ಬ್ರಿಟನ್ ಪ್ರಧಾನಿಯಾಗಿ ಭಾರತ ಮೂಲದ ರಿಷಿ ಸುನಕ್ ಆಯ್ಕೆಯಾಗಿರುವ ಕುರಿತು ಉದ್ಯಮಿ ಆನಂದ್ ಮಹೀಂದ್ರಾ ಅವರು ಮಾಡಿರುವ ಟ್ವೀಟ್ ಈಗ ಎಲ್ಲೆಡೆ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಈ ಟ್ವೀಟ್ ಹಿಂದೆ ಭಾರತೀಯರನ್ನು ನಿಷ್ಪ್ರಯೋಜಕ ಎಂದಿದ್ದ ಚರ್ಚಿಲ್ ಹಾಗೂ ನಂತರದ ಹಲವು ಬ್ರಿಟಿಷ್ ನಾಯಕರಿಗೆ ನೀಡಿದ ತಿರುಗೇಟು ಎಂದೇ ಹೇಳಬಹುದು.
1947ರಲ್ಲಿ ಭಾರತ ಸ್ವಾತಂತ್ರ್ಯದ ಸಂದರ್ಭದಲ್ಲಿ ಬ್ರಿಟಿಷ್ ಪ್ರಧಾನಿಯಾಗಿದ್ದ ವಿನ್‌ಸ್ಟಂಟ್ ಚರ್ಚಿಲ್ ಹೇಳಿದ ಮಾತನ್ನೇ ಹೇಳಿದ ಆನಂದ್ ಮಹೀಂದ್ರಾ, ಬ್ರಿಟಿಷರಿಗೆ ತಿರುಗೇಟು ನೀಡಿದ್ದಾರೆ. 1947ರಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟ ತೀವ್ರಗೊಂಡಿತು.
ಈ ವೇಳೆ ಚರ್ಚಿಲ್, ಎಲ್ಲಾ ಭಾರತೀಯ ನಾಯಕರು ಕಡಿಮೆ ಸಾಮರ್ಥ್ಯ ಹೊಂದಿದ್ದಾರೆ. ಇಷ್ಟೇ ಅಲ್ಲ ದೇಶ ಮುನ್ನಡೆಸುವ ಶಕ್ತಿ ಇಲ್ಲದವರಾಗಿದ್ದಾರೆ ಎಂದಿದ್ದರು. 75ನೇ ವರ್ಷದ ಸ್ವಾತಂತ್ರ್ಯೋತ್ಸವದಲ್ಲಿ ಇದೀಗ ಭಾರತೀಯ ಮೂಲದ ವ್ಯಕ್ತಿ ಬ್ರಿಟನ್ ಪ್ರಧಾನಿಯಾಗಿದ್ದಾರೆ ಎಂದು ಆನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದಾರೆ.
ವಿಶ್ವದ ಪ್ರಮುಖ ಕಾರ್ಪೋರೇಟ್ ಕ್ಷೇತ್ರದ ಮುಖ್ಯಸ್ಥರು ಭಾರತೀಯರೇ ಆಗಿದ್ದಾರೆ, ಇದೀಗ ವಿಶ್ವದಲ್ಲೇ ಬಲಿಷ್ಠ ಎಂದು ಗುರುತಿಸಿಕೊಂಡಿರುವ ದೇಶಗಳ ಆಡಳಿತ ಇದೀಗ ಭಾರತೀಯರ ಕೈಗೆ ಸಿಗುತ್ತಿದೆ ಇದು ಹೆಮ್ಮೆಯ ವಿಚಾರ ಎಂದಿದ್ದಾರೆ.
ಈ ಹಿಂದೆ ಭಾರತದ ಮೇಲೆ ಹಲವು ದಾಳಿಗಳು ನಡೆದಿವೆ, ಕೆಲವರು ದೇಶವನ್ನು ಕೊಳ್ಳೆ ಹೊಡೆದರು, ಇನ್ನೂ ಕೆಲವರು ಭಾರತವನ್ನು ನಿರ್ನಾಮ ಮಾಡಲು ಪ್ರಯತ್ನಿಸಿದರು ಆದರೆ ಅದು ಎಂದಿಗೂ ಸಾಧ್ಯವಾಗಲಿಲ್ಲ. ಭಾರತೀಯರ ಬುದ್ಧಿವಂತಿಕೆಯಿಂದಾಗಿ ಭಾರತ ಉತ್ತಮ ಸ್ಥಿತಿಯಲ್ಲಿಯೇ ಇದೆ.
ಭಾರತೀಯರ ಬುದ್ಧಿವಂತಿಕೆ, ಭಾರತೀಯರ ಸಾಮರ್ಥ್ಯದಿಂದ ಒಂದೊಂದು ದೇಶದ ಆಡಳಿತ ಚುಕ್ಕಾಣಿ ಅವರ ಕೈಗೆ ಬರುತ್ತಿದೆ.
ಈ ಮೂಲಕ ಆಧುನಿಕ ರೀತಿಯಲ್ಲಿ ಭಾರತ ಹಳೇ ಸೇಡನ್ನು ಯಾವುದೇ ದುರುದ್ದೇಶವಿಲ್ಲದೆ ತೀರಿಸಿಕೊಳ್ಳಲು ಪ್ರಯತ್ನಿಸುತ್ತದೆ ಎಂದು ತಮ್ಮ ಅಭಿಪ್ರಾಯವನ್ನು ಟ್ವಿಟ್ಟರ್ ಮೂಲಕ ಆನಂದ್ ಮಹೀಂದ್ರಾ ಹಂಚಿಕೊಂಡಿದ್ದಾರೆ.
ದೇಶದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ