ ಮಧ್ಯೆ, ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಅಂಫಾನ್ ಆರ್ಭಟಕ್ಕೆ ಹತ್ತಾರು ಮಂದಿ ಸಾವನ್ನಪ್ಪಿದ್ದಾರೆ. ಕೊಲ್ಕತ್ತಾ ಏರ್ಪೋರ್ಟ್ಗೆ ನೀರು ನುಗ್ಗಿದ್ದು, ಸಂಪೂರ್ಣವಾಗಿ ಜಲಾವೃತವಾಗಿದೆ. ಅಂಫಾನ್ ಚಂಡಮಾರುತಕ್ಕೆ 72 ಬಲಿ: ಪಶ್ಚಿಮ ಬಂಗಾಳದಲ್ಲಿ ಇದುವರೆಗೂ ಅಂಫಾನ್ ಚಂಡಮಾರುತಕ್ಕೆ 72 ಮಂದಿ ಬಲಿಯಾಗಿದ್ದಾರೆ. ಕೊಲ್ಕತ್ತಾ ನಗರದಲ್ಲಿಯೇ 15 ಮಂದಿ ಸಾವಿಗೀಡಾಗಿದ್ದಾರೆ. ಅಪಾರ ಪ್ರಮಾಣದ ಆಸ್ತಿ […]
ಪಶ್ಚಿಮ ಬಂಗಾಳ: ಕೊಲ್ಕತ್ತಾದ ಈಶಾನ್ಯ ದಿಕ್ಕಿಗೆ 110ಕಿ.ಮಿ. ದೂರದಲ್ಲಿ ಕೇಂದ್ರೀಕೃತವಾಗಿರುವ ಅಂಫಾನ್ ಚಂಡಮಾರುತವು ಈಶಾನ್ಯ ದಿಕ್ಕಿನಲ್ಲಿ ಚಲಿಸುತ್ತಾ, ಭಾರತದ ಗಡಿಯನ್ನು ದಾಟಿ ಬಾಂಗ್ಲಾದತ್ತ ಸಾಗುತ್ತಿದೆ. ಈ ಮಧ್ಯೆ, ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಅಂಫಾನ್ ಆರ್ಭಟಕ್ಕೆ ಹತ್ತಾರು ಮಂದಿ ಸಾವನ್ನಪ್ಪಿದ್ದಾರೆ. ಕೊಲ್ಕತ್ತಾ ಏರ್ಪೋರ್ಟ್ಗೆ ನೀರು ನುಗ್ಗಿದ್ದು, ಸಂಪೂರ್ಣವಾಗಿ ಜಲಾವೃತವಾಗಿದೆ.
ಅಂಫಾನ್ ಚಂಡಮಾರುತಕ್ಕೆ 72 ಬಲಿ: ಪಶ್ಚಿಮ ಬಂಗಾಳದಲ್ಲಿ ಇದುವರೆಗೂ ಅಂಫಾನ್ ಚಂಡಮಾರುತಕ್ಕೆ 72 ಮಂದಿ ಬಲಿಯಾಗಿದ್ದಾರೆ. ಕೊಲ್ಕತ್ತಾ ನಗರದಲ್ಲಿಯೇ 15 ಮಂದಿ ಸಾವಿಗೀಡಾಗಿದ್ದಾರೆ. ಅಪಾರ ಪ್ರಮಾಣದ ಆಸ್ತಿ ಪಾಸ್ತಿ ಹಾನಿಗೊಂಡಿದೆ. ಅಂಫಾನ್ ಚಂಡಮಾರುತದಿಂದ ಅಪಾರ ಪ್ರಮಾಣದ ಆಸ್ತಿ ಪಾಸ್ತಿ ಹಾನಿ ಮತ್ತು ಜೀವ ಹಾನಿ ಹಿನ್ನೆಲೆ ಪ್ರಧಾನಿ ಮೋದಿ ಹಾನಿಗೀಡಾದ ಸ್ಥಳಗಳಿಗೆ ಭೇಟಿ ನೀಡಬೇಕೆಂದು ಪ.ಬಂಗಾಳ ಸಿ.ಎಂ. ಮಮತಾ ಬ್ಯಾನರ್ಜಿ ಒತ್ತಾಯ ಮಾಡಿದ್ದಾರೆ.
Published On - 1:56 pm, Thu, 21 May 20