ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ (Akhilesh Yadav) ಅವರ ಆಪ್ತರಾಗಿರುವ ಸಮಾಜವಾದಿ ಪಕ್ಷದ ನಾಯಕ ರಾಜೀವ್ ರೈ (Rajeev Rai) ಅವರ ಮನೆಯ ಮೇಲೆ ಇಂದು ಬೆಳಗ್ಗೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ, ಶೋಧ ನಡೆಸಿದ್ದಾರೆ. ವಾರಣಾಸಿಯಿಂದ ಆಗಮಿಸಿದ ಆದಾಯ ತೆರಿಗೆ ಇಲಾಖೆಯ ತಂಡವೊಂದು ಇಂದು ಬೆಳಗ್ಗೆ ಪೂರ್ವ ಉತ್ತರ ಪ್ರದೇಶದ ಮೌ ಜಿಲ್ಲೆಯ ರಾಜೀವ್ ರೈ ಅವರ ಮನೆಯಲ್ಲಿ ಶೋಧ ಕೈಗೊಂಡಿದೆ. ಉತ್ತರ ಪ್ರದೇಶ ಚುನಾವಣೆಯ ಹಿನ್ನೆಲೆಯಲ್ಲಿ ಈ ದಾಳಿ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ರಾಜೀವ್ ರೈ ಸಮಾಜವಾದಿ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿಯಾಗಿದ್ದಾರೆ. 2012ರ ಚುನಾವಣೆಯಲ್ಲಿನ ಯಶಸ್ಸಿಗೆ ಅವರು ಪ್ರಮುಖ ಕಾರಣ ಎಂದು ವ್ಯಾಖ್ಯಾನಿಸಲಾಗಿದ್ದು, 2014ರಲ್ಲಿ ಘೋಸಿ ಕ್ಷೇತ್ರದಿಂದ ಲೋಕಸಭೆಗೆ ಅಭ್ಯರ್ಥಿಯಾಗಿದ್ದರು.
ದಾಳಿಯ ಕುರಿತು ಎಎನ್ಐ ಹಂಚಿಕೊಂಡಿರುವ ಮಾಹಿತಿ:
Mau: An Income Tax raid is underway at the residence of national secretary of Samajwadi Party (SP), Rajeev Rai.
Raids are underway at a few more locations at the premises of people of SP chief Akhilesh Yadav. More details are awaited. pic.twitter.com/yJIDwC75qF
— ANI UP (@ANINewsUP) December 18, 2021
ಯಾದವ್ ಕುಟುಂಬದ ಭದ್ರಕೋಟೆಯಾದ ಮೈನ್‌ಪುರಿಯಲ್ಲಿ ಅಖಿಲೇಶ್ ಯಾದವ್ ಅವರ ಮತ್ತೊಬ್ಬ ಸಹಾಯಕನ ಮೇಲೆ ದಾಳಿ ಮಾಡಲಾಗಿದೆ. ಅಲ್ಲಿ ದಾಳಿಗೆ ಒಳಗಾದ ಮನೋಜ್ ಯಾದವ್ ಆರ್ ಸಿಎಲ್ ಗ್ರೂಪ್ ಎಂಬ ಕಂಪನಿಗಳ ಸಮೂಹದ ಪ್ರವರ್ತಕರಾಗಿದ್ದಾರೆ.
ದಾಳಿಯ ಕುರಿತು ಪ್ರತಿಕ್ರಿಯಿಸಿದ ರಾಜೀವ್ ರೈ:
ದಾಳಿಯ ಕುರಿತು ಪ್ರತಿಕ್ರಿಯಿಸಿರುವ ರಾಜೀವ್ ರೈ, ‘‘ಇದು ಐಟಿ ಇಲಾಖೆ! ನನಗೆ ಯಾವ ಕ್ರಿಮಿನಲ್ ಹಿನ್ನೆಲೆಯೂ ಇಲ್ಲ. ಜನರಿಗೆ ಸಹಾಯ ಮಾಡುತ್ತಿದ್ದೆ, ಅದು ಸರ್ಕರಕ್ಕೆ ಇಷ್ಟವಾಗಲಿಲ್ಲ. ಅದಕ್ಕೆ ದಾಳಿ ನಡೆಸಲಾಗಿದೆ. ಅವರು ವಿಡಿಯೋ ಮಾಡಿ, ಕೇಸು ದಾಖಲಿಸುತ್ತಾರೆ. ಸುಮ್ಮನೆ ಇದರ ವಿರುದ್ಧ ಗುದ್ದಾಡಬೇಕು’’ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
This is IT dept. I’ve no criminal background or black money. I help people & Govt didn’t like it. This is a result of that. If you do anything, they’ll make a video, register an FIR, you’ll fight a case unnecessarily. There is no use let procedure complete: Rajeev Rai, SP leader pic.twitter.com/Bn4hcs1ozm
— ANI UP (@ANINewsUP) December 18, 2021
ಅಖಿಲೇಶ್ ಯಾದವ್ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ ಕಾರ್ಯಯೋಜನೆಗಳೂ ಸೇರಿದಂತೆ ಸರ್ಕಾರದ ನಡೆಯನ್ನು ಟೀಕಿಸಿದ್ದರು. ಜತೆಗೆ, ಆ ಎಲ್ಲಾ ಅಭಿವೃದ್ಧಿ ಯೋಜನೆಗಳು ತಮ್ಮ ಅಧಿಕಾರಾವಧಿಯಲ್ಲಿ ಆರಂಭವಾಗಿದ್ದವು ಎಂದು ಅವರು ಹೇಳಿಕೊಂಡಿದ್ದರು. ಇದು ಚುನಾವಣಾ ಹೇಳಿಕೆ ಎಂದು ಬಿಜೆಪಿ ಟೀಕಿಸಿತ್ತು. ಉತ್ತರ ಪ್ರದೇಶ ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಇದೀಗ ಅಖಿಲೇಶ್ ಆಪ್ತರ ಮೇಲೆ ನಡೆದಿರುವ ಐಟಿ ದಾಳಿ ರಾಜಕೀಯ ತಿರುವು ಪಡೆಯುವ ಲಕ್ಷಣ ಗೋಚರಿಸಿದೆ.
ಇದನ್ನೂ ಓದಿ:
ಐಎಎಸ್ ಅಧಿಕಾರಿಗಳನ್ನು ಹುಟ್ಟುಹಾಕುವಲ್ಲಿ ಯಾವ ರಾಜ್ಯಗಳಿಗೆ ಎಷ್ಟನೇ ಸ್ಥಾನ? ಕುತೂಹಲಕಾರಿ ಅಂಕಿಅಂಶ ಇಲ್ಲಿದೆ
Published On - 10:58 am, Sat, 18 December 21