ಆಂಧ್ರಪ್ರದೇಶ ಸರ್ಕಾರವು ಮಹಿಳೆಯರಿಗಾಗಿ ಅದರಲ್ಲೂ ಐಟಿ ವಲಯದಲ್ಲಿ ಕೆಲಸ ಮಾಡುವ ಮಹಿಳೆಯರಿಗಾಗಿ ವರ್ಕ್ ಫ್ರಂ ಹೋಂ ನೀತಿಯನ್ನು ಜಾರಿಗೆ ತರಲು ಸರ್ಕಾರ ಮುಂದಾಗಿದೆ. ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಈ ಕುರಿತು ಮಾಹಿತಿ ನೀಡಿದ್ದಾರೆ. ಕೋವಿಡ್ 19 ಸಮಯದಲ್ಲಿ ಕೆಲಸದ ಸಂಸ್ಕೃತಿ ಬದಲಾಗಿರುವುದನ್ನು ಉಲ್ಲೇಖಿಸಿರುವ ಅವರು ತಂತ್ರಜ್ಞಾನದ ಲಭ್ಯತೆಯು ಮನೆಯಿಂದಲೇ ಕೆಲಸ ಮಾಡುವ ಪರಿಕಲ್ಪನೆಯನ್ನು ಉತ್ತೇಜಿಸಿದೆ ಎಂದು ಹೇಳಿದರು.
ಆಂಧ್ರಪ್ರದೇಶ ಐಟಿ ಮತ್ತು ಜಿಸಿಸಿ ನೀತಿ 4.0 ಅಡಿಯಲ್ಲಿ, ಸರ್ಕಾರವು ಪ್ರತಿ ನಗರ, ಪಟ್ಟಣ ಮತ್ತು ಮಂಡಲಗಳಲ್ಲಿ ಐಟಿ ಕಚೇರಿಗಳನ್ನು ಸ್ಥಾಪಿಸಲು ಡೆವಲಪರ್‌ಗಳನ್ನು ಪ್ರೋತ್ಸಾಹಿಸುತ್ತಿದೆ. ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸಲು ಐಟಿ ಮತ್ತು ಜಿಸಿಸಿ ಸಂಸ್ಥೆಗಳಿಗೆ ಇದು ಬೆಂಬಲವನ್ನು ನೀಡುತ್ತಿದೆ. ಈ ಉಪಕ್ರಮವು ವಿಶೇಷವಾಗಿ ಮಹಿಳಾ ವೃತ್ತಿಪರರ ಉದ್ಯೋಗಿಗಳ ಭಾಗವಹಿಸುವಿಕೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ, ಅವರು ಹೊಂದಿಕೊಳ್ಳುವ ರಿಮೋಟ್ ಅಥವಾ ಹೈಬ್ರಿಡ್ ಕೆಲಸದ ಆಯ್ಕೆಗಳಿಂದ ಪ್ರಯೋಜನ ಪಡೆಯುತ್ತಾರೆ.
Covid-19 ಸಾಂಕ್ರಾಮಿಕದ ನಂತರ, ಮನೆಯಿಂದ ಕೆಲಸ ಮಾಡುವುದು (WFH) ಯೋಜನೆಯು ದೇಶಾದ್ಯಂತ ಸ್ವೀಕಾರಾರ್ಹ ಪ್ರವೃತ್ತಿಯಾಗಿದೆ. ಆದರೆ ಇನ್ನು ಸಹ ಕೆಲವು ಸಂಸ್ಥೆಗಳು ಹೈಬ್ರಿಡ್ ಮಾದರಿಯನ್ನೇ ಅನುಸರಿಸುತ್ತಿವೆ ಎಂದಿದ್ದಾರೆ. ಇದೇ ವೇಳೆ ಹಲವು ಸಂಸ್ಥೆಗಳು ವರ್ಕ್ ಫ್ರಮ್ ಹೋಮ್ ಯೋಜನೆ ಜಾರಿ ಮಾಡುವುದರೊಂದಿಗೆ ಒಳ್ಳೆಯ ಸಂಬಳ ಕೊಟ್ಟು ಉತ್ತಮ ಕೆಲಸವನ್ನು ಪಡೆಯಬಹುದಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಮತ್ತಷ್ಟು ಓದಿ: ತಾನು ಮಾಡಿದ ಪ್ರತಿಜ್ಞೆಯಂತೆ 31 ತಿಂಗಳ ನಂತರ ಆಂಧ್ರ ಸಿಎಂ ಆಗಿಯೇ ವಿಧಾನಸಭೆಗೆ ಬಂದ ಚಂದ್ರಬಾಬು ನಾಯ್ಡು
ಅವಿಭಜಿತ ಆಂಧ್ರ ಪ್ರದೇಶದಲ್ಲಿ ಐಟಿ ಕ್ರಾಂತಿಗೆ ಕಾರಣವಾಗಿದ್ದ ಚಂದ್ರಬಾಬು ನಾಯ್ಡು ಅವರಿಂದ ಬಂದಿರುವ ಹೇಳಿಕೆಯು ಸದ್ಯ ಸಂಚಲನ ಮೂಡಿಸಿದೆ. ಇನ್ನು ಇದೇ ವೇಳೆ ಆಂಧ್ರ ಪ್ರದೇಶ ಸರ್ಕಾರವು ರಾಜ್ಯದಲ್ಲಿ ವರ್ಕ್ ಫ್ರಮ್ ಆಫೀಸ್ ಯೋಜನೆಯ ಕಾರಣದಿಂದ ಕೆಲಸದಿಂದ ಹೊರಗುಳಿದಿರುವ ಅಥವಾ ಕಡಿಮೆ ಸಂಬಳ ಪಡೆಯುತ್ತಿರುವ ಮಹಿಳೆಯರಿಗೆ ಸಹಾಯ ಮಾಡುವುದ್ದಕ್ಕಾಗಿ ಪ್ರಾಯೋಗಿಕ ಉದ್ಯೋಗ-ಆಧಾರಿತ ಕೌಶಲ್ಯವನ್ನು ನಿಮ್ಮ ಮನೆ ಬಾಗಿಲಿಗೆ ತರುಲು ಯೋಜನೆ ರೂಪಿಸಲಾಗುತ್ತಿದೆ ಎನ್ನಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ