ಈ ಫೋಟೋ ನೋಡಿ..ಇವರೊಬ್ಬರು ಭಾರತದ ಖ್ಯಾತ ಉದ್ಯಮಿ. ಸಾಮಾಜಿಕ ಜಾಲತಾಣಗಳಲ್ಲಿ ತುಂಬ ಸಕ್ರಿಯರಾಗಿರುತ್ತಾರೆ. ಪರೋಪಕಾರಿಯೂ ಹೌದು. ಇವರ ಅದೆಷ್ಟೋ ಒಳ್ಳೆಯ ಕಾರ್ಯಗಳನ್ನು ದೇಶದ ಜನರು ಮೆಚ್ಚಿಕೊಂಡಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ನಲ್ಲಿ ಸದಾ ಒಂದಿಲ್ಲೊಂದು ಉಲ್ಲಾಸಭರಿತ, ಮನಸಿಗೆ ಮುದ ಕೊಡುವ ವಿಡಿಯೋ, ಫೋಟೋಗಳನ್ನು ಶೇರ್ ಮಾಡಿಕೊಂಡು ತಮ್ಮ ಫಾಲೋವರ್ಸ್ನ್ನು ಖುಷಿಯಾಗಿಡುವ ಈ ಉದ್ಯಮಿ ಇದೀಗ ತಮ್ಮದೇ ಫೋಟೋ ಹಂಚಿಕೊಂಡು ಒಂದು ಹೊಸ ವಿಷಯ ಹೇಳಿದ್ದಾರೆ. ನಿಮಗೆ ಗೊತ್ತಾಯಿತಾ ಈ ವ್ಯಕ್ತಿ ಯಾರೆಂದು?
ಹಾಗೊಮ್ಮೆ ಗೊತ್ತಾಗದೆ ಇದ್ದರೆ ನಾವೇ ಹೇಳುತ್ತೇವೆ..ಇವರು ಬೇರೆ ಯಾರೂ ಅಲ್ಲ. ಮುಂಬೈನ ಉದ್ಯಮಿ ಆನಂದ್ ಮಹೀಂದ್ರಾ. ತಮ್ಮ ಹಳೇ ಫೋಟೋವೊಂದನ್ನು ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ನಾನು ಚಲನಚಿತ್ರ ನಿರ್ದೇಶಕ ಆಗಬೇಕು ಎಂದುಕೊಂಡಿದ್ದೆ. ಅದಕ್ಕನುಗುಣವಾಗಿ ನಾನು ಕಾಲೇಜಿನಲ್ಲೂ ವಿದ್ಯಾಭ್ಯಾಸ ಮಾಡಿದೆ. ಆ ತರಬೇತಿಯ ಒಂದು ಭಾಗವಾಗಿ ಇಂದೋರ್ನ ಸಮೀಪ ಒಂದು ದುರ್ಗಮ ಹಳ್ಳಿಯಲ್ಲಿ ಸಾಕ್ಷ್ಯಚಿತ್ರವನ್ನು ಶೂಟಿಂಗ್ ಮಾಡುವಾಗ ತೆಗೆದ ನನ್ನ ಫೋಟೋ ಇದು. ಆಗ ನಾನು 16 ಎಂಎಂ ಕ್ಯಾಮರಾ ಬಳಸಿದ್ದೆ. ಆದರೆ ಯಾರಾದರೂ ಆ ಕಾಲದವರು ಇದ್ದರೆ ನಾನು 16 ಎಂಎಂನ ಯಾವ ಕ್ಯಾಮರಾ ಬಳಸಿದ್ದೆ ಎಂದು ಹೇಳಬಲ್ಲಿರಾ ಎಂದು ಪ್ರಶ್ನಿಸಿದ್ದಾರೆ. ಹಾಗೇ, ನಾನು 77 ಕುಂಭಮೇಳ ಎಂಬ ಸಿನಿಮಾ ಪ್ರಬಂಧವನ್ನೂ ಬರೆದಿದ್ದೆ ಎಂದು ತಿಳಿಸಿದ್ದಾರೆ. ಅವರು ತಮ್ಮ ಥ್ರೋಬ್ಯಾಕ್ ಫೋಟೋ ಶೇರ್ ಮಾಡುತ್ತಿದ್ದಂತೆ ಅದು ತುಂಬ ವೈರಲ್ ಆಗುತ್ತಿದೆ. ಆಗಲೇ ತುಂಬ ಚೆನ್ನಾಗಿದ್ದಿರಿ..ನಿಮ್ಮ ಹೇರ್ ಸ್ಟೈಲ್ ಚೆನ್ನಾಗಿತ್ತು ಎಂಬಿತ್ಯಾದಿ ಕಮೆಂಟ್ಗಳನ್ನೂ ನೆಟ್ಟಿಗರು ಕೊಟ್ಟಿದ್ದಾರೆ.
Easy to answer this. I wanted to be a filmmaker & was studied film in college. My thesis was a film I made at the ‘77 Kumbh Mela. But this pic was while shooting a documentary in a remote village near Indore. Anyone old enough to guess which handheld 16mm camera I was using? https://t.co/xmLuuLrv3A pic.twitter.com/oKCddQFyGf
— anand mahindra (@anandmahindra) January 20, 2022
ಇದನ್ನೂ ಓದಿ: ICC Men Test Team: ಐಸಿಸಿ ಟೆಸ್ಟ್ ತಂಡ ಪ್ರಕಟ: ಟೀಮ್ ಇಂಡಿಯಾದ ಮೂವರಿಗೆ ಸ್ಥಾನ