ಅನಂತನಾಗ್: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ (Anantnag) ಜಿಲ್ಲೆಯಲ್ಲಿ ಗುರುವಾರ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ನಿಷೇಧಿತ ಹಿಜ್ಬುಲ್ ಮುಜಾಹಿದ್ದೀನ್ (HM) ಭಯೋತ್ಪಾದಕ ಸಂಘಟನೆಯ ಇಬ್ಬರು ಉಗ್ರರು (Terrorists) ಹತರಾಗಿದ್ದಾರೆ. ಈ ಬಗ್ಗೆ ಕಾಶ್ಮೀರ ಪೊಲೀಸ್ ಮಹಾನಿರೀಕ್ಷಕ (ಐಜಿಪಿ) ವಿಜಯ್ ಕುಮಾರ್ ಮಾತನಾಡಿದ್ದು, ಸಾವನ್ನಪ್ಪಿದ ಉಗ್ರರನ್ನು ಹಿಜ್ಬುಲ್ ಸಂಘಟನೆಯ (Hizb-ul-Mujahideen) ಜುನೈದ್ ಮತ್ತು ಬಸಿತ್ ಭಟ್ ಎಂದು ಗುರುತಿಸಲಾಗಿದೆ ಎಂದಿದ್ದಾರೆ.
2021ರಲ್ಲಿ ಅನಂತ್‌ನಾಗ್‌ನಲ್ಲಿ ಬಿಜೆಪಿಯ ಸರಪಂಚ್ ಗುಲಾಮ್ ರಸೂಲ್ ದಾರ್ ಮತ್ತು ಅವರ ಪತ್ನಿಯ ಹತ್ಯೆಯಲ್ಲಿ ಉಗ್ರ ಬಸಿತ್ ಭಟ್ ಭಾಗಿಯಾಗಿದ್ದ ಎಂದು ಕಾಶ್ಮೀರ ಐಜಿಪಿ ಹೇಳಿದ್ದಾರೆ.
ಗುರುವಾರ ಸಂಜೆ ಅನಂತನಾಗ್‌ನ ಕೋಕರ್‌ನಾಗ್ ಪ್ರದೇಶದ ಹಂಗಲ್‌ಗುಂಡ್‌ನಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಎನ್‌ಕೌಂಟರ್ ನಡೆಯಿತು. ಹತ್ಯೆಗೀಡಾದ ಭಯೋತ್ಪಾದಕರನ್ನು ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆಯ ಜುನೈದ್ ಮತ್ತು ಬಸಿತ್ ಭಟ್ ಎಂದು ಗುರುತಿಸಲಾಗಿದೆ. 9/8/21ರಲ್ಲಿ ಅನಂತನಾಗ್‌ನಲ್ಲಿ ಬಿಜೆಪಿಯ ಸರಪಂಚ್ ರಸೂಲ್ ದಾರ್ ಮತ್ತು ಅವರ ಪತ್ನಿಯ ಹತ್ಯೆಯಲ್ಲಿ ಭಯೋತ್ಪಾದಕ ಬಸಿತ್ ಭಾಗಿಯಾಗಿದ್ದ ಎಂದು ಕಾಶ್ಮೀರ ವಲಯ ಪೊಲೀಸರು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: Srinagar Encounter: ಶ್ರೀನಗರದಲ್ಲಿ ಸಿಆರ್ಪಿಎಫ್ ಸಿಬ್ಬಂದಿ ಮೇಲೆ ದಾಳಿ ಮಾಡಿದ್ದ ಇಬ್ಬರು ಪಾಕಿಸ್ತಾನಿ ಉಗ್ರರ ಎನ್‌ಕೌಂಟರ್
ಕಳೆದ ವರ್ಷ ಆಗಸ್ಟ್ 9ರಂದು ಜಮ್ಮು ಮತ್ತು ಕಾಶ್ಮೀರದ ಅನಂತನಾಗ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಬಿಜೆಪಿಯ ಸರಪಂಚ್ ಗುಲಾಮ್ ರಸೂಲ್ ದಾರ್, ಅವರ ಪತ್ನಿಯನ್ನು ಬಂದೂಕುಧಾರಿಗಳು ಗುಂಡಿಕ್ಕಿ ಕೊಂದಿದ್ದರು. ಅನಂತ್‌ನಾಗ್‌ನ ಲಾಲ್‌ಚೌಕ್‌ನಲ್ಲಿ ದಾರ್‌ನ ಬಾಡಿಗೆ ನಿವಾಸದೊಳಗೆ ಭಯೋತ್ಪಾದಕರು ನುಗ್ಗಿ ಪಿಸ್ತೂಲಿನಿಂದ ಮನಬಂದಂತೆ ಗುಂಡು ಹಾರಿಸಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:58 am, Fri, 17 June 22